ಇಪಿಎಫ್‌ ಫಂಡ್‌ನಿಂದ ನೀವು ಎಲ್‌ಐಸಿ ಪಾಲಿಸಿ ಪ್ರೀಮಿಯಂ ಕೂಡ ಕಟ್ಟಬಹುದು..! ಏನ್‌ ಮಾಡ್ಬೇಕು ಅನ್ನೋದನ್ನ ತಿಳಿದುಕೊಳ್ಳಿ!

By Santosh Naik  |  First Published Aug 16, 2024, 8:30 PM IST

premium Of LIC policy Pay by EPF fund ನೀವು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಇಪಿಎಫ್‌ಓಗೆ ಕೊಡುಗೆ ನೀಡುತ್ತಿದ್ದರೆ, ನೀವು ಇಪಿಎಫ್‌ ನಿಧಿಯಿಂದ ನಿಮ್ಮ ಎಲ್‌ಐಸಿ ಪ್ರೀಮಿಯಂಅನ್ನು ಪಾವತಿ ಮಾಡಬಹುದು. ಇದಕ್ಕೆ ಮಾಡಬೇಕಾಗಿರೋದನು ಅನ್ನೋದನ್ನ ತಿಳಿದುಕೊಳ್ಳಿ.
 


ಬೆಂಗಳೂರು (ಆ.16): ದೀರ್ಘಕಾಲದ ಹೂಡಿಕೆಗೆ ಹೆಚ್ಚಿನವರು ಎಲ್‌ಐಸಿ ಪಾಲಿಸಿಯನ್ನು ಖರೀದಿ ಮಾಡಿರುತ್ತಾರೆ. ಇದರ ಪ್ರೀಮಿಯಂಗಳನ್ನು ಕಾಲಕಾಲಕ್ಕೆ ಕಟ್ಟಬೇಕಾಗಿರುತ್ತದೆ. ಇದರಲ್ಲಿ ನಿಮಗೆ ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ ಹಾಗೂ ವಾರ್ಷಿಕವಾಗಿ ಪ್ರೀಮಿಯಂ ಕಟ್ಟುವ ಪದ್ದತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.  ನೀವು ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿದ್ದರೆ, ಪ್ರೀಮಿಯಂ ಮೊತ್ತ ಕೂಡ ಹೆಚ್ಚಾಗಿರುತ್ತದೆ. ಆದರೆ, ಎಲ್ಲರ ಜೀವನದಲ್ಲೂ ಕಷ್ಟ ಬರೋದು ಸಾಮಾನ್ಯ. ಅತೀವ ಹಣದ ಕೊರತೆ ಎದುರಾದಾಗ, ಮನೆಯ ಖರ್ಚನ್ನು ಸಹ ಕಷ್ಟದಿಂದ ನಿಭಾಯಿಸುವ ಪರಿಸ್ಥಿತಿ ಎದುರಾಗುತ್ತದೆ. ಇಂಥ ಟೈಮ್‌ನಲ್ಲಿ ಒಂದು ಎಲ್‌ಐಸಿ ಪ್ರೀಮಿಯಂ ಕಟ್ಟೋದು ಕೂಡ ನಮ್ಮ ಪಾಲಿಗೆ ಕಷ್ಟವಾಗಿ ಬಿಡುತ್ತದೆ. ಆದರೆ ನೀವು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಪ್ರತಿ ತಿಂಗಳು ಇಪಿಎಫ್‌ಓ​​ಗೆ ಕೊಡುಗೆ ನೀಡುತ್ತಿದ್ದರೆ, ಇಪಿಎಫ್‌ನ ನಿಧಿಯಿಂದ ನಿಮ್ಮ ಪ್ರೀಮಿಯಂ ಅನ್ನು ಪಾವತಿಸಬಹುದು. ಇದಕ್ಕಾಗಿ, ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ನಿಮ್ಮ ಇಪಿಎಫ್‌ ಖಾತೆಯನ್ನು ಎಲ್‌ಐಸಿ ಪಾಲಿಸಿಯೊಂದಿಗೆ ಲಿಂಕ್ ಮಾಡಬೇಕು. ಇದನ್ನು ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ.

ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರಾಗಿದ್ದರೆ, ನಿಮ್ಮ ಇಪಿಎಫ್ ಖಾತೆಯ ಮೂಲಕ ನೀವು ಎಲ್ಐಸಿ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಇದಕ್ಕಾಗಿ, ನೀವು ಫಾರ್ಮ್ 14 ಅನ್ನು ಇಪಿಎಫ್‌ಒಗೆ ಸಲ್ಲಿಸಬೇಕಾಗುತ್ತದೆ. ಫಾರ್ಮ್ 14 ಅನ್ನು ಇಪಿಎಫ್‌ಒ ವೆಬ್‌ಸೈಟ್‌ನಿಂದ ಪಡೆಯಬಹುದು. ನಮೂನೆಯಲ್ಲಿ, ಪಾಲಿಸಿದಾರನು ಕೆಲವು ಡಿಕ್ಲೆರೇಷನ್‌ ಮತ್ತು ತನ್ನ ಎಲ್‌ಐಸಿ ಪಾಲಿಸಿಯ ಕೆಲವು ಪ್ರಮುಖ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅರ್ಜಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ಎಲ್ಐಸಿ ಪ್ರೀಮಿಯಂ ಹಣವನ್ನು ಪ್ರೀಮಿಯಂ ಪಾವತಿಯ ದಿನಾಂಕದಂದು ಅಥವಾ ಮೊದಲು ಇಪಿಎಫ್‌ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

Tap to resize

Latest Videos

undefined

- ಇಪಿಎಫ್‌ಓ ನೀಡುವ ಈ ಸೌಲಭ್ಯವು ಎಲ್‌ಐಸಿ ಪ್ರೀಮಿಯಂ ಪಾವತಿಯ ಮೇಲೆ ಮಾತ್ರ ಲಭ್ಯ.. ಬೇರೆ ಯಾವುದೇ ವಿಮಾ ಕಂಪನಿಯ ಪ್ರೀಮಿಯಂ ಪಾವತಿಗೆ ಇದನ್ನು ಬಳಸಲು ಸಾಧ್ಯವಿಲ್ಲ.

- ಇಪಿಎಫ್ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿಸುವ ಸೌಲಭ್ಯವನ್ನು ಪಡೆಯಲು, ಪಾಲಿಸಿದಾರರು ಕನಿಷ್ಠ ಎರಡು ವರ್ಷಗಳವರೆಗೆ ಇಪಿಎಫ್‌ಒ ಸದಸ್ಯರಾಗಿರಬೇಕು.

- ಫಾರ್ಮ್ ಅನ್ನು ಸಲ್ಲಿಸುವ ಸಮಯದಲ್ಲಿ ನಿಮ್ಮ ಇಪಿಎಫ್‌ ಖಾತೆಯಲ್ಲಿನ ಮೊತ್ತವು ನಿಮ್ಮ 2 ವರ್ಷಗಳ ಎಲ್‌ಐಸಿ ಪ್ರೀಮಿಯಂಗೆ ಕನಿಷ್ಠ ಸಮನಾಗಿರಬೇಕು.

EPFO Interest: ನಿವೃತ್ತಿ ವೇಳೆ 2.5 ಕೋಟಿ ರೂಪಾಯಿ ಬೇಕಾ? ಹಾಗಿದ್ರೆ ಪ್ರತಿ ತಿಂಗಳು ಸ್ಯಾಲರಿಯಲ್ಲ ಇಷ್ಟು ಮೊತ್ತ ಕಟ್‌ ಆಗ್ಬೇಕು!

ಇಪಿಎಫ್‌ಓ ಸದಸ್ಯರಿಗೆ ಫಾರ್ಮ್ 14 ಅನ್ನು ಇಪಿಎಫ್‌ಒ​​ಗೆ ಸಲ್ಲಿಸುವ ಮೂಲಕ ಪಿಎಫ್‌ನಿಂದ ಎಲ್‌ಐಸಿ ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸುವ ಸೌಲಭ್ಯವನ್ನು ಅನುಮತಿಸಲಾಗಿದೆ.

EPFO ತನ್ನ ಸದಸ್ಯರಿಗೆ ನೀಡುವ 7 ಬಗೆಯ ಮಾಸಿಕ ಪಿಂಚಣಿ ಯೋಜನೆಗಳ ಲಿಸ್ಟ್‌, ಇವುಗಳ ಬಗ್ಗೆ ನಿಮಗೆ ಗೊತ್ತಿರಲಿ..
 

click me!