
ಬೆಂಗಳೂರು(ಜು.28) ಬೆಂಗಳೂರು ಮೂಲದ ಎಜುಕೇಶನ್ ಟೆಕ್ ಕಂಪನಿ ಬೈಜುಸ್ ಸಂಕಷ್ಟ ಹೆಚ್ಚಾಗಿದೆ. ಉದ್ಯೋಗ ಕಡಿತ, ಇರುವ ಉದ್ಯೋಗಿಗಳ ಮೇಲೆ ಅತೀಯಾದ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪಗಳ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ಬಹಿರಂಗವಾಗಿದೆ. ಬೈಜುಸ್ ಇದೀಗ ತನ್ನ ಉದ್ಯೋಗಿಗಳಿಗೆ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಈ ಕುರಿತು ಮಹಿಳಾ ಉದ್ಯೋಗಿಯೊಬ್ಬರು ತಮಗಾಗಿರುವ ಅನ್ಯಾಯ ಹಾಗೂ ಅಸಹಾಯಕತೆಯನ್ನು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಉದ್ಯೋಗಿಗೆ ಕರೆ ಮಾಡಿ ಜುಲೈ 28ರೊಳಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ರಾಜೀನಾಮೆ ನೀಡಿದಿದ್ದರೆ ಈಗಾಗಲೇ ಕೆಲಸ ಮಾಡಿರುವ ವೇತನ, ಇನ್ಸೆಂಟೀವ್ ಸೇರಿದಂತೆ ಯಾವುದೇ ಸೆಟ್ಲಮೆಂಟ್ ಹಣ ಸ್ಥಗಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ ಘಟನೆಯನ್ನು ಮಹಿಳಾ ಉದ್ಯೋಗಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.
ಅಕಾಂಶ ಖೇಮಾ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಬೈಜುಸ್ ಮೀಟಿಂಗ್‌ನಲ್ಲಿ ರಾಜೀನಾಮೆ ನೀಡಬೇಕು ಎಂದು ನನಗೆ ಸೂಚಿಸಿದ್ದಾರೆ. ಜುಲೈ 28ರೊಳಗೆ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಆಗಸ್ಟ್ 1ಕ್ಕ ನಿಮ್ಮ ಸ್ಯಾಲರಿ ಕ್ರೆಟಿಡ್ ಆಗುವುದಿಲ್ಲ. ಇಷ್ಟೇ ಅಲ್ಲ ಇನ್ಸೆಂಟೀವ್ ಸೇರಿದಂತೆ ಯಾವುದೇ ಸೆಟ್ಲ್‌ಮೆಂಟ್ ಕೂಡ ಇರುವುದಿಲ್ಲ ಎಂದು ಮಹಿಳಾ ಉದ್ಯೋಗಿಗೆ ಸೂಚಿಸಲಾಗಿದೆ.
ಬಯಲಾಯ್ತು BYJU'S ಕೆಲಸದ ಸಂಸ್ಕೃತಿ, ಮ್ಯಾನೇಜರನ್ನು ತರಾಟೆಗೆ ತೆಗೆದ ಉದ್ಯೋಗಿ ವಿಡಿಯೋ ವೈರಲ್!
ನಿಮ್ಮ ಕೆಲಸ ತೃಪ್ತಿ ತಂದಿಲ್ಲ, ಜೊತೆಗೆ ಕಂಪನಿಯಲ್ಲಿ ನಡೆತೆಯೂ ಸರಿ ಇಲ್ಲ. ಹೀಗಾಗಿ ತಕ್ಷಣವೇ ರಾಜೀನಾಮೆ ನೀಡಿ ಎಂದು ಸೂಚಿಸಲಾಗಿದೆ. ನನ್ನ ಮನೆಯಲ್ಲಿ ನಾನೊಬ್ಬಳೆ ದುಡಿಯುತ್ತಿದ್ದೇನೆ. ನನ್ನ ಪತಿಗೆ ಆರೋಗ್ಯ ಸರಿ ಇಲ್ಲ. ನನ್ನ ಉದ್ಯೋಗ ನಂಬಿ ಸಾಲ ಮಾಡಿದ್ದೇನೆ. ಪ್ರತಿ ತಿಂಗಳು ಕಂತು ಕಟ್ಟಬೇಕು. ಏಕಾಏಕಿ ರಾಜೀನಾಮೆ ನೀಡುವಂತೆ ಘೋಷಣೆ ಮಾಡಿದರೆ ನಾವೇನು ಮಾಡುವುದು ಎಂದು ಮಹಿಳಾ ಉದ್ಯೋಗಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಹೆಚ್ಆರ್ ಸಂಪರ್ಕಿಸಿದರೆ, ಪರ್ಫಾಮೆನ್ಸ್, ನಡತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಹಾಗಾದರೆ ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು. ನನ್ನ ಆರ್ಥಿಕ ಸ್ಥಿತಿ, ಕುಟುಂಬ ಸ್ಥಿತಿ ಏನಾಗಲಿದೆ ಅನ್ನೋ ಆತಂಕ ಕಾಡುತ್ತಿದೆ ಎಂದು ಮಹಿಳಾ ಉದ್ಯೋಗಿ ಹೇಳಿದ್ದಾರೆ. ಬೈಜುಸ್ ಕಂಪನಿಗೆ ಸೇರಿಕೊಳ್ಳುವ ಸಂದರ್ಭದಲ್ಲಿ ವೇರಿಯೇಬಲ್ ಪಾವತಿ ಕುರಿತು ಭರವಸೆ ನೀಡಿದ್ದರು. ನೀಡಿರುವ ಆಫರ್ ಲೆಟರ್‌ನಲ್ಲೂ ಈ ಕುರಿತು ಉಲ್ಲೇಖಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ವೇರಿಯೇಬಲ್ ಪೇ ನೀಡಿಲ್ಲ. ವೇರಿಯೇಬಲ್ ಪೇ ನನಗೆ ನೀಡಿದ್ದರೆ,ನನ್ನ ಸಾಲ ಒಂದಷ್ಟು ಪಾವತಿಯಾಗುತ್ತಿತ್ತು ಎಂದು ಮಹಿಳಾ ಉದ್ಯೋಗಿ ತೋಡಿಕೊಂಡಿದ್ದಾರೆ.
ಕಂಪನಿ ಕನಿಷ್ಟ ತಿಂಗಳ ಮೊದಲೇ ನೋಟಿಸ್ ನೀಡಿದ್ದರೆ ನಾನು ಬೇರೆ ಕಡೆ ಕೆಲಸ ನೋಡಿಕೊಳ್ಳುತ್ತಿದ್ದೆ. ಕೆಲಸದಲ್ಲಿ ಇದ್ದು ಮತ್ತೊಂದು ಕೆಲಸ ಹುಡುಕುವುದು ಸುಲಭ. ಆದರೆ ಕೆಲಸ ಕಳೆದುಕೊಂಡು ಹೊಸ ಉದ್ಯೋಗ ಹುಡುಕುವುದು ಕಷ್ಟ. ಇಷ್ಟೇ ಅಲ್ಲ ಉದ್ಯೋಗದಿಂದ ತೆಗೆದು ಹಾಕಿದ ಬಳಿಕ ಯಾರೂ ಕೆಲಸ ಕೊಡುವುದಿಲ್ಲ. ಆದರೆ ಕಂಪನಿ ಕನಿಷ್ಠ ನಿಯಮವನ್ನೂ ಪಾಲಿಸಿಲ್ಲ ಎಂದಿದ್ದಾರೆ.
ಇ.ಡಿ ದಾಳಿ, ಆರ್ಥಿಕ ಸಂಕಷ್ಟ, ದುಬೈನಲ್ಲಿ ಹೂಡಿಕೆದಾರರ ಮುಂದೆ ಕಣ್ಣೀರಿಟ್ಟ ಬೈಜೂಸ್ ರವೀಂದ್ರನ್!
ನಾನು ಒಂದು ದಿನವೂ ರಜೆ ಪಡೆದುಕೊಂಡಿಲ್ಲ. ಕಂಪನಿಗಾಗಿ ಕೆಲಸ ಮಾಡಿದ್ದೇನೆ. ಇದೀಗ ನನಗೆ ನನ್ನ ವೇತನ ಬೇಕು, ಇನ್ಸಂಟೀವ್ ಬೇಕು, ನನ್ನ ವೇರಿಯೇಬಲ್ ಪೇ ನನಗೆ ಬೇಕು. ನನ್ನ ಎಲ್ಲಾ ಸೆಟ್ಲ್‌ಮೆಂಟ್ ಮಾಡಬೇಕು. ಕಾರಣ ಈ ಸಂದರ್ಭದಲ್ಲಿ ನನ್ನ ಕುಟುಂಬವನ್ನು ನೋಡಿಕೊಳ್ಳುವುದೇ ನನಗೆ ಅತೀ ದೊಡ್ಡ ಸವಾಲು. ಇದ್ಯಾವುದು ಸಿಗದಿದ್ದರೆ ಬದುಕು ಅಂತ್ಯಗೊಳಿಸುತ್ತೇನೆ ಎಂದು ವಿಡಿಯೋ ಮೂಲಕ ಮಹಿಳಾ ಉದ್ಯೋಗಿ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.