2 ತಿಂಗ್ಳಿಂದ ಒದ್ದಾಡಿದ್ರೂ ಕಂಪನಿ ನೋಂದಣಿ ಆಗಿಲ್ಲ, ಬೆಂಗಳೂರು ಸಹವಾಸ ಬೇಡ ಎಂದ ಸಿಇಒ!

Published : Jul 28, 2023, 12:51 PM ISTUpdated : Jul 28, 2023, 12:53 PM IST
2 ತಿಂಗ್ಳಿಂದ ಒದ್ದಾಡಿದ್ರೂ ಕಂಪನಿ ನೋಂದಣಿ ಆಗಿಲ್ಲ, ಬೆಂಗಳೂರು ಸಹವಾಸ ಬೇಡ ಎಂದ ಸಿಇಒ!

ಸಾರಾಂಶ

ಅಮೆರಿಕ ಹಾಗೂ ಭಾರತದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ 18 ವರ್ಷ ಕೆಲಸ ಮಾಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿ ತೆರೆಯಲು ಕಳೆದ 2 ತಿಂಗಳಿನಿಂದ ಓಡಾಡುತ್ತಿದ್ದಾರೆ. ಆದರೆ ಕಂಪನಿ ರಿಜಿಸ್ಟರ್ ಆಗಲೇ ಇಲ್ಲ. ಇದೀಗ ಭಾರವಾದ ಹೃದಯದೊಂದಿಗೆ ಮತ್ತೆ ಅಮೆರಿಕಾಗೆ ತೆರಳಿದ್ದಾರೆ.  

ಬೆಂಗಳೂರು(ಜು.28): ಸಿಲಿಕಾನ್ ಸಿಟಿ ಬೆಂಗಳೂರು ಸ್ಟಾರ್ಟ್ ಅಪ್ ತವರು. ಹಲವು ದಿಗ್ಗಜ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಉದ್ಯೋಗ ಅರಸಿ ಬಂದವರಿಗೆ, ಹೊಸ ಕಂಪನಿ ತೆರೆಯಬೇಕು ಎಂದವರಿಗೆ ಬೆಂಗಳೂರು ಸದಾ ಅವಕಾಶ ನೀಡಿದೆ. ಆದರೆ ಇತ್ತೀಚೆಗೆ ಸರ್ಕಾರದ ಧೋರಣೆ, ಅಧಿಕಾರಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರಗಳಿಂದ ಬೆಂಗಳೂರಿನ ಹೆಸರು ಕೆಡುತ್ತಿದೆ. ಇನ್ನು ಖಾಸಗಿ ಹೂಡಿಕೆದಾರು, ಸಂಭಾವ್ಯ ಗ್ರಾಹಕರು ಸೇರಿದಂತೆ ಇತರ ಕೆಲ ಸಮಸ್ಯೆಗಳನ್ನು ಎದರಿಸುತ್ತಿರುವ ಸಿಇಒಗಳಿಗೆ ಹೊಸ ಸವಾಲು ಎದುರಾಗಿದೆ. ಇದೀಗ ಬೆಂಗಳೂರು ಮೂಲಕ ಟೆಕ್ ಸ್ಟಾರ್ಟ್ಅಪ್ ಸಂಸ್ಥಾಪಕ ಹಾಗೂ ಸಿಇಒ ಬ್ರಿಜ್ ಸಿಂಗ್ ಭಾರವಾದ ಹೃದಯದಿಂದ ಬೆಂಗಳೂರಿನಿಂದ ಮತ್ತೆ ಅಮೆರಿಕಾಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿ ನೋಂದಣಿ ಮಾಡಲು ಕಳೆದ 2 ತಿಂಗಳಿನಿಂದ ಸತತ ಪ್ರಯತ್ನ ಪಟ್ಟ ಬ್ರಿಜ್ ಸಿಂಗ್ ಕೊನೆಗೂ ಕಂಪನಿ ರಿಜಿಸ್ಟರ್ ಆಗಲೇ ಇಲ್ಲ. ಹೀಗಾಗಿ ಮತ್ತೆ ಅಮೆರಿಕಾಗೆ ತೆರಳಿದ್ದಾರೆ. ಈ ವೇಳೆ ತಮಗಾಗಿರುವ ನೋವನ್ನು ಹಂಚಿಕೊಂಡಿದ್ದಾರೆ.

ಬ್ರಿಜ್ ಸಿಂಗ್ ತಂತ್ರಜ್ಞಾನ, ಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಹಾಗೂ ಭಾರತದಲ್ಲಿ ಕಳೆದ 18 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಅನುಭವದಿಂದ ಇದೀಗ ಬೆಂಗಳೂರಿನಲ್ಲಿ ಹೊಸ ಸ್ಟಾರ್ಟ್ ಅಪ್ ಕಂಪನಿ ತೆರೆಯಲು ಮುಂದಾಗಿದ್ದರು.ಆದರೆ ಬ್ರಿಜ್ ಸಿಂಗ್ ಪ್ರಯತ್ನ ಕೈಗೂಡಿಲ್ಲ. ಎರಡು ತಿಂಗಳಿಂದ ಬೆಂಗಳೂರಲ್ಲಿ ಕಂಪನಿ ರಿಡಿಸ್ಟರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮರಳಿ ಸ್ಯಾನ್‌ ಫ್ರಾನ್ಸಿಸ್ಕೋಗೆ ತೆರಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಬ್ರಿಜ್ ಸಿಂಗ್, ತಮ್ಮ ನೋವು ಹಂಚಿಕೊಂಡಿದ್ದಾರೆ.

ಬೆಂಗಳೂರು ಕಂಪೆನಿಯಲ್ಲಿ ಡಿಫರೆಂಟ್ ಜಾಬ್‌, ಜೋಕ್ ಮಾಡೋದಷ್ಟೇ ಕೆಲ್ಸ, ಭರ್ತಿ 1 ಲಕ್ಷ ರೂ. ಸಂಬಳ!

ನಾನು ಬೆಂಗಳೂರು ಹಾಗೂ ಭಾರತವನ್ನು ಪ್ರೀತಿಸುತ್ತೇನೆ. ಆದರೆ ಕಳೆದ 3 ದಿನ ಸ್ಯಾನ್ ಫ್ರಾನ್ಸಿಸ್ಕೋದ ಬೇ ಏರಿಯಾದಲ್ಲಿ ಕುಳಿತ ಹೆಚ್ಚಿನದನ್ನು ಕಲಿತಿದ್ದೇನೆ. ಕಾರಣ, ಬೆಂಗಳೂರಿನಲ್ಲಿ ಕಳೆದ 2 ತಿಂಗಳಿನಿಂದ ಕಂಪನಿ ನೋಂದಣಿ ಮಾಡಲು ಪ್ರಯತ್ನ ಪಟ್ಟಿದ್ದೇನೆ. ಆದರೆ ಇನ್ನೂ ಕಂಪನಿ ರಿಜಿಸ್ಟರ್ ಆಗಿಲ್ಲ. ಗ್ರಾಹಕರು, ಹೂಡಿಕೆದಾರರು, ಸಹ ಸಂಸ್ಥಾಪಕರ ಪ್ರತಿಕ್ರಿಯೆ ಭಿನ್ನ ಮಟ್ಟದಲ್ಲಿದೆ. ನನ್ನ ಸತತ ಪ್ರಯತ್ನಗಳ ಬಳಿಕ ಯಾವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ನನಗೆ ಮರಳಿ ಅಮೆರಿಕಾಗೆ ತೆರಳುವ ಸಮಯ ಬಂದಿದೆ. ಆದರೆ ಭಾರವಾದ ಹೃದಯದೊಂದಿಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಬ್ರಿಜ್ ಸಿಂಗ್ ಹೇಳಿದ್ದಾರೆ. 

 

 

ಉದ್ಯಮ ಆರಂಭಿಸಲು ಅತ್ಯುತ್ತಮ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದರ ಜೊತೆಗೆ ತೆಲಂಗಾಣ, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ, ತಮಿಳುನಾಡು ರಾಜ್ಯಗಳು ವಿಫುಲ ಅವಕಾಶಗಳನ್ನು ನೀಡುತ್ತಿದೆ. ಆದರೆ ಇತ್ತೀಚೆಗೆ ಹಲವು ಕಂಪನಿಗಳು ಹೂಡಿಕೆಗಳು ಕರ್ನಾಟಕ ಕೈತಪ್ಪಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಪಾಲಾಗಿದೆ. ಇದೀಗ ಬ್ರಿಜ್ ಸಿಂಗ್ ಕಂಪನಿ ನೋಂದಣಿ ಮಾಡಲು ಎದುರಾಗಿಸುವ ಸಮಸ್ಯೆ ಏನೂ ಏನ್ನೋದನ್ನು ಹಲವು ಟ್ವಿಟರ್ ಬಳಕೆದಾರರು ಕೇಳಿದ್ದಾರೆ.

ಸ್ಟಾರ್ಟಪ್‌ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ: ಐಟಿ ರಿಟರ್ನ್ಸ್ 24 ತಾಸುಗಳಲ್ಲಿ ಕ್ಲಿಯರ್‌!

ಬ್ರಿಜ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ನೋಂದಣಿಗೆ ತಡೆಯಾಗಲು ಸ್ಪಷ್ಟ ಕಾರಣ ಹೇಳಿಲ್ಲ. ಆದರೆ ಪ್ರಯತ್ನದ ಕುರಿತು ಹೇಳಿದ್ದಾರೆ. ಹೀಗಾಗಿ ಹಲವು ಬಳಕೆದಾರರು, ಅರ್ಜಿ ಸಲ್ಲಿಸಿದ ಕೆಲ ದಿನಗಳಲ್ಲೇ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ವಿಳಂಬವಾಗುವ ಸಾಧ್ಯತೆಗಳು ಕಡಿಮೆ. ಯಾವ ಕಾರಣಕ್ಕಾಗಿ ವಿಳಂಬವಾಗಿದೆ ಎಂದರೆ ಸೂಕ್ತ ಪರಿಹಾರ ಸೂಚಿಸಲು ಸಾಧ್ಯ ಎಂದು ಹಲವು ಪ್ರತಿಕ್ರಿಯೆ ನೀಡಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ