
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಫೆಬ್ರವರಿ 2) ಒಟ್ಟು 59 ಸಾವಿರಕ್ಕೂ ಹೆಚ್ಚು ಮೆಣಸಿನಕಾಯಿ ಚೀಲಗಳು ಆಗಮಿಸಿದ್ದು, ಹಿಂದಿನ ವಾರಗಳಿಗೆ ಹೋಲಿಸಿದರೆ ಆವಕದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ವಾರದಿಂದ ವಾರಕ್ಕೆ ಮೆಣಸಿನಕಾಯಿ ಆಮದು ಕಡಿಮೆಯಾಗುತ್ತಿರುವುದು ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದ ಗುರುವಾರವೂ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಮೆಣಸಿನಕಾಯಿ ಆವಕವಾಗಿರಲಿಲ್ಲ. ಆ ದಿನ ಕೇವಲ 45 ಸಾವಿರ ಚೀಲಗಳು ಮಾತ್ರ ಮಾರುಕಟ್ಟೆಗೆ ಬಂದಿದ್ದವು. ಸೋಮವಾರವೂ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಆವಕವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಪೂರೈಕೆಯಲ್ಲಿ ಸ್ಥಿರತೆ ಇಲ್ಲದಿರುವುದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಸೋಮವಾರದ ವಹಿವಾಟಿನಲ್ಲಿ ಡಬ್ಬಿತಳಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹75,000 ವರೆಗೆ ಮಾರಾಟವಾಗಿದ್ದು, ಉತ್ತಮ ಗುಣಮಟ್ಟದ ಮೆಣಸಿಗೆ ಬೇಡಿಕೆ ಹೆಚ್ಚಿರುವುದು ಸ್ಪಷ್ಟವಾಗಿದೆ.
ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿವಿಧ ತಳಿಗಳ ಮೆಣಸಿನಕಾಯಿ ಈ ಕೆಳಗಿನ ದರಗಳಲ್ಲಿ ವಹಿವಾಟು ಕಂಡಿವೆ:
ಅನಾವೃಷ್ಟಿ ಹಾಗೂ ಬೆಳೆ ಹಾನಿಯ ಪರಿಣಾಮವಾಗಿ ಪ್ರಮುಖ ಮೆಣಸಿನಕಾಯಿ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ, ಆವಕದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಮಳೆ ಕೊರತೆಯಿಂದ ಮೆಣಸಿನಕಾಯಿ ಬೆಳೆಗಾರಿಕೆ ಪ್ರದೇಶಗಳು ಕುಸಿದಿರುವುದು ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಇದರಿಂದಾಗಿ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಳಿಗಳ ಜೊತೆಗೆ ಗುಂಟೂರು ತಳಿಯ ಮೆಣಸಿನಕಾಯಿಗಳ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಒಣ ಮೆಣಸಿನಕಾಯಿ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆ ದರಗಳಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.