ಜೀವ ವಿಮಾ ನಿಗಮನದ ಐಪಿಓ ಮೂಲಕ ಭಾರತ ಸರ್ಕಾರ, ತನ್ನಲ್ಲಿದ್ದ ಶೇ.3.5ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ. ಎಲ್ ಐಸಿಯ ಒಟ್ಟಾರೆ 22.13 ಕೋಟಿ ಷೇರುಗಳು ಮಾರಾಟವಾಗಲಿದ್ದು, ಮೇ 4 ರಿಂದ 9ರವರೆಗೆ ಸಾರ್ವಜನಿಕರು ಎಲ್ ಐಸಿ ಐಪಿಓಗೆ ಸಾರ್ವಜನಿಕರು ಬಿಡ್ ಮಾಡಬಹುದಾಗಿದೆ. ಇದರ ನಡುವೆ ಎಲ್ ಐಸಿಯ ಗ್ರೇ ಮಾರ್ಕೆಟ್ ಪ್ರೈಸ್ (ಜಿಎಂಪಿ) ಅಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡಿದೆ.
ಬೆಂಗಳೂರು (ಏ.29): ದೇಶದ ಅತೀದೊಡ್ಡ ಜೀವ ವಿಮಾ ಕಂಪನಿ (life insurer) ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಮೂರು ದಿನಗಳ ಇನೀಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಓ) ಅನ್ನು ಮುಂದಿನ ವಾರ ಮಾಡಲಿದೆ. ಸಾರ್ವಜನಿಕರು ಕೂಡ ಎಲ್ ಐಸಿ (Life Insurance Corporation of India) ಕಂಪನಿಯ ಷೇರುಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಮೇ 4 ರಂದು ಆರಂಭವಾಗಲಿದ್ದು ಮೇ 9ಕ್ಕೆ ಕೊನೆಗಳ್ಳಲಿದೆ ಎಂದು ಕಂಪನಿ ತಿಳಿಸಿದೆ. ಪ್ರತಿ ಷೇರಿನ ಬೆಲೆ 902- 949 ರೂ. ನಿಗದಿ ಮಾಡಲಾಗಿದೆ.
ದೆಹಲಿಯಲ್ಲಿ LIC ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಕಾರ್ಯದರ್ಶಿ ಟಿ. ಪಾಂಡೆ ಈ ಕುರಿತಾಗಿ ಮಾಹಿತಿ ನೀಡಿದ್ದು, ಎಲ್ ಐಸಿಯ (LIC) ಒಟ್ಟು ಷೇರುಗಳ ಪೈಕಿ ಶೇ 3.5 ರಷ್ಟು ಮಾರಾಟ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಮೂಲಕ 21 ಸಾವಿರ ಕೋಟಿ ಹಣ ಸಂಗ್ರಹ ಮಾಡುವ ಗುರಿಯನ್ನ ಇರಿಸಲಾಗಿದ್ದು, ಆ ಮೂಲಕ ಭಾರತೀಯ ಕಂಪನಿಗಳ ಐಪಿಒ ಇತಿಹಾಸದಲ್ಲಿಯೇ ಅತೀ ದೊಡ್ಡ ಐಪಿಒ (IPO) ಎನಿಸಿಕೊಳ್ಳಲಿದೆ.
ಇದರಿಂದ ಬಂದ ಹಣವನ್ನು ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರತಿಯೊಬ್ಬರು ಕನಿಷ್ಟ 15 ಷೇರುಗಳಿಗೆ ಬಿಡ್ ಸಲ್ಲಿಸಬಹುದು ಹಾಗೂ ಗರಿಷ್ಠ ಎರಡು ಲಕ್ಷ ರೂ.ಮೌಲ್ಯದ ತನಕ ಷೇರು ಖರೀದಿಗೆ ಅವಕಾಶ. ಪಾಲಿಸಿದಾರರು ಮತ್ತು ಎಲ್ ಐ ಸಿ ಉದ್ಯೋಗಿಗಳ ಉತ್ತೇಜನಕ್ಕೆ ಶೇ.10 ರಷ್ಟು ಷೇರು ಮೀಸಲಿಡಲಾಗಿದೆ. ಎಲ್ ಐಸಿ ಪಾಲಿಸಿದಾರರಿಗೆ 60 ರೂ. ಹಾಗೂ ಎಲ್ ಐಸಿ ಉದ್ಯೋಗಿಗಳಿಗೆ 45 ರೂ. ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.
ಆಫರ್ ಫಾರ್ ಸೇಲ್ (OFS) ಮಾರ್ಗದಲ್ಲಿ ಸರ್ಕಾರ ತನ್ನಲ್ಲಿರುವ ಷೇರುಗಳನ್ನು ಮಾರಾಟ ಮಾಡಲಿದೆ. ಕಳೆದ ಫೆಬ್ರವರಿಯಲ್ಲಿ ಸರ್ಕಾರ ತನ್ನಲ್ಲಿದ್ದ ಶೇ.5ರಷ್ಟು ಎಲ್ ಐಸಿ ಷೇರನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ, ಸದ್ಯದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಶೇ.5ರ ಬದಲು ಶೇ. 35ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ತಿಳಿಸಿತ್ತು. ಹಾಗಿದ್ದರೂ, ದೇಶದ ಈವರೆಗಿನ ಅತೀದೊಡ್ಡ ಪಬ್ಲಿಕ್ ಇಶ್ಯೂ ಆಗಿ ಎಲ್ ಐಸಿ ಗುರುತಿಸಿಕೊಂಡಿದೆ.
ಮಾರುಕಟ್ಟೆಯ ವಿಶ್ಲೇಷಕರ ಪ್ರಕಾರ, ಎಲ್ ಐಸಿ ಷೇರುಗಳು ಶುಕ್ರವಾರ ಗ್ರೇ ಮಾರ್ಕೆಟ್ ನಲ್ಲಿ (ಜಿಎಂಪಿ ) 70 ರೂಪಾಯಿ ಪ್ರೀಮಿಯಂನಲ್ಲಿ ಮಾರಾಟವಾಗುತ್ತಿದೆ. ಗುರುವಾರ ಗ್ರೇ ಮಾರ್ಕೆಟ್ ಪ್ರೈಸ್ 50 ಆಗಿತ್ತು. ಮುಂದಿನ ದಿನಗಳಲ್ಲಿ ಜಿಎಂಪಿ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆಯೂ ಇದೆ.
E-Commerce: ಚಿಲ್ಲರೆ ವ್ಯಾಪಾರಕ್ಕೆ ಸರ್ಕಾರಿ ಆ್ಯಪ್: ಎಲ್ಲವೂ ಇದರಲ್ಲಿ ಲಭ್ಯ..!
ಮೇ 16ಕ್ಕೆ ಹಂಚಿಕೆ, 17ಕ್ಕೆ ಲಿಸ್ಟಿಂಗ್: ಸದ್ಯದ ಮಾಹಿತಿಯ ಪ್ರಕಾರ, ಡಿಮ್ಯಾಟ್ ಖಾತೆ ಹೊಂದಿರುವ ವ್ಯಕ್ತಿಗಳಿಗೆ ಮೇ 16 ರಂದು ಷೇರುಗಳು ಹಂಚಿಕೆಯಾಗಲಿದ್ದಯ, ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಮೇ 17ಕ್ಕೆ ಲಿಸ್ಟಿಂಗ್ ಆಗಲಿದೆ.
Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?
ಏನಿದು ಜಿಎಂಪಿ: ಪ್ರತಿ ಬಾರಿ ಹೊಸ ಕಂಪನಿಯ ಷೇರುಗಳು ಐಪಿಓ ವೇದಿಕೆಗೆ ಬಂದಾಗ ಮೊದಲ ಬಾರಿಗೆ ಗಮನ ನೀಡುವುದು ಗ್ರೇ ಮಾರ್ಕೆಟ್ ಪ್ರೈಸ್ ಅಥವಾ ಜಿಎಂಪಿ ಮೇಲೆ. ಮೊದಲ ದಿನದ ಲಿಸ್ಟಿಂಗ್ ನಲ್ಲಿ ಎಷ್ಟು ಮೊತ್ತಕ್ಕೆ ಷೇರು ಲಿಸ್ಟ್ ಆಗಲಿದೆ ಎನ್ನುವುದು ಜಿಎಂಪಿ ಮೂಲಕ ತಿಳಿಯುತ್ತದೆ. ಉದಾಹರಣೆಗೆ ಎಲ್ ಐಸಿ ಪ್ರತಿ ಷೇರಿನ ಬೆಲೆ 949 ರೂಪಾಯಿ ಆಗಿರುತ್ತದೆ ಎಂದಿಟ್ಟುಕೊಳ್ಳಿ, ಜಿಎಂಪಿಯಲ್ಲಿ 70 ರೂಪಾಯಿ ಪ್ರೀಮಿಯಂನಲ್ಲಿ ಓಡುತ್ತದ್ದರೆ, ಮೊದಲ ದಿನ 1020 ರೂಪಾಯಿಗೆ ಲಿಸ್ಟಿಂಗ್ ಆಗುತ್ತದೆ ಎಂದು ಅಂದಾಜು ಮಾಡಲಾಗುತ್ತದೆ. ಹೆಚ್ಚೂ ಕಡಿಮೆ ಜಿಎಂಪಿಯ ಅಕ್ಕಪಕ್ಕದ ಮೊತ್ತಕ್ಕೆ ಮೊದಲ ದಿನ ಲಿಸ್ಟಿಂಗ್ ಆಗುವುದು ಖಿಚಿತವಾಗುತ್ತದೆ.