ನಿರ್ಮಲಾ ಬಜೆಟ್: ಬಜೆಟ್‌ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?| ಕೊರೋನಾ ಕಾಲದಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ| ಕುಸಿದ ಆರ್ಥಿಕತೆಗೆ ನಿರ್ಮಲಾ ಮದ್ದು
ನಗೆಬೀರಿದವರು
1. ಆಸ್ಪತ್ರೆಗಳು: ಆರೋಗ್ಯ ಕ್ಷೇತ್ರದ ಅನುದಾನ ಶೇ.137ರಷ್ಟುಏರಿಕೆಯಾಗಿದೆ. ಇದರ ಬೆನ್ನಲ್ಲೇ ವಿವಿಧ ಆಸ್ಪತ್ರೆಗಳ ಷೇರು ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
undefined
2. ರಿಯಲ್ ಎಸ್ಟೇಟ್: ಮೂಲಸೌಕರ್ಯ ಯೋಜನೆಗಳ ಅನುದಾನ ಬೇಡಿಕೆ ಈಡೇರಿಸಲು ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯ ಪ್ರಸ್ತಾಪ ಬಜೆಟ್‌ನಲ್ಲಿದೆ. ಇದರಿಂದ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಕೂಲವಾಗಲಿದೆ.
3. ಲೋಹ ತಯಾರಕರು: 11 ಸಾವಿರ ಕಿ.ಮೀ. ಉದ್ದದ ಹೆದ್ದಾರಿ, ಮೆಟ್ರೋ ರೈಲು ಯೋಜನೆ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾಪವಿದೆ. ಇದರಿಂದಾಗಿ ಉಕ್ಕು, ಅಲ್ಯುಮಿನಿಯಂ ಕಂಪನಿಗಳಿಗೆ ಒಳ್ಳೆಯ ಬಿಸಿನೆಸ್ ಸಿಗಲಿದೆ.
4. ಸರ್ಕಾರಿ ಬ್ಯಾಂಕುಗಳು: 20 ಸಾವಿರ ಕೋಟಿ ರು. ಮರು ಬಂಡವಾಳದ ಜತೆಗೆ ವಸೂಲಾಗದ ಸಾಲ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸುವ ಪ್ರಸ್ತಾಪ ಇದೆ. ಇದರಿಂದ ಬ್ಯಾಂಕ್‌ಗಳಿಗೆ ದೊಡ್ಡ ಸಮಸ್ಯೆ ನಿವಾರಣೆಯಾಗಿದೆ.
5. ಜವಳಿ: ಮುಂದಿನ 3 ವರ್ಷಗಳಲ್ಲಿ 7 ಮೆಗಾ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ. ಇದರಿಂದಾಗಿ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ನಗೆ ಬೀರಿವೆ.
ಬೇಸರಗೊಂಡವರು
1. ಬಾಂಡ್‌ಗಳು: ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ 12 ಲಕ್ಷ ಕೋಟಿ ರು. ಸಾಲ ಮಾಡುವ ಗುರಿ ಹೊಂದಿದೆ. 2 ತಿಂಗಳಲ್ಲಿ 80 ಸಾವಿರ ಕೋಟಿ ರು. ಸಾಲ ಸಂಗ್ರಹಿಸುವುದಾಗಿ ತಿಳಿಸಿದೆ. ಭಾರತದ ಬಾಂಡ್‌ಗಳ ಮೇಲೆ ಇದು ಪರಿಣಾಮ ಬೀರಲಿದೆ.
2. ಆಮದುದಾರರು: ಸೌರಶಕ್ತಿ, ಮೊಬೈಲ್ ಫೋನ್, ಆಟೋಮೊಬೈಲ್ ಬಿಡಿಭಾಗಗಳಿಗೆ ಸಂಬಂಧಿಸಿದ ಆಮದು ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದೆ. ಇದರಿಂದ ಆಮದುದಾರರಿಗೆ ಸಂಕಷ್ಟಎದುರಾಗಲಿದೆ.
3. ರೈತರು: ಕೃಷಿ ಮಸೂದೆ ವಾಪಸಾತಿಗೆ ರೈತರು 2 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಕಳವಳ ಹೋಗಲಾಡಿಸುವ ಯಾವುದೇ ಅಂಶ ಬಜೆಟ್‌ನಲ್ಲಿ ಇಲ್ಲ.
4. ಐಟಿ ಕಂಪನಿಗಳು: ಬಜೆಟ್‌ನಲ್ಲಿ ಐಟಿ ಕಂಪನಿಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಆ ಸಂಸ್ಥೆಗಳ ಬೇಸರಕ್ಕೆ ಕಾರಣವಾಗಿದೆ.