ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ಲಾನ್;  ಏರ್‌ಟೆಲ್, ಜಿಯೋ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿಸಿದ ಬಿಎಸ್‌ಎನ್‌ಎಲ್

Published : Jan 21, 2025, 12:35 PM ISTUpdated : Jan 21, 2025, 02:58 PM IST
ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ಲಾನ್;  ಏರ್‌ಟೆಲ್, ಜಿಯೋ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿಸಿದ ಬಿಎಸ್‌ಎನ್‌ಎಲ್

ಸಾರಾಂಶ

ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸಿದೆ. ಈ ಮೂಲಕ ಮಧ್ಯಮ ವರ್ಗದ ಬಳಕೆದಾರರನ್ನು ಸೆಳೆಯುವ ತಂತ್ರವನ್ನು ಬಿಎಸ್‌ಎನ್‌ಎಲ್ ಮಾಡಿದೆ.

ನವದೆಹಲಿ: ಕಳೆದ ಏಳೆಂದು ತಿಂಗಳಿನಿಂದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್, ಖಾಸಗಿ ಟೆಲಿಕಾಂ ಕಂಪನಿಗಳಾಗಿರುವ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾಗೆ ಹಂತ ಹಂತವಾಗಿ ಟಕ್ಕರ್ ಕೊಡುತ್ತಾ ತನ್ನ ಗ್ರಾಹಕರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುತ್ತಿದೆ. TRAI ಹೊಸ ನಿಯಮಗಳಿಂದ ಖಾಸಗಿ ಕಂಪನಿಗಳ ಟೆನ್ಷನ್ ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ  6 ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸಿದೆ. ಬೆಲೆ ಏರಿಕೆ ಮಾಡಿಕೊಂಡ ಬಳಿಕ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಏರ್‌ಟೆಲ್ ಮತ್ತು ಜಿಯೋಗೆ ಬಿಎಸ್‌ಎನ್‌ಎಲ್ ನೀಡುತ್ತಿರುವ ಪ್ಲಾನ್ ಬಿಸಿತುಪ್ಪವಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷನೆ ಮಾಡುತ್ತಿದ್ದಾರೆ. 

BSNL's 180-day plan  
ಬಿಎಸ್‌ಎನ್‌ಎಲ್‌ ಮಧ್ಯಮ ವರ್ಗದ ಜನತೆಯ ಜೇಬಿಗೆ ಹಿತಕಾರಿಯಾದ 180 ದಿನ ವ್ಯಾಲಿಡಿಟಿ ಪ್ಲಾನ್ ಬಿಡುಗಡೆಗೊಳಿಸಿದೆ. 180 ದಿನ ವ್ಯಾಲಿಡಿಟಿ ಪ್ಲಾನ್ ಬೆಲೆ 897 ರೂಪಾಯಿ ಆಗಿದೆ. ಮಾಸಿಕವಾಗಿ ನೋಡೋದಾದ್ರೆ ಕೇವಲ 150 ರೂಪಾಯಿ ಆಗಲಿದೆ. ಈ ಮೂಲಕ 200 ರೂ.ಗೂ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ಲಾನ್‌ನಡಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ದೆಹಲಿ ಮತ್ತು ಮುಂಬೈ ಬಳಕೆದಾರರು  MTNL ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡಬಹುದು. 

ಹೆಚ್ಚುವರಿಯಾಗಿ ಈ ಯೋಜನೆಯು ಯಾವುದೇ ದೈನಂದಿನ ಮಿತಿಯಿಲ್ಲದೆ 90GB ಡೇಟಾವನ್ನು ಒದಗಿಸುತ್ತದೆ. ಈ ಪ್ಲಾನ್‌ನಲ್ಲಿ 180 ದಿನಕ್ಕೆ ಒಟ್ಟು 90GB ಡೇಟಾ ಲಭ್ಯವಾಗುತ್ತದೆ. ಡೇಟಾ ಪ್ಯಾಕ್ ಮುಕ್ತಾಯವಾದ ಬಳಿಕ ಇಂಟರ್‌ನೆಟ್ ಸ್ಪೀಡ್ 40 kbps ಆಗುತ್ತದೆ. ಇದರ ಜೊತೆಯಲ್ಲಿ ಗ್ರಾಹಕರಿಗೆ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್‌ ಕಳುಹಿಸಬಹುದಾಗಿದೆ. ಬಿಎಸ್‌ಎನ್‌ಎಲ್‌ ಸೆಕೆಂಡರಿ ಸಿಮ್ ಆಗಿ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಲಿದೆ. ಕಡಿಮೆ ಬೆಲೆಯಲ್ಲಿ ಸಿಮ್ ಆಕ್ಟಿವ್ ಮಾಡಿಕೊಳ್ಳೋದರ ಜೊತೆ ಗ್ರಾಹಕರಿಗೆ 90GB ಡೇಟಾ ಜೊತೆ ಎಸ್‌ಎಂಸ್, ಅನ್‌ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯವೂ ಸಿಗುತ್ತದೆ.

ಇದನ್ನೂ ಓದಿ: ಕೇವಲ 10 ರೂಪಾಯಿಯಲ್ಲಿ ಇಡೀ ವರ್ಷ ಸಿಮ್ ಆಕ್ಟಿವ್ ಮಾಡಿಕೊಳ್ಳಿ - TRAI ಹೊಸ ನಿಯಮ

ಎಷ್ಟು ದಿನ ಸಿಮ್ ಆಕ್ಟಿವ್ ಆಗಿರುತ್ತದೆ?
TRAI ಹೊಸ ನಿಯಮಗಳ ಪ್ರಕಾರ, ಯಾವುದೇ ಪ್ಲಾನ್ ಆಕ್ಟಿವ್ ಮಾಡಿಕೊಳ್ಳದಿರುವ ಸಿಮ್‌ 90 ದಿನಗಳವರೆಗೆ ಬ್ಲಾಕ್ ಆಗಲ್ಲ. ಒಂದು ವೇಳೆ ಸಿಮ್‌ನಲ್ಲಿ 20  ರೂಪಾಯಿ ಬ್ಯಾಲೆನ್ಸ್ ಇದ್ರೆ, ಈ ಮೊತ್ತ ಕಡಿತ ಮಾಡಿಕೊಳ್ಳುವ ಕಂಪನಿ ಸಿಮ್ ಸಕ್ರಿಯತೆ ಅವಧಿಯನ್ನು 30  ದಿನಗಳಿಗೆ ವಿಸ್ತರಿಸುತ್ತದೆ. ಆ ಬಳಿಕ ಮತ್ತೊಮ್ಮೆ ಕಂಪನಿ ಬಳಕೆದಾರರಿಗೆ ಹೆಚ್ಚುವರಿಯಾಗಿ 15 ದಿನ ನೀಡುತ್ತದೆ. ಈ ಗಡವು ಮುಕ್ತಾಯವಾದ ಬಳಿಕ ಕಂಪನಿ ನಿಮ್ಮ ಸಿಮ್‌ ಡಿಆಕ್ಟಿವ್ ಮಾಡಿ, ಆ ಸಂಖ್ಯೆಯನ್ನು ಬೇರೆಯವರಿಗೆ ವರ್ಗಾಯಿಸಬಹುದು.

ಇದನ್ನೂ ಓದಿ: 20 ರೂಪಾಯಿ ರೀಚಾರ್ಜ್‌, 4 ತಿಂಗಳ ವ್ಯಾಲಿಡಿಟಿ; ಗ್ರಾಹಕರು ಫುಲ್ ಜಿಂಗಾ ಲಾಲಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ