Bappi Lahari Assets: ಏಳೆಂಟು ಚಿನ್ದದ ಸರ ಹಾಕ್ತಿದ್ದ ಸಂಗೀತಗಾರನ ಆಸ್ತಿಯೆಷ್ಟು?

Suvarna News   | Asianet News
Published : Feb 16, 2022, 02:42 PM ISTUpdated : Feb 16, 2022, 02:56 PM IST
Bappi Lahari Assets:  ಏಳೆಂಟು ಚಿನ್ದದ ಸರ ಹಾಕ್ತಿದ್ದ  ಸಂಗೀತಗಾರನ ಆಸ್ತಿಯೆಷ್ಟು?

ಸಾರಾಂಶ

ಹಾಡುಗಾರ ಬಪ್ಪಿ ಲಹಿರಿ ನಮ್ಮನ್ನಗಲಿದ್ದಾರೆ. ಸುಮಧುರ ಕಂಠದ ಜೊತೆ ಅವರ ಬಂಗಾರದ ಬದುಕು ಎಲ್ಲರ ಗಮನ ಸೆಳೆದಿತ್ತು. ಇಹಲೋಕ ತ್ಯಜಿಸಿದ ಹಾಡುಗಾರ ಒಟ್ಟು ಎಷ್ಟು ಸಂಪತ್ತು ಹೊಂದಿದ್ದರು ಎಂಬುದರ ವಿವರ ಇಲ್ಲಿದೆ.   

ಖ್ಯಾತ ಗಾಯಕ (Singer) ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹಿರಿ (Bappi Lahiri )ಇಹಲೋಕ ತ್ಯಜಿಸಿದ್ದಾರೆ. ಮುಂಬೈ (Mumbai)ನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಬಪ್ಪಿ ಲಹಿರಿ ಕೊನೆಯುಸಿರೆಳೆದಿದ್ದಾರೆ. ವೈದ್ಯರ ಪ್ರಕಾರ, ಬಪ್ಪಿ ಲಹಿರಿ  ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (Obstructive Sleep Apnea) ದಿಂದ ಬಳಲುತ್ತಿದ್ದರು. ಇದೇ ಅವರ ನಿಧನ (Death)ಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಲಿವುಡ್ (Bollywood) ಹಿರಿಯ ನಟ ಮಿಥುನ್ ಚಕ್ರವರ್ತಿ (Mithun Chakraborty) ಹಾಡುಗಳಿಗೆ ಬಪ್ಪಿ ಲಹಿರಿ ಧ್ವನಿ ನೀಡ್ತಿದ್ದರು. ರೋಮ್ಯಾಂಟಿಕ್ ಹಾಡುಗಳ ಮೂಲಕ ಲಕ್ಷಾಂತರ ಮನಸ್ಸು ಕದ್ದಿದ್ದ ಬಪ್ಪಿ ನಿಧನ ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಗಣ್ಯಾತಿಗಣ್ಯರು ಬಪ್ಪಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಮಾನ್ಯವಾಗಿ ಬಪ್ಪಿ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಬರುವ ಮೊದಲ ಚಿತ್ರ, ಚಿನ್ನಾಭರಣ ಧರಿಸಿ,ಕಣ್ಣಿಗೆ ಕಪ್ಪು ಕನ್ನಡಕ ಹಾಕುವ ಅವರ ಮುಖ. ಚಿನ್ನಾಭರಣ ಧರಿಸುವುದ್ರಲ್ಲಿ ಬಪ್ಪಿ ಲಹಿರಿ ಫೇಮಸ್ ಆಗಿದ್ದರು. ಬಪ್ಪಿ ಲಹಿರಿ ಎಷ್ಟು ಸಂಪತ್ತನ್ನು ಬಿಟ್ಟು ಹೋಗಿದ್ದಾರೆ ಎಂದು ನೀವೆಲ್ಲ ಯೋಚಿಸುತ್ತಿರಬಹುದು, ಅವರ ಬಳಿ ಎಷ್ಟು ಚಿನ್ನವಿದೆ ಎಂಬುದನ್ನು ತಿಳಿಯುವ ಕುತೂಹಲವಿರಬಹುದು. ಬಪ್ಪಿ ಲಹಿರಿ ಆರ್ಥಿಕ ಸ್ಥಿತಿಯ ಬಗ್ಗೆ ಇಂದು ನಾವು ಮಾಹಿತಿ ನೀಡ್ತೇವೆ. 

ಖ್ಯಾತ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

ಬಪ್ಪಿ ಲಹಿರಿ ಬಳಿ ಇತ್ತು ಐಷಾರಾಮಿ ಕಾರು,ಬಂಗಲೆ : ಬಪ್ಪಿ ಲಹಿರಿ ಐಷಾರಾಮಿ ಜೀವನ ನಡೆಸಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಬಪ್ಪು ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದರು. ಅವರು 2001 ರಲ್ಲಿ ಈ ಮನೆಯನ್ನು ಖರೀದಿಸಿದ್ದರು. ಸದ್ಯ ಈ ಮನೆಯ ಮಾರುಕಟ್ಟೆ ಬೆಲೆ ಸುಮಾರು 3.5 ಕೋಟಿ ರೂಪಾಯಿ. ಅವರು ಐಷಾರಾಮಿ ಕಾರುಗಳನ್ನು ಸಹ ಇಷ್ಟಪಡುತ್ತಿದ್ದರು. ಅವರು ವಿಶ್ವದ ಅತ್ಯುತ್ತಮ 5 ಕಾರುಗಳನ್ನು ಹೊಂದಿದ್ದರು. ಬಿಎಂಡಬ್ಲ್ಯೂ (BMW) ಮತ್ತು ಆಡಿ (Audi) ಹೊರತುಪಡಿಸಿ ಅವರು ಟೆಸ್ಲಾದಿಂದ ಹಿಡಿದು 55 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಸಹ ಖರೀದಿಸಿದ್ದರು.

ಚಿನ್ನವನ್ನು ಧರಿಸುವುದು ಅದೃಷ್ಟ ಎಂದುಕೊಂಡಿದ್ದ ಬಪ್ಪಿ : ಬಪ್ಪಿ ಲಹಿರಿಯನ್ನು ಚಿನ್ನವಿಲ್ಲದೆ ನೋಡಿದವರಿಲ್ಲ. ಸದಾ ಚಿನ್ನವನ್ನು ಧರಿಸುತ್ತಿದ್ದರ ಬಪ್ಪಿ. ಅವರ ಮೈ ಮೇಲೆ 7-8 ಚಿನ್ನದ ಸರಗಳಿರುತ್ತಿದ್ದವು. ಅಲ್ಲದೆ ಕೈಗಳಿಗೆ ಉಂಗುರ ಧರಿಸುತ್ತಿದ್ದರು. ಚಿನ್ನದ ಮೇಲೆ ಬಪ್ಪಿಗೆ ಅಪಾರ ಪ್ರೀತಿಯಿತ್ತು ಎಂಬುದನ್ನು ನಾವು ಇದ್ರಿಂದಲೇ ತಿಳಿಯಬಹುದು. ಚಿನ್ನ ಧರಿಸುವುದನ್ನು ಅದೃಷ್ಟವೆಂದು ನಂಬಿದ್ದರು ಬಪ್ಪಿ. ಅವರು ವೈಯಕ್ತಿಕವಾಗಿ ಸಾಕಷ್ಟು ಚಿನ್ನಾಭರಣಗಳನ್ನು ಹೊಂದಿದ್ದರು. 2014ರ ಚುನಾವಣೆ ವೇಳೆ ಬಹಿರಂಗಗೊಂಡ ಮಾಹಿತಿ ಪ್ರಕಾರ, ಬಪ್ಪಿ ಲಹಿರಿ ಬಳಿ 750 ಗ್ರಾಂ ಚಿನ್ನಾಭರಣವಿತ್ತು. ಆದರೆ ಈಗ ಅದು ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ.

ಬಪ್ಪಿ ಲಹರಿ ಇಷ್ಟೊಂದು ಚಿನ್ನ ಧರಿಸೋದು ಏಕೆ?

ಬಪ್ಪಿ ಲಹಿರಿ ಬಳಿ ಇರುವ ಒಟ್ಟೂ ಆಸ್ತಿ ಎಷ್ಟು ಗೊತ್ತಾ? : ಸೆಲೆಬ್ರಿಟಿಗಳ ಸಂಪತ್ತನ್ನು ಮೇಲ್ವಿಚಾರಣೆ ಮಾಡುವ ವೆಬ್‌ಸೈಟ್ ಕ್ಯಾಕ್ನಾಲೆಡ್ಜ್ ಪ್ರಕಾರ, ಬಪ್ಪಿ ಲಹಿರಿ ಅವರು ಡಿಸೆಂಬರ್‌ನಲ್ಲಿ ಸುಮಾರು 22 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಸಿನಿಮಾದ ಒಂದು ಹಾಡಿಗೆ ಬಪ್ಪಿ 8-10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಸಂಗೀತ ಕಚೇರಿಯಲ್ಲಿ ಒಂದು ಗಂಟೆ ಕಾರ್ಯಕ್ರಮ ಕೊಡಲು ಬಪ್ಪಿ ಲಹಿರಿ 20ರಿಂದ 25 ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದರು. ಅವರ ಮಾಸಿಕ ಆದಾಯ 20 ಲಕ್ಷ ಮತ್ತು ವಾರ್ಷಿಕ ಆದಾಯ ಸುಮಾರು 2.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 11.3 ಕೋಟಿ ರೂಪಾಯಿಯನ್ನು ಅವರು ವೈಯಕ್ತಿಕ ಹೂಡಿಕೆ ಮಾಡಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!