Gold Silver Price : ದೇಶಾದ್ಯಂತ ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

Suvarna News   | Asianet News
Published : Feb 16, 2022, 01:49 PM ISTUpdated : Feb 16, 2022, 01:59 PM IST
Gold Silver Price : ದೇಶಾದ್ಯಂತ ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

ಸಾರಾಂಶ

ದೇಶದ ಬಹುತೇಕ ನಗರಗಳಲ್ಲಿ ದರ ಇಳಿಕೆ  ಬೆಳ್ಳಿ ಮಾತ್ರವಲ್ಲ, ಚಿನ್ನದ ದರದಲ್ಲೂ ಕೊಂಚ ಇಳಿಕೆ ಫೆಬ್ರವರಿ 16ರ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

ಬೆಂಗಳೂರು (ಜ.17): ಭಾರತದಲ್ಲಿ ಚಿನ್ನಾಭರಣಗಳ ಬೇಡಿಕೆ ಎಂದಿಗೂ ಕುಸಿಯುವುದೇ ಇಲ್ಲ. ಕೋವಿಡ್ ಸಮಯದಲ್ಲೂ ತನ್ನ ಮೌಲ್ಯವನ್ನು ಚಿನ್ನ ಕಳೆದುಕೊಂಡಿರಲಿಲ್ಲ. ಹಾಗಾಗಿ ಚಿನ್ನ (Gold), ಬೆಳ್ಳಿಯ (Silver) ವಿಚಾರದಲ್ಲಿ ಬೇಡಿಕೆ ಕಡಿಮೆ ಆಗುವ ಮಾತೇ ಇರುವುದಿಲ್ಲ.  ನಿರಂತರವಾಗಿ ಏರಿಳಿತ ಕಾಣುತ್ತಲೇ ಇರುವ ಚಿನ್ನ ಬೆಳ್ಳಿ ದರದ (Price) ಮೇಲೆ ಅಂತಾರಾಷ್ಟ್ರೀಯ ವಿಚಾರಗಳು ಸಾಕಷ್ಟು ಪ್ರಭಾವ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಲ್ಲುದು.

ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ಇನ್ನು ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ  ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಕುಸಿದಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೇಶದಲ್ಲಿನ ಚಿನ್ನದ ಸಂಗ್ರಹ ಕೂಡ ಬೆಲೆ ನಿರ್ಧರಣೆ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ಮೇಲೆ ಖರೀದಿಸೋದು ಅಥವಾ ಹೂಡಿಕೆ ಮಾಡೋದು ಅಂದ್ರೆ ಲಕ್ಷಾಂತರ ರೂಪಾಯಿ ವ್ಯವಹಾರವಾಗಿರೋ ಕಾರಣ ಯಾವುದೇ ನಿರ್ಧಾರ ಕೈಗೊಳ್ಳೋ ಮುನ್ನ ಮಾರುಕಟ್ಟೆ ದರ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ (ಫೆ.16) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವುದರ ವಿವರ ಇಲ್ಲಿದೆ.

"
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 46,200ರೂ.ಇದ್ದು, 200 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,400 ರೂ.ಇದ್ದು, 220 ರೂ ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿಇಳಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಯಲ್ಲಿ 400 ರೂಪಾಯಿ ಕಡಿಮೆಯಾಗಿದೆ. ನಿನ್ನೆ 68,200ರೂ.ಇದ್ದ ಬೆಳ್ಳಿ ದರ ಇಂದು 67,800 ರೂಪಾಯಿ ಆಗಿದೆ.

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi) ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು  46,200ರೂ. ಆಗಿದ್ದು, 200 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 50,630 ರೂ. ಆಗಿದ್ದು, 10 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 1 ಕೆಜಿ ಬೆಳ್ಳಿ ದರ ಇಂದು 63,000 ರೂಪಾಯಿ ಆಗಿದೆ.

Huawei Income Tax Raids: ಬೆಂಗಳೂರು ಸೇರಿದಂತೆ ಚೀನಾ ಟೆಲಿಕಾಂ ಕಂಪನಿಯ ಭಾರತದ ಕಚೇರಿಗಳ ಮೇಲೆ ಐಟಿ ದಾಳಿ!
ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಬದಲಾವಣೆಯಾಗಗಿದೆ. 200 ರೂಪಾಯಿ ಕಡಿಮೆಯಾಗಿದ್ದು, 46,200 ರೂಪಾಯಿಗೆ ಇಳಿದಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರದಲ್ಲೂ 220 ರೂಪಾಯಿ ಇಳಿಕೆಯಾಗಿದ್ದು, 50,400 ಆಗಿದೆ. 1 ಕೆಜಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ 63 ಸಾವಿರ ರೂಪಾಯಿಯಲ್ಲಿಯೇ ಇದೆ.

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 310 ರೂಪಾಯಿ ಇಳಿಕೆಯಾಗಿದೆ. ನಿನ್ನೆ 46,940 ಇದ್ದ ದರ ಇಂದು 46,650 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 380 ರೂಪಾಯಿ ಇಳಿಕೆಯಾಗಿದ್ದು, 50,850 ರೂಪಾಯಿಗೆ ಇಳಿದಿದೆ. ಇನ್ನು 1 ಕೆಜಿ ಬೆಳ್ಳಿ ದರದಲ್ಲಿ 400 ರೂಪಾಯಿ ಇಳಿಕೆಯಾಗಿದ್ದು, 67,800 ರೂಪಾಯಿ ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!