ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ QR ಕೋಡ್

Published : Jul 23, 2026, 06:52 AM IST
BMTC

ಸಾರಾಂಶ

ಬಿಎಂಟಿಸಿಯು ಟಿಕೆಟೇತರ ಆದಾಯ ಹೆಚ್ಚಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ. ಇನ್ಮುಂದೆ ಪ್ರಯಾಣಿಕರಿಗೆ ಹೊಸ ಕ್ಯೂಆರ್ ಕೋಡ್ ಲಭ್ಯವಾಗಲಿದೆ. ಏನಿದು ಹೊಸ ಪ್ಲಾನ್? ಈ ಕೋಡ್‌ನಿಂದ ಆದಾಯ ಹೇಗೆ ಬರುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಬೆಂಗಳೂರು: ಬಿಎಂಟಿಸಿಯು ಟಿಕೆಟೇತರ ಆದಾಯ ಹೆಚ್ಚಳಕ್ಕೆ ಹೊಸ ಉಪಾಯ ಕಂಡುಕೊಂಡಿದ್ದು, ಬಸ್‌ಗಳಲ್ಲಿನ ಪ್ರಯಾಣಿಕರ ಆಸನದ ಹಿಂಭಾಗ ಕ್ಯೂಆರ್‌ ಕೋಡ್‌ ಆಧಾರಿತ ಜಾಹೀರಾತು ಪ್ರದರ್ಶನಕ್ಕೆ ಮುಂದಾಗುವ ಮೂಲಕ ಆದಾಯ ವೃದ್ಧಿಗೆ ಬಿಎಂಟಿಸಿ ಕ್ರಮ ಕೈಗೊಳ್ಳುತ್ತಿದೆ.

ಬಿಎಂಟಿಸಿಯಲ್ಲಿ 1759 ಎಲೆಕ್ಟ್ರಿಕ್‌ ಬಸ್‌ಗಳು ಸೇರಿದಂತೆ 6981 ಬಸ್‌ಗಳಿದ್ದು, ಪ್ರತಿ ದಿನ ಪ್ರಯಾಣಿಕರಿಂದ 7.21 ಕೋಟಿ ರು. ಆದಾಯ ಬರುತ್ತಿದೆ. ಬಿಎಂಟಿಸಿಯು 2025-26ನೇ ಸಾಲಿನಲ್ಲಿ 241 ಕೋಟಿ ರು. ಟಿಕೆಟೇತರ ವಾಣಿಜ್ಯ ಆದಾಯಗಳಿಸಿದೆ. ಅದರಲ್ಲಿ ಪ್ರಮುಖವಾಗಿ ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ಬರುವ ಆದಾಯದ ಪಾಲು ಹೆಚ್ಚಿದೆ.

ಆಸನದ ಹಿಂಭಾಗದಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ಜಾಹೀರಾತು

ಇದೀಗ ಜಾಹೀರಾತು ಪ್ರದರ್ಶನದ ಹೊಸ ಮಾರ್ಗವನ್ನು ಕಂಡುಕೊಂಡಿರುವ ಬಿಎಂಟಿಸಿ, ಬಸ್‌ಗಳಲ್ಲಿನ ಪ್ರಯಾಣಿಕರ ಆಸನದ ಹಿಂಭಾಗದಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ಜಾಹೀರಾತು ಪ್ರದರ್ಶನಕ್ಕೆ ಮುಂದಾಗಿದೆ. ಪ್ರತಿ ಆಸನದ ಹಿಂಭಾಗ ಕ್ಯೂಆರ್‌ ಕೋಡ್‌ ಅಳವಡಿಸಿ, ಅದನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿದರೆ ಜಾಹೀರಾತು ಕಾಣಿಸುವಂತೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ AI ತಂತ್ರಜ್ಞಾನ ಬಳಸಿ 1600 ಕಿ.ಮೀ ಉದ್ದದ ರಸ್ತೆ ಸಮೀಕ್ಷೆ; ವರದಿಯಲ್ಲಿ ಏನಿದೆ?

ಅದರ ಜತೆಗೆ ಎಲೆಕ್ಟ್ರಿಕ್‌ ಟಿಕೆಟಿಂಗ್‌ ಯಂತ್ರಗಳ ಮೂಲಕ ನೀಡಲಾಗುವ ಟಿಕೆಟ್‌ಗಳ ಹಿಂಭಾಗದಲ್ಲೂ ಜಾಹೀರಾತು ಪ್ರದರ್ಶಿಸುವುದು, ಬಸ್‌ಗಳಲ್ಲಿ ಆಡಿಯೋ ಮೂಲಕ ಜಾಹೀರಾತು ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ವಿಧಾನಗಳ ಮೂಲಕ ಆದಾಯ ಹೆಚ್ಚಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಇದನ್ನೂ ಓದಿ: ಬೈಯಪ್ಪನಹಳ್ಳಿ ರೋಟರಿ ಮೇಲ್ಸೇತುವೆ ಫ್ಯಾಬ್ರಿಕೇಷನ್ ಯಾರ್ಡ್ ಧ್ವಂಸಗೊಳಿಸಿದ SWR: ಸರ್ಕಾರ-ರೈಲ್ವೆ ನಡುವೆ ಮತ್ತೆ ಜಟಾಪಟಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ದೇಶಾದ್ಯಂತ 629 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಿಳಂಬ: 103 ಗುತ್ತಿಗೆದಾರರು ಬ್ಲ್ಯಾಕ್‌ಲಿಸ್ಟ್‌
ಮಾಸಿಕ 1,00,000 ಲಕ್ಷ ಆದಾಯ: ಸಣ್ಣ ಜಾಗದಲ್ಲಿ ದೊಡ್ಡ ಲಾಭ ಬರುವ ಪ್ರೈವೇಟ್ ಥಿಯೇಟರ್ ಬ್ಯುಸಿನೆಸ್‌ ಆರಂಭಿಸಿ!