ಗ್ರಾಹಕರೇ ಇಲ್ಲಿ ನೋಡಿ, ನಿಮ್ಮ ಎಫ್‌ಡಿಗೆ ಭರ್ಜರಿ ಬಡ್ಡಿ ನೀಡುವ ಬ್ಯಾಂಕುಗಳಿವು!

By Santosh Naik  |  First Published Jun 10, 2024, 5:41 PM IST

June Fixed deposit Interest Rates Of Bank ಅದೆಷ್ಟೇ ಮ್ಯೂಚುವಲ್‌ ಫಂಡ್‌ಗಳು ಷೇರ್‌ ಮಾರ್ಕೆಟ್‌ ಕ್ರೇಜ್‌ ಇದ್ದರೂ, ಫಿಕ್ಸಡ್‌ ಡೆಪಾಸಿಟ್‌ಗೆ ಇರುವ ಕ್ರೇಜ್‌ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಬಹುಶಃ ಅದು ಕಡಿಮೆಯಾಗೋದು ಇಲ್ಲ. ಇತ್ತೀಚಿನ ದಿನಗಳಲ್ಲಿ ಫಿಕ್ಸಡ್‌ ಡೆಪಾಸಿಟ್‌ಗಳ ಮೇಲೆ ಆಕರ್ಷಣೆ ಹೆಚ್ಚಾಗಿದೆ. ಅದಕ್ಕೆ ಕಾರಣಕ್ಕೆ ಹೆಚ್ಚಿನ ಬಡ್ಡಿ



ಬೆಂಗಳೂರು (ಜೂ.10): ಸ್ಥಿರ ಠೇವಣಿಗಳು ಅಂದರೆ ಫಿಕ್ಸಡ್‌ ಡೆಪಾಸಿಟ್‌ಗಳ ಮೇಲೆ ಆಕರ್ಷಣೆ ಹೆಚ್ಚಾಗಿದೆ. ಇತ್ತೀಚೆಗೆ ಬ್ಯಾಂಕುಗಳು ಫಿಕ್ಸಡ್‌ ಡೆಪಾಸಿಟ್‌ಗಳ ಮೇಲೆ ಬಡ್ಡಿದರವನ್ನು ಏರಿಸಿರುವ ಕಾರಣ ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿ ಮಾರ್ಪಟ್ಟಿವೆ. ದೇಶದ ಕೆಲವು ಬ್ಯಾಂಕ್‌ಗಳು ಹಿರಿಯ ನಾಗಕರೀಕರ ಫಿಕ್ಸಡ್‌ ಡೆಪಾಸಿಟ್‌ಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ. ಸಾಮಾನ್ಯ ಜನರಿಗಿಂತ ಹಿರಿನ ನಾಗರೀಕರು ತಮ್ಮ ಸ್ಥಿರ ಠೇವಣಿಗಳ ಮೇಲೆ ಶೇ.0.25 ರಿಂದ ಶೇ. 0.75ರಷ್ಟು ಹೆಚ್ಚಿನ ಬಡ್ಡಿದರವನ್ನು ಪಡೆದುಕೊಳ್ಳುತ್ತಾರೆ. ಫಿಕ್ಸಡ್‌ ಡೆಪಾಸಿಟ್‌ಗಳಇಂದ ಬಡುವ ಬಡ್ಡಿಯ ಮೇಲೆ ಆದಾಯ ತೆರಿಗೆ ಬೀಳುತ್ತದೆ.  ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ, ಹಿರಿಯ ನಾಗರಿಕರು ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿ ಠೇವಣಿಗಳಿಂದ ಗಳಿಸಿದ ಬಡ್ಡಿಯ ಮೇಲೆ ವಿನಾಯಿತಿ ಪಡೆದುಕೊಳ್ಳಬಹುದು. ಇನ್ನು ಗ್ರಾಹಕರು ತಮ್ಮ ಫಿಕ್ಸಡ್‌ ಡೆಪಾಸಿಟ್‌ಗಳಿಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಬಡ್ಡಿ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಇತ್ತೀಚೆಗೆ ಬ್ಯಾಂಕ್‌ಗಳು ತಮ್ಮ ಎಫ್‌ಡಿ ದರಗಳನ್ನು ಪ್ರಮುಖವಾಗಿ ಪರಿಷ್ಕರಣೆ ಮಾಡಿವೆ.

ಸಾಮಾನ್ಯವಾಗಿ ಸ್ಥಿರ ಠೇವಣಿಗಳಿಗೆ ಸಣ್ಣ ಹಣಕಾಸು ಬ್ಯಾಂಕ್‌ಗಳೇ ಹೆಚ್ಚಿನ ಬಡ್ಡಿ ನೀಡುತ್ತದೆ.   ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 8.50% ಬಡ್ಡಿದರವನ್ನು 18 ತಿಂಗಳ ಎಫ್‌ಡಿ ಮತ್ತು ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 9.00% ಬಡ್ಡಿದರವನ್ನು 444 ದಿನಗಳವರೆಗೆ ನೀಡುತ್ತದೆ. ಇಎಸ್‌ಎಎಫ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 8.75% ಬಡ್ಡಿದರವನ್ನು ನೀಡುತ್ತದೆ. ಜನ ಸಣ್ಣ ಹಣಕಾಸು ಬ್ಯಾಂಕ್ 365 ದಿನಗಳವರೆಗೆ 9.00% ಬಡ್ಡಿದರವನ್ನು ನೀಡುತ್ತದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೇಳಿರಬಹುದು. ಈ ಬ್ಯಾಂಕ್‌ 15 ತಿಂಗಳಿಗೆ 9.00% ಮತ್ತು ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳವರೆಗೆ 9.50% ಬಡ್ಡಿಯನ್ನು ನೀಡುತ್ತದೆ. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 1500 ದಿನಗಳ ಅವಧಿಗೆ 9.10% ಬಡ್ಡಿ ದರವನ್ನು ನೀಡುತ್ತದೆ. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 546 ದಿನಗಳಿಂದ 1111 ದಿನಗಳವರೆಗೆ 9.50% ಬಡ್ಡಿಯನ್ನು ನೀಡುತ್ತಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 9.10% ಬಡ್ಡಿಯನ್ನು ನೀಡುತ್ತದೆ. 

ಇನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಹಿರಿಯ ನಾಗರಿಕರಿಗೆ ಎರಡರಿಂದ ಮೂರು ವರ್ಷಗಳ ಎಫ್‌ಡಿಗಳಲ್ಲಿ 7.75% ರಷ್ಟು ಹೆಚ್ಚಿನ ಬಡ್ಡಿದರವನ್ನು ಬ್ಯಾಂಕ್‌ ಆಫ್‌ ಬರೋಡಾ ನೀಡುತ್ತದೆ. ಇನ್ನು ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 666 ದಿನಗಳ ಎಫ್‌ಡಿಗೆ ಶೇ.7.80 ರೂಪಾಯಿ ಬಡ್ಡಿ ಪಾವತಿ ಮಾಡುತ್ತದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ 400 ದಿನಗಳಿಗೆ 7.60% ಮತ್ತು ಕೆನರಾ ಬ್ಯಾಂಕ್ 444 ದಿನಗಳವರೆಗೆ 7.75% ಬಡ್ಡಿಯನ್ನು ನೀಡುತ್ತದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯನ್ ಬ್ಯಾಂಕ್, ಇಂಡ್ ಸೂಪರ್ ಸ್ಕೀಮ್ ಅಡಿಯಲ್ಲಿ 555 ದಿನಗಳವರೆಗೆ 7.75% ಮತ್ತು 400 ದಿನಗಳವರೆಗೆ 6.60% ಬಡ್ಡಿದರವನ್ನು ನೀಡುತ್ತದೆ.

ಹಿರಿಯ ನಾಗರೀಕರಿಗೆ  ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 444 ದಿನಗಳ FD ಮೇಲೆ 7.80% ಬಡ್ಡಿಯನ್ನು ಪಿಎನ್‌ಬಿ 400 ದಿನಗಳಿಗೆ 7.75% ಬಡ್ಡಿಯನ್ನು ನೀಡುತ್ತಿದ್ದರೆ, ಪಂಜಾಬ್ & ಸಿಂಧ್ ಬ್ಯಾಂಕ್ 444 ದಿನಗಳವರೆಗೆ 7.75% ಬಡ್ಡಿಯನ್ನು ಕೊಡುತ್ತಿದೆ.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ಕಲಶ ಯೋಜನೆಯಡಿ 400 ದಿನಗಳವರೆಗೆ 7.60% ಬಡ್ಡಿದರವನ್ನು ನೀಡುತ್ತಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 399 ದಿನಗಳ ಅವಧಿಗೆ 7.75% ಬಡ್ಡಿದರವನ್ನು ನೀಡುತ್ತಿದೆ.

ಇನ್ನು ಖಾಸಗಿ ಬ್ಯಾಂಕ್‌ಗಳ ಲೆಕ್ಕಾಚಾರ ಮಾಡುವುದರೆ,  Axis Bank ಹಿರಿಯ ನಾಗರೀಕರಿಗೆ 17 ತಿಂಗಳಿಂದ 18 ತಿಂಗಳ ಅವಧಿಗೆ 7.85% ಮತ್ತು Bhandan ಬ್ಯಾಂಕ್ 1 ವರ್ಷಕ್ಕೆ 8.35% ಬಡ್ಡಿಯನ್ನು ನೀಡುತ್ತಿವೆ. City Union Bank 400 ದಿನಗಳಿಗೆ 7.75%, CSB ಬ್ಯಾಂಕ್ 7.75% 401 ದಿನಗಳವರೆಗೆ ಮತ್ತು DBS ಬ್ಯಾಂಕ್ 8.00% 376 ದಿನಗಳಿಂದ 540 ದಿನಗಳ ಅವಧಿಗೆ ಬಡ್ಡಿದರವನ್ನು ನೀಡುತ್ತದೆ.

ಸೌತ್ ಇಂಡಿಯನ್ ಬ್ಯಾಂಕ್ 400 ದಿನಗಳವರೆಗೆ 7.75%, ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ 8.00% 400 ದಿನಗಳು, ಯೆಸ್ ಬ್ಯಾಂಕ್ 8.50% 18 ತಿಂಗಳುಗಳು.  ಕರ್ಣಾಟಕ ಬ್ಯಾಂಕ್ 375 ದಿನಗಳಿಗೆ 7.80% ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ 390 ದಿನಗಳಿಂದ 23 ತಿಂಗಳವರೆಗೆ 7.90% ಬಡ್ಡಿಯನ್ನು ನೀಡುತ್ತಿದೆ. RBL ಬ್ಯಾಂಕ್ 18 ತಿಂಗಳಿಂದ 2 ವರ್ಷಗಳ ಅವಧಿಗೆ 8.50% ಬಡ್ಡಿದರವನ್ನು ನೀಡುತ್ತಿದೆ.  ICICI 15 ತಿಂಗಳಿಂದ 2 ವರ್ಷಗಳವರೆಗೆ FD ಗಳ ಮೇಲೆ 7.75% ಬಡ್ಡಿದರವನ್ನು ನೀಡುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 500 ದಿನಗಳವರೆಗೆ 8.40% ಬಡ್ಡಿದರವನ್ನು ನೀಡುತ್ತದೆ, ಇಂಡಸ್ ಇಂಡಸ್ 15 ತಿಂಗಳಿಂದ 16 ತಿಂಗಳವರೆಗೆ ಅಥವಾ 30 ತಿಂಗಳಿಂದ 31 ತಿಂಗಳವರೆಗೆ 8.25% ಬಡ್ಡಿದರವನ್ನು ನೀಡುತ್ತದೆ. 

Tap to resize

Latest Videos

click me!