ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!

Published : Apr 28, 2025, 11:51 AM ISTUpdated : Apr 28, 2025, 11:54 AM IST
ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!

ಸಾರಾಂಶ

ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿಯಿಂದಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಭಯಭೀತರಾದ ಕರ್ನಾಟಕದ ಪ್ರವಾಸಿಗರು ಪ್ರವಾಸ ರದ್ದುಗೊಳಿಸುತ್ತಿದ್ದು, ಬೆಂಗಳೂರು-ಕಾಶ್ಮೀರ ವಿಮಾನ ಟಿಕೆಟ್ ದರ ₹೪೦,೦೦೦ ದಿಂದ ₹೮,೦೦೦ಕ್ಕೆ ಇಳಿದಿದೆ. ಪ್ರವಾಸಿಗರು ಪರ್ಯಾಯ ತಾಣಗಳಿಗೆ ಪ್ರಯಾಣ ಬದಲಿಸುತ್ತಿದ್ದಾರೆ.

ಬೆಂಗಳೂರು (ಏ.28): ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂ ಪ್ರವಾಸಿಗರ ನರಮೇಧದಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ. ಪಾಕ್ ಬೆಂಬಲಿಕ ಇಸ್ಲಾಮಿಕ್ ಉಗ್ರರ ಅಟ್ಟಹಾಸಕ್ಕೆ ಬೆದರಿದ ಕರ್ನಾಟಕ ಪ್ರವಾಸಿಗರು ಇದೀಗ ಕಾಶ್ಮೀರ ಪ್ರವಾಸ ರದ್ದುಗೊಳಿಸಿದ್ದಾರೆ. ಆದ್ದರಿಂದ ಕರ್ನಾಟಕದ ಬೆಂಗಳೂರು ಟು ಕಾಶ್ಮೀರ ವಿಮಾನ ಟಿಕೆಟ್‌ ಬೆಲೆ 40 ಸಾವಿರ ರೂ.ಗಳಿಂದ 8 ಸಾವಿರ ರೂ.ಗಳಿಗೆ ಕುಸಿತವಾಗಿದೆ.

ಹೌದು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದ ಪರಿಣಾಮವಾಗಿ ಕಾಶ್ಮೀರಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಭಾರಿ ಇಳಿಕೆ‌ಯಾಗಿದೆ. ಈಗಾಗಲೇ ಕರ್ನಾಟಕದಿಂದ ಟ್ರಾವೆಲ್ಸ್ ಕಂಪನಿಗಳ ಬಳಿ ಕಾಶ್ಮೀರ ಪ್ರವಾಸಕ್ಕೆ ಟಿಕೆಟ್ ಬುಕಿಂಗ್ ಮಾಡಿದ್ದ ಪ್ರವಾಸಿಗರು ಇದೀಗ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇನ್ನು ಈ ವಾರ ಕಾಶ್ಮೀರ ಪ್ರವಾಸಕ್ಕೆ ಹೋಗಬೇಕಾಗಿದ್ದ ಶೇ.70 ರಿಂದ 80 ರಷ್ಟು ಜನರು ತಮ್ಮ ಪ್ರಯಾಣದ ಬುಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಬೆಂಗಳೂರಿನಿಂದ ಕಾಶ್ಮೀರದ ಶ್ರೀನಗರಕ್ಕೆ ತೆರಳಬೇಕಿದದ್ದ ವಿಮಾನ ಟಿಕೆ ದರದಲ್ಲಿ ಭಾರಿ ಕುಸಿತವಾಗಿದೆ.

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ದೇಶದಾದ್ಯಂತ ಎಲ್ಲ ರಾಜ್ಯಗಳ ಜನರು ಕಾಶ್ಮೀರಕ್ಕೆ ಪ್ರವಾಸ ಹೋಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿತ್ತು. ಇನ್ನು ಕರ್ನಾಟಕ ಪ್ರವಾಸಿಗರು ಕೂಡ ಕಾಶ್ಮೀರದ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದ ಇಬ್ಬರು ಕನ್ನಡಿಗರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದು, ಅವರ ಕುಟುಂಬಗಳ ಆಕ್ರಂದನವನ್ನು ಕಣ್ಣಾರೆ ಕಂಡಿರುವ ಕನ್ನಡಿಗರು ನೀವೇ ಕೋಟಿ ರೂಪಾಯಿ ಕೊಡ್ತೀನಿ ಎಂದರೂ ಕಾಶ್ಮೀರ ಪ್ರವಾಸ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನಗಳ ಬೆಂಗಳೂರು-ಕಾಶ್ಮೀರ ಟಿಕೆಟ್ ದರ ಕೂಡ ತೀವ್ರ ಕುಸಿತವಾಗಿದೆ.

ಇದನ್ನೂ ಓದಿ: ಪುಟ್ಟ ಮಕ್ಕಳ ಪಾಕ್‌ಗೆ ಕಳುಹಿಸಿ ಆಚೇ ಹೋಗಲಾರದೇ ಇಲ್ಲೂ ಇರಲಾಗದೇ ತಾಯಿಯ ಸಂಕಟ

ಈ ಹಿಂದೆ ಬೆಂಗಳೂರಿನಿಂದ ಜಮ್ಮು ಅಥವಾ ಕಾಶ್ಮೀರಕ್ಕೆ ತುರ್ತಾಗಿ ಹೋಗಬೇಕು ಎಂದರೆ ವಿಮಾನದ ಟಿಕೆಟ್ ದರ 30 ಸಾವಿರ ರೂ.ಗಳಿಂದ 40 ಸಾವಿರ ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ಏ.21ರಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪೆಹಲ್ಗಾಮ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂದೂ ಪ್ರವಾಸಿಗರ ಮೇಲೆ ಇಸ್ಲಾಮಿಕ್ ಉಗ್ರರ ದಾಳಿಯಿಂದಾಗಿ ಕಾಶ್ಮೀರಕ್ಕೆ ಹೋಗುವವರ ಪ್ರಮಾಣ ಸಂಪೂರ್ಣವಾಗಿ ಕುಸಿತವಾಗಿದೆ. ಆದ್ದರಿಂದ ಕಾಶ್ಮೀರಕ್ಕೆ ಎಂದಿನಂತೆ ವಿಮಾನದ ಹಾರಾಟ ಇದ್ದರೂ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ಆದ್ದರಿಂದ ಎಲ್ಲ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿವೆ. ಕಳೆದ 10 ದಿನಗಳ ಹಿಂದ ಬೆಂಗಳೂರು-ಕಾಶ್ಮೀರ ತುರ್ತು ಟಿಕೆಟ್ ದರ 40 ಸಾವಿರ ರೂ. ಇದ್ದದ್ದು, ಇದೀಗ ಕೇವಲ 8 ರಿಂದ 9 ಸಾವಿರ ರೂ.ಗೆ ಇಳಿಕೆ ಆಗಿದೆ.

ಇನ್ನು ಕಾಶ್ಮೀರ ಪ್ರವಾಸಕ್ಕೆ ಬುಕಿಂಗ್ ಮಾಡಿದ್ದ ಪ್ರವಾಸಿಗರು ತಮ್ಮ ಪ್ರವಾಸ ಕ್ಯಾನ್ಸಲ್ ಮಾಡಿ, ಅದೇ ಹಣಕ್ಕೆ ಬದಲಿ ಸ್ಥಳಗಳಿಗೆ ಟ್ರಿಪ್ ಪ್ಲಾನ್ ಮಾಡಿ ಬುಕಿಂಗ್ ಮಾಡುತ್ತಿದ್ದಾರೆ. ಕಶ್ಮೀರಕ್ಕೆ ಪರ್ಯಾಯವಾಗಿ ಹಿಮಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಗೋವಾ, ಅಂಡಮಾನ್ ನಿಕೋಬಾರ್ ದ್ವೀಪಗಳು ಸೇರಿದಂತೆ ವಿವಿಧೆಡೆ ಪ್ರವಾಸ ಹೋಗುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಕೆಲವು ಪ್ರವಾಸಿ ಸಂಸ್ಥೆಗಳು ಟಿಕೆಟ್ ಬುಕಿಂಗ್ ಕ್ಯಾನ್ಸಲ್‌ನಿಂದ ಸಂಕಷ್ಟಕ್ಕೂ ಸಿಲುಕಿದ್ದು, ಎಲ್ಲ ಯೋಜನೆಗಳನ್ನು ಬದಲಿ ಮಾಡಿಕೊಳ್ಳುತ್ತಿವೆ. ಇನ್ನು ಸದ್ಯದಲ್ಲಿ ಕಾಶ್ಮೀರಕ್ಕೆ ತುರ್ತಾಗಿ ಹೋಗಬೇಕು ಎಂದುಕೊಂಡವರು ಕೇವಲ 8 ರಿಂದ 9 ಸಾವಿರ ರೂ.ನಲ್ಲಿ ಹೋಗಬಹುದು.

ಇದನ್ನೂ ಓದಿ: ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು : ಅವಳ ಅಂತರಂಗ ಬಲ್ಲವರಾರು ಇಲ್ಲಿಲ್ಲಮ್ಮ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!