
ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ವರ್ಷಕ್ಕೆ ₹25-30 ಲಕ್ಷ ಸಂಬಳ ಪಡೆದರೆ, ಅದ್ಭುತ ಜೀವನ ನಡೆಸಲು ಸಾಧ್ಯವಿತ್ತು. ಆದರೆ ಈಗ ಕಾರು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆಹಾರ, ನಿತ್ಯಚೆಲವೆಲ್ಲ ಸೇರಿಕೊಂಡರೆ, ₹50 ಲಕ್ಷ ಸಂಬಳವೂ ಸಾಕಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಮಾಧ್ಯಮ ವರ್ಗದ ಟೆಕ್ಕಿಗಳು 'ಹೈ ಸ್ಯಾಲರಿ – ಲೋ ಸೇವಿಂಗ್' ಗುಣಲಕ್ಷಣದಿಂದ ಬಳಲುತ್ತಿದ್ದಾರೆ.
ಇನ್ನು ಬೆಂಗಳೂರು ನಗರ ತುಂಬಾ ಜನದಟ್ಟಣೆ ಮತ್ತು ದುಬಾರಿ ನಗರ ಕೂಡ. ಒಂದು ಸಾಮಾನ್ಯ ಮನೆ ಬಾಡಿಗೆಗೆ ತೆಗೆದುಕೊಳ್ಳೋಕೆ ಕೂಡ ಭಾರಿ ಹಣ ಬೇಕು. ದಿನೇ ದಿನೇ ಹೆಚ್ಚುತ್ತಿರುವ ಜೀವನ ವೆಚ್ಚ ಜನರಿಗೆ ತಲೆನೋವು ತಂದಿದೆ. ಚೆನ್ನಾಗಿ ಸಂಬಳ ಬಂದ್ರೂ ಜೀವನ ನಡೆಸೋದು ಕಷ್ಟ ಅಂತ ಬಹಳಷ್ಟು ಜನ ದೂರುತ್ತಾರೆ. ಆದ್ರೆ ಐಟಿ ಕ್ಷೇತ್ರದಲ್ಲಿ ಚೆನ್ನಾಗಿ ಸಂಬಳ ಪಡೆಯುವವರೂ ಇದ್ದಾರೆ. ಅಂಥ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗ್ತಾನೇ ಇರುತ್ತೆ. ಈಗ ವೈರಲ್ ಆಗಿರೋದು ಅಂಥದ್ದೇ ಒಂದು ಪೋಸ್ಟ್.
'50 ಲಕ್ಷ ಸಂಬಳ ಬಂದ್ರೂ 25 ಲಕ್ಷದಷ್ಟೇ ಉಪಯೋಗ ಅಲ್ವಾ?' ಅನ್ನೋದು ಪೋಸ್ಟ್‌ನಲ್ಲಿರೋ ಪ್ರಶ್ನೆ. ಸೌರವ್ ದತ್ತ ಅನ್ನೋರು ಈ ಪೋಸ್ಟ್‌ಅನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. 'ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ತುಂಬಾ ಜನ 50 ಲಕ್ಷ ಸಂಬಳ ಪಡೆಯುತ್ತಿದ್ದಾರೆ ಅಂತ ಕೇಳಿದ್ದೇನೆ. ಅದು ಉಬ್ಬಿಸಿ ಹೇಳಿರೋ ಸಿಟಿಸಿ ಆಗಿರಬಹುದು. ಇಲ್ಲಾಂದ್ರೆ 50 ಲಕ್ಷ ಅನ್ನೋದು ಈಗ 25 ಲಕ್ಷದಷ್ಟೇ ಉಪಯೋಗ ಅಂತ ಅರ್ಥ. ಯಾವುದಾದ್ರೂ ಟೆಕ್ಕಿಗಳು ಇದನ್ನ ಖಚಿತಪಡಿಸುತ್ತೀರಾ?' ಅಂತ ಕೇಳಿ ಪೋಸ್ಟ್ ಹಾಕಿದ್ದಾರೆ.
ಈ ಪೋಸ್ಟ್ ಬೇಗನೆ ವೈರಲ್ ಆಗಿದೆ. ಬಹಳಷ್ಟು ಜನ ಕಮೆಂಟ್‌ಗಳನ್ನು ಮಾಡಿದ್ದಾರೆ. ನಗರದಲ್ಲಿ ಜೀವನ ವೆಚ್ಚ ತುಂಬಾ ದುಬಾರಿಯಾಗಿರೋದ್ರಿಂದ ೫೦ ಲಕ್ಷ ಸಂಬಳನೂ ಸಾಲದು ಅಂತ ಕೆಲವರು ಹೇಳಿದ್ದಾರೆ. ಬಹುತೇಕರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 50 ಲಕ್ಷ ಸಂಬಳ ಯಾರಿಗೂ ಸಿಗ್ತಿಲ್ಲ, ಅದೆಲ್ಲಾ ಕೆಲವರು ಊಹೆಗೆ ಮಾತ್ರ ಹೇಳೋದಷ್ಟೇ ಅಂತ ಮತ್ತಷ್ಟು ನೆಟ್ಟಿಗರು ಹೇಳಿದ್ದಾರೆ. ಆದರೆ ಹೆಚ್ಚಿನ ಜನ 50 ಲಕ್ಷ ಸಂಬಳ ಸಿಗೋದು ನಿಜ ಅಂತ ಹೇಳಿದ್ದಾರೆ.
ವೈರಲ್ ಚರ್ಚೆ: ಜನರ ಪ್ರತಿಕ್ರಿಯೆ ಏನು?
ಆರ್ಥಿಕ ತಜ್ಞರು ಏನು ಹೇಳ್ತಾರೆ?
ಆರ್ಥಿಕ ತಜ್ಞರು ಹೇಳುವಂತೆ, 'ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಜನಸಂಖ್ಯೆಯ ಅತಿವೃದ್ದಿಯಿಂದ ವಸತಿ ವೆಚ್ಚ, ಉಪಯೋಗ ವಸ್ತುಗಳ ದರ ಮತ್ತು ಸೇವಾ ಶೂಲ್ಕಗಳು ಗಣನೀಯವಾಗಿ ಹೆಚ್ಚಾಗಿವೆ. ಇದರಿಂದಾಗಿ ಐಟಿ ಉದ್ಯೋಗಿಗಳ ದುಡಿಯುವ ಸಾಮರ್ಥ್ಯವಂತೂ ಹೆಚ್ಚಿದರೂ, ಉಳಿಸಿಕೊಳ್ಳುವ ಶಕ್ತಿ ಕುಸಿದಿದೆ.
ಮಾಜಿ ಟೆಕ್ ಉದ್ಯೋಗಿ ಪ್ರತಿಕ್ರಿಯೆ:
ನಾನು 2010ರಲ್ಲಿ ವರ್ಷಕ್ಕೆ ₹12 ಲಕ್ಷ ಸಂಬಳದಲ್ಲಿದ್ದಾಗ 2BHK ಇಂದಿರಾನಗರದಲ್ಲಿ ₹18,000ಗೆ ಸಿಕ್ಕಿತ್ತು. ಈಗ ಅದೇ ಮನೆ ₹65,000. ಕಾಫಿ ₹15 ಇತ್ತು, ಈಗ ₹200!'ಅಂತಾ ಟ್ವಿಟ್ಟರ್‌ನಲ್ಲಿ ಟಿಪ್ಪಣಿ ಬರೆದಿದ್ದಾರೆ.
(ಸಾಂದರ್ಭಿಕ ಎಐ ಚಿತ್ರ)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.