Bengaluru power cut details June 27 - June 29: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದಿನಿಂದ ಸತತ ಮೂರು ದಿನ ದುರಸ್ಥಿ ಕಾರ್ಯಾಚರಣೆ ಹಿನ್ನೆಲೆ ಪವರ್ ಕಟ್ ಮಾಡಲಾಗುವುದು ಎಂದು ವಿದ್ಯುತ್ ಸರಬರಾಜು ಸಂಸ್ಥೆ ಬೆಸ್ಕಾಂ ಮಾಹಿತಿ ನೀಡಿದೆ. ಯಾವ ಏರಿಯಾಗಳಲ್ಲಿ ಎಷ್ಟು ಗಂಟೆ ಪವರ್ ಕಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ನಗರಾದ್ಯಂತ ಇಂದಿನಿಂದ (ಜೂನ್ 27) ಜೂನ್ 29ರವರೆಗೂ ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಸಂಸ್ಥೆ (Bengaluru Electricity Supply Company) ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್ ಕಟ್ ಮಾಡಲು ನಿರ್ಧರಿಸಿದ್ದು, ವಿದ್ಯುತ್ ಕೇಬಲ್ ದುರಸ್ಥಿ ಕಾರ್ಯ ನಡೆಯಲಿದೆ. ಕೆಲವೆಡೆ ಹಳೆಯ ಕೇಬಲ್‌ಗಳ ಬದಲಿಗೆ ಹೊಸ ಕೇಬಲ್ ಅಳವಡಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ (Power cut across Bengaluru).
ಸೋಮವಾರ ಎಲ್ಲೆಲ್ಲಿ ಪವರ್ ಕಟ್?:
ಬೆಂಗಳೂರು ದಕ್ಷಿಣ ಬೆಸ್ಕಾಂ ಜೋನ್‌ನಲ್ಲಿನ ಏರಿಯಾಗಳು (Power cut in Bengaluru South Zone): ಕೋರಮಂಗಲ ಬ್ಲಾಕ್ 3,4,5 ಮತ್ತು 6, ಸಾಕ್ರಾ ಆಸ್ಪತ್ರೆ, ಬೆಂಗಳೂರು ಹೊರವರ್ತುಲ ರಸ್ತೆಯ ಸಾಲರ್‌ಪುರಿಯಾ ಸತ್ವ. ಮಧ್ಯಾಹ್ನ 11ರಿಂದ 12ಗಂಟೆ ವರೆಗೆ ಪವರ್ ಕಟ್ ಆಗಲಿದೆ.
ಬೆಂಗಳೂರು ಪೂರ್ವ ವಲಯ (Power cut in Bengaluru East Zone): ಹಳೆ ಬಯ್ಯಪ್ಪನಹಳ್ಳಿ, ಕೋಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಕೆಎಚ್‌ಬಿ ಕಾಲೋನಿ, ಹಚಿನ್ಸ್ ರಸ್ತೆ, ವೀಲರ್ ರಸ್ತೆ, ಬಾನಸ್ವಾಡಿ ರೈಲ್ವೇ ಸ್ಟೇಷನ್ ರಸ್ತೆ, ಲಿಂಗರಾಜಪುರ, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ ಮತ್ತು ಬಾಣಸವಾಡಿ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿ ಮಧ್ಯಾಹ್ನ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರೆಂಟ್ ಸೇವೆ ಇರುವುದಿಲ್ಲ.
ಇದನ್ನೂ ಓದಿ: PETROL - DIESEL PRICE TODAY: ಪೆಟ್ರೋಲ್, ಡೀಸೆಲ್ ಇಂದಿನ ದರ ಹೇಗಿದೆ? ಯಾವೆಲ್ಲಾ ಜಿಲ್ಲೆಗಳಲ್ಲಿ ಇಳಿಕೆ?
ಬೆಂಗಳೂರು ಪಶ್ಚಿಮ ವಲಯ (Power cut in Bengaluru West Zone): ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲ ಏರಿಯಾಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರು ಉತ್ತರ ವಲಯ (Power cut in Bengaluru North Zone): ಇಸ್ರೋ ಲೇಔಟ್, ನ್ಯೂ ಬಿಇಎಲ್ ರಸ್ತೆ ಸುತ್ತಮುತ್ತ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.
ಜೂನ್ 28ರಂದು ಎಲ್ಲೆಲ್ಲಿ ಪವರ್ ಕಟ್ (Power cut in Bengaluru on June 28)?:
ಪೂರ್ವ ವಲಯದ ಎಚ್ಆರ್‌ಬಿಆರ್ ಲೇಔಟ್ ಎರಡನೇ ಮತ್ತು ಮೂರನೇ ಬ್ಲಾಕ್, ಕಮ್ಮನಹಳ್ಳಿ ಮತ್ತು ಸುತ್ತಮುತ್ತಲ ಏರಿಯಾಗಳು, ಬಾಣಸವಾಡಿ. ಈ ಎಲ್ಲಾ ಏರಿಯಾಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪವರ್ ಕಟ್ ಇರಲಿದೆ.
ಇದನ್ನೂ ಓದಿ: Gold and Silver Price: ಹೇಗಿದೆ ಇಂದಿನ ಚಿನ್ನ, ಬೆಳ್ಳಿ ದರ? ಇಲ್ಲಿದೆ ಇಂದಿನ ದರ
ಜೂನ್ 29ರಂದು ಎಲ್ಲೆಲ್ಲಿ ಪವರ್ ಕಟ್ (Power cut in Bengaluru on June 29)?:
ಬೆಂಗಳೂರು ದಕ್ಷಿಣ ವಲಯದ ಕೋರಮಂಗಲ ಎರಡನೇ ಬ್ಲಾಕ್, ಮಡಿವಾಳ ಟೋಟಲ್ ಮಾಲ್, ಧವನಮ್ ಜಿವೆಲರ್ಸ್ ಬ್ಯುಲ್ಡಿಂಗ್, ಮಡಿವಾಳ ಸಂತೆ, ಸಿದ್ಧಾರ್ಥ ಕಾಲೋನಿ, ಕೋರಮಂಗಲ ಐದನೇ ಬ್ಲಾಕ್ ಮತ್ತು ಇಂಡಸ್ಟ್ರಿಯಲ್ ಲೇಔಟ್‌ಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಪೂರ್ವ ವಲಯದ ಕೆಲ ಏರಿಯಾಗಳಲ್ಲಿ ಸಹ ಬುಧವಾರ ಪವರ್ ಕಟ್ ಇರಲಿದೆ. ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ ಮೂರನೇ ಬ್ಲಾಕ್, ರಾಮಯ್ಯ ಲೇಔಟ್, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ಪವರ್ ಕಟ್ ಇರಲಿದೆ.