ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1 ಯಾರ್‍ಯಾರಿದ್ದಾರೆ ಲಿಸ್ಟ್‌ನಲ್ಲಿ?

Kannadaprabha News   | Kannada Prabha
Published : Jul 05, 2026, 07:23 AM IST
Bengaluru leads Avendus Wealth Hurun U30 list with 21 founders

ಸಾರಾಂಶ

Avendus Wealth Hurun U30 List ಅವೆಂಡಸ್‌ ವೆಲ್ತ್‌ ಹುರೂನ್‌ ಇಂಡಿಯಾ ಲಿ. ಬಿಡುಗಡೆ ಮಾಡಿದ 2026ನೇ ಸಾಲಿನ 30 ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂಬೈ ಹಿಂದಕ್ಕಿ ಬೆಂಗಳೂರು ಈ ಸ್ಥಾನ ಪಡೆದಿದೆ.

Avendus Wealth Hurun U30 List:

ನವದೆಹಲಿ (ಜು.5) ಅವೆಂಡಸ್‌ ವೆಲ್ತ್‌ ಹುರೂನ್‌ ಇಂಡಿಯಾ ಲಿ. ಬಿಡುಗಡೆ ಮಾಡಿದ 2026ನೇ ಸಾಲಿನ 30 ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂಬೈ ಹಿಂದಿಕ್ಕಿ ಬೆಂಗಳೂರು ಈ ಸ್ಥಾನ ಪಡೆದಿದೆ.

ಕಳೆದ ವರ್ಷ ಬೆಂಗಳೂರಿನ ಏಳು ಯುವ ಉದ್ಯಮಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಈ ಬಾರಿ 102 ಜನರ ಪೈಕಿ ಬೆಂಗಳೂರಿನ 21 ಉದ್ಯಮಿಗಳು ಸ್ಥಾನ ಗಿಟ್ಟಿಸಿದ್ದಾರೆ. ಕಂಪನಿಗಳ ಮಾರುಕಟ್ಟೆ ಮೌಲ್ಯ 2.5- 5 ಕೋಟಿ ಡಾಲರ್‌ಗಿಂತ ಹೆಚ್ಚಿರುವ ವ್ಯಕ್ತಿಗಳನ್ನು ಪಟ್ಟಿಗೆ ಪರಿಗಣಿಸಲಾಗಿದೆ (235 ಕೋಟಿ ರು - 475 ಕೋಟಿ ರು.)

ಯಾರ್‍ಯಾರಿದ್ದಾರೆ ಪಟ್ಟಿಯಲ್ಲಿ?:

ಬೆಂಗಳೂರಿನಿಂದ ಏರ್‌ಬೌಂಡ್‌ ಸಂಸ್ಥೆಯ ನಮನ್‌ ಪುಷ್ಪ್‌(21), ಝೆಪ್ಟೋ ಸಂಸ್ಥೆಯ ಕೈವಲ್ಯ ವೊರಾ (23), ಕಾವಾ ಅಥ್ಲೀಜರ್‌ ಸಂಸ್ಥೆಯ ಬೆಂಗಳೂರಿನ ಶ್ರೇಯಾ ಮಿತ್ತಲ್‌ (23) ಟಾಪ್‌ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 6 ಜನ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಶ್ರೇಯಾ ಮಿತ್ತಲ್‌ ಮತ್ತು ರಿಯಾ ಮಿತ್ತಲ್‌ ಸ್ಥಾನ ಪಡೆದ ಬೆಂಗಳೂರು ಮೂಲದ ಉದ್ಯಮಿಗಳಾಗಿದ್ದಾರೆ.

Avendus Wealth Hurun U30 List: ಕರ್ನಾಟಕ ನಂ.1:

ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜ್ಯದಿಂದ 22 ಮಂದಿ ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನ 18 ಕಂಪನಿ:

ಪಟ್ಟಿಯಲ್ಲಿ ಸ್ಥಾನ ಪಡೆದ 18 ಕಂಪನಿಗಳ ಮುಖ್ಯ ಕಚೇರಿ ಬೆಂಗಳೂರಿನಲ್ಲಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದ 14 ಕಂಪನಿಗಳು ಸ್ಥಾನಗಿಟ್ಟಿಸಿದ್ದವು.

ವಿಶ್ವೇಶ್ವರಯ್ಯ ವಿವಿಗೆ 4ನೇ ಸ್ಥಾನ:

ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ವಿವಿಯ ಸುಹಾಸ್‌ ರಾಜ್‌ಕುಮಾರ್‌ (30), ತನ್ವೀರ್‌ ಅಹಮದ್‌ (28) ಮತ್ತು ಉಜ್ವಲ್‌ ಸುಖೇಜಾ (25) ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಬಿಟ್ಸ್‌ ಪಿಲಾನಿ ಕಾಲೇಜು ಮೊದಲ ಸ್ಥಾನದಲ್ಲಿದೆ. ಈ ಕಾಲೇಜಿನ 11 ಮಂದಿ ಪಟ್ಟಿಯಲ್ಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

40ನೇ ವಯಸ್ಸಲ್ಲಿ ಕೆಲಸ ಕಳ್ಕೊಂಡ್ರೆ ಮುಂದೇನು? ಇವತ್ತೆ ಈ 5 ತಯಾರಿ ನಡೆಸಿ
ಜಸ್ಟ್ 14 ವರ್ಷಕ್ಕೆ ಬುರ್ಜ್ ಖಲೀಫಾದಲ್ಲಿ AI ಕಚೇರಿ ಸ್ಥಾಪನೆ! ಈ ಜೈನಂ ಜೈನ್ ಯಾರು?