ಕೆಲಸವಿಲ್ಲದ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಶೇಂಗಾ ಚಿಕ್ಕಿ

By Suvarna News  |  First Published Aug 7, 2023, 3:13 PM IST

ಕೋವಿಡ್ ಸಂಕಷ್ಟದಲ್ಲಿದ್ದ ಬಳ್ಳಾರಿ ಮಹಿಳೆಯರಿಗೆ ಶೇಂಗಾ ಚಿಕ್ಕಿ ತಯಾರಿಸುವ ಮೂಲಕ ಬದುಕು ಕಟ್ಟಿ ಕೊಡಲು ಸಹಕರಿಸಿದ್ದು ಜಿಲ್ಲಾಡಳಿತ. 


ಕೆ.ಎಂ.ಮಂಜುನಾಥ್

ಬಳ್ಳಾರಿ: ದಮನಿತ ಮಹಿಳೆಯರ ಬದುಕಿಗೆ ಆಶ್ರಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆರಂಭವಾದ ಸಣ್ಣದೊಂದು ಉದ್ಯಮ ಇದೀಗ ಹತ್ತಾರು ಜನರಿಗೆ ಕೆಲಸ ಕೊಡುವಷ್ಟು ಬೆಳೆದು ನಿಂತಿದೆ. ಕೋವಿಡ್‌ನಲ್ಲಿ ಸಂಕಷ್ಟ ಎದುರಿಸುತ್ತಿದ್ದ ದಮನಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ಆಶಯದಿಂದ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ
ಜೊತೆ ಚರ್ಚಿಸಿದ್ದರು. ಅಲ್ಲದೇ, ದಮನಿತ ಮಹಿಳೆಯರಿಗೆ ಏನಾದರೂ ಕೆಲಸ ನೀಡಬೇಕು. ಅದರಿಂದ ಅವರ ಆರ್ಥಿಕ ಬದುಕು ಸುಸ್ಥಿರಗೊಳ್ಳಬೇಕೆಂದು ಯೋಚಿಸಿ, ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. 

ಅಂತೆಯೇ ದಮನಿತ ಮಹಿಳೆಯರಿಗೆ 'ಶೇಂಗಾ ಚಿಕ್ಕಿ' ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ನಿರ್ಧರಿಸಲಾಗುತ್ತದೆ. ಮಹಿಳೆಯರು ತಯಾರಿಸಿದ ಶೇಂಗಾ ಚಿಕ್ಕಿಯನ್ನು ಮಾರುಕಟ್ಟೆ ಮಾಡುವುದು ಹೇಗೆ? ಎಂಬ
ಪ್ರಶ್ನೆ ಎದುರಾಗುತ್ತದೆ. ಆಗ ಹೊಳೆದಿದ್ದೇ ಅಂಗನವಾಡಿ ಕೇಂದ್ರಗಳಿಗೆ ಶೇಂಗಾ ಚಿಕ್ಕಿಯನ್ನು ಪೂರೈಸುವ ನಿರ್ಧಾರ. ಕೊನೆಗೆ ದಮನಿತ ಮಹಿಳೆಯರಿಗೆ ಶೇಂಗಾಚಿಕ್ಕಿ ತಯಾರಿಕೆ ಕುರಿತು, ತರಬೇತಿ ನೀಡಲಾಗುತ್ತದೆ.

ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು

Latest Videos

undefined

ಮಹಿಳೆಯರು ತಯಾರಿಸಿದ ಶೇಂಗಾ ಚಿಕ್ಕಿಯು ಬಳ್ಳಾರಿ ನಗರ ಹಾಗೂ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುತ್ತದೆ. 20 ಮಹಿಳೆಯರು ಶೇಂಗಾಚಿಕ್ಕಿ ತಯಾರಿಕೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ತಲಾ 8 ರಿಂದ 10 ಸಾವಿರ ರು.ವರೆಗೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಶೇಗಾಚಿಕ್ಕಿ ತಯಾರಿಕೆಗೆ ಬೇಕಾದ ಶೇಂಗಾ, ಬೆಲ್ಲವನ್ನು ಮಹಿಳೆಯರೇ ಖರೀದಿಸಿ ಚಿಕ್ಕಿ ತಯಾರಿಸುತ್ತಾರೆ. ಬಳ್ಳಾರಿ ನಗರ ಹಾಗೂ ಬಳ್ಳಾರಿ ತಾಲೂಕಿನ ಗ್ರಾಮೀಣ ಪ್ರದೇಶ ಸೇರಿ ಒಟ್ಟು ಪ್ರತಿ ತಿಂಗಳಿಗೆ 12 ರಿಂದ 14 ಲಕ್ಷ ಪೀಸ್ ಶೇಂಗಾಚಿಕ್ಕಿಯನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುತ್ತಿದೆ. ಆರಂಭದಲ್ಲಿ ಕೈಯಿಂದಲೇ  ಈ ತಯಾರಿಸುತ್ತಿದ್ದ ಮಹಿಳೆಯರಿಗೆ ಇಲಾಖೆ ನೆರವಾಗಿದ್ದು,  ಆಧುನಿಕ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಒದ್ದಾಡುವ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ನಕುಲ್ ಅವರ ಕಾಳಜಿಯಿಂದ 20ಕ್ಕೂ ಹೆಚ್ಚು ದಮನಿತ ಮಹಿಳೆಯರು ಈ ಚಿಕ್ಕಿ ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ.

ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?
 

ದಮನಿತ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆಯಬೇಕು ಎಂಬ ಉದ್ದೇಶದಿಂದ ಶೇಂಗಾಚಿಕ್ಕಿ ತಯಾರಿಕೆಗೆ ಪ್ರೋತ್ಸಾಹಿಸಲಾಯಿತು. ಇದರಿಂದ ಅನೇಕರು ತಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ.
- ನಾಗವೇಣಿ, ಸಿಡಿಪಿಒ, ಬಳ್ಳಾರಿ ಗ್ರಾಮೀಣ ವಲಯ, ಬಳ್ಳಾರಿ.

click me!