ಸಾಫ್ಟ್‌ವೇರ್‌ ಎಂಜಿನಿಯರ್ ಆಗೋದು ತುಂಬಾ ಸುಲಭ; ಇದು ಮಾತ್ರ ತುಂಬಾ ಕಷ್ಟ ಅಂದ್ರು ನಾರಾಯಣ ಮೂರ್ತಿ

By BK Ashwin  |  First Published Nov 19, 2023, 11:18 AM IST

ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಹಣಕಾಸು ವಿಶ್ಲೇಷಕರಾಗುವುದು ತುಂಬಾ ಸುಲಭ. ಆದರೆ ಉದ್ಯಮಿಯಾಗಲು ಸಾಕಷ್ಟು ಕೆಲಸ ಮತ್ತು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಇನ್ಪೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.


ದೆಹಲಿ (ನವೆಂಬರ್ 19, 2023): ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಕೆಲಸದ ಸಮಯವಾಗಿ ನೀಡಿದ ಹೇಳಿಕೆಗಳ ವಿಚಾರಕ್ಕೆ ತೀವ್ರ ಚರ್ಚೆಗೆ ಗ್ರಾಸರಾದರು. ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕು ಎಂದು ನೀಡಿದ ಅವರ ಹೇಳಿಕೆಗೆ ಹೆಚ್ಚು ಪರ - ವಿರೋಧ ಪ್ರತಿಕ್ರಿಯೆಗೆ ಕಾರಣವಾಯಿತು. ಇದೀಗ ನಾರಾಯಣ ಮೂರ್ತಿ ಮತ್ತೊಂದು ವಿಚಾರ ಮಾತನಾಡಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಹಣಕಾಸು ವಿಶ್ಲೇಷಕರಾಗುವುದು ತುಂಬಾ ಸುಲಭ. ಆದರೆ ಉದ್ಯಮಿಯಾಗಲು ಸಾಕಷ್ಟು ಕೆಲಸ ಮತ್ತು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಇನ್ಪೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು. ಅಲ್ಲದೆ, ಉದ್ಯಮಶೀಲತೆ ಕಠಿಣ ಮಾರ್ಗವಾಗಿರುವುದರಿಂದ ತಮ್ಮ ಸ್ಟಾರ್ಟ್‌ಅಪ್‌ಗಳೊಂದಿಗೆ ಆಧುನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ರಿಸ್ಕ್‌ - ತೆಗೆದುಕೊಳ್ಳುವವರ ಕಡೆಗೆ ಸಮಾಜವು ಹೆಚ್ಚು ಪ್ರೋತ್ಸಾಹಿಸಬೇಕಾಗಿದೆ ಎಂದೂ ನಾರಾಯಣ ಮೂರ್ತಿ ಹೇಳಿದರು.

Tap to resize

Latest Videos

ಇದನ್ನು ಓದಿ: 100 ದಿನದಲ್ಲೇ ರೆಡಿಯಾಯ್ತು ಟೆಸ್ಲಾ ಸೈಬರ್‌ ಟ್ರಕ್‌ ಮರದ ವಾಹನ: ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಹೀಗಿದೆ..

ಮಾಧ್ಯಮವೊಂದಕ್ಕೆ ಮಾತನಾಡಿದ ನಾರಾಯಣಮೂರ್ತಿ 20 ವರ್ಷಗಳ ಹಿಂದೆ ಅಥವಾ 10 ವರ್ಷಗಳ ಹಿಂದೆ ನಾವು ಕಂಡು ಕೇಳರಿಯದ ಅನೇಕ ವಿಚಾರಗಳೊಂದಿಗೆ ಅನೇಕ ಉದ್ಯಮಿಗಳು ಈಗ ಹೊರಬರುತ್ತಿದ್ದಾರೆ ಎಂದೂ ಹೇಳಿದರು. ಅಲ್ಲದೆ, ಉದ್ಯಮಿಗಳಿಗೆ ಸುಲಭವಾಗಲು ಸರ್ಕಾರವು ಬಹಳಷ್ಟು ಕೆಲಸಗಳನ್ನು ಮಾಡಿದೆ. ಆದರೆ ಮುಖ್ಯವಾದುದು ಕುಟುಂಬಗಳು, ಸಮುದಾಯಗಳು, ಅವರು ಉದ್ಯಮಿಗಳನ್ನು ಗೌರವಿಸಬೇಕು, ಅವರಲ್ಲಿ ಕೆಲವರು ಯಶಸ್ವಿಯಾಗಲಿಲ್ಲ. 

ಆದರೂ, ನಾವು ಅವರನ್ನು ಗೌರವಿಸುತ್ತೇವೆ, ಏಕೆಂದರೆ ಅವರು ಈ ಮಾರ್ಗವನ್ನು ಸವೆಯಲು ಒಪ್ಪಿಕೊಂಡರು. ಅಸಾಧಾರಣ ವಿಷಯಗಳನ್ನು ಮಾಡಲು ಒಪ್ಪಿಕೊಂಡರು ಎಂದೂ ನಾರಾಯಣ ಮೂರ್ತಿ ತಿಳಿಸಿದರು. ಇಂದಿನ ದಿನಗಳಲ್ಲಿ ಯುವಕರು ಆತ್ಮವಿಶ್ವಾಸದಿಂದ ಕೂಡಿದ್ದಾರೆ. ಆದರೆ ಒಟ್ಟಾರೆ ಸಮಾಜವು ಉದ್ಯಮಶೀಲತೆ ಬಹಳ ಕಷ್ಟಕರವಾದ ಮಾರ್ಗವಾಗಿದೆ ಎಂದು ಒಪ್ಪಿಕೊಳ್ಳುವಲ್ಲಿ ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂದು ಹೇಳಿದರು. 

ಇದನ್ನೂ ಓದಿ: ಜಾಗತಿಕ ತೈಲ ದರ, ಹಣದುಬ್ಬರ ಇಳಿಕೆಗೆ ಭಾರತ ಕಾರಣ: ಜಗತ್ತಿನ ಧನ್ಯವಾದಕ್ಕಾಗಿ ಕಾಯುತ್ತಿದ್ದೇವೆಂದ ಎಸ್‌. ಜೈಶಂಕರ್‌!

ಈ ಮಧ್ಯೆ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಕಳೆದ ವಾರ ಮತ್ತೆ ಅಜ್ಜಿಯಾಗಿದ್ದಾರೆ. ದಂಪತಿಯ ಪುತ್ರ ರೋಹನ್ ಮೂರ್ತಿ ಮತ್ತು ಅವರ ಪತ್ನಿ ಅಪರ್ಣಾ ಕೃಷ್ಣನ್ ಗಂಡು ಮಗುವಿಗೆ ಜನ್ಮ ನೀಡಿದರು. ನವಜಾತ ಶಿಶು ನಾರಾಯಣ ಮೂರ್ತಿಯವರ ಮೂರನೇ ಮೊಮ್ಮಗುವಾಗಿದೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿಗೆ ಸಹ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಇದನ್ನೂ ಓದಿ:  ಜನರಲ್‌ ಬೋಗಿ, ಸ್ಲೀಪರ್ ಕೋಚ್‌ ಸಂಖ್ಯೆ ಕಡಿತಗೊಳಿಸಿದ್ದೇ ರೈಲುಗಳಲ್ಲಿ ಜನದಟ್ಟಣೆಗೆ ಕಾರಣ? ರೈಲ್ವೆ ಸಚಿವರ ಸ್ಪಷ್ಟನೆ..

click me!