
ಬೆಂಗಳೂರು[ಜ.25]: ಬಿಬಿಎಂಪಿಯು ಬೆಂಗಳೂರಿನ ಟಾಪ್ ಹಂಡ್ರೆಡ್ ತೆರಿಗೆ ವಂಚಕರ ಹೆಸರು ಬಯಲುಗೊಳಿಸಿದೆ. ಈ ಪಟ್ಟಿಯಲ್ಲಿ ಬಿಬಿಎಂಪಿಗೆ ತೆರಿಗೆ ವಂಚಿಸಿದ ಈ ಪಟ್ಟಿಯಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ, ಬಿಎಂಆರ್ ಸಿ ಸಂಸ್ಥೆಗ: ಹೆಸರುಗಳಿವೆ. ಹೀಗಾಗಿ ತನಗೆ ತೆರಿಗೆ ವಂಚಿಸಿದವರ ಕಚೇರಿಗೆ ಬೀಗ ಹಾಕಲು ಬಿಬಿಎಂಪಿ ತೀರ್ಮಾನಿಸಿದೆ.
ಯಾವ ಕಂಪನಿ..? ಎಷ್ಟು ಬಾಕಿ..?
ಆರ್ ಎನ್ ಜೆಡ್ ಇನ್ಫೋಟೆಕ್ ಕಂಪನಿ ಕಳೆದ 10 ವರ್ಷದಿಂದ ತೆರಿಗೆ ಕಟ್ಟದೆ 25,57,90,911 ರೂ. ಬಾಕಿ.
ಬೆಂಗಳೂರು ರೇಸ್ ಕೋರ್ಸ್ 2 ವರ್ಷದಿಂದ ತೆರಿಗೆ ಕಟ್ಟದೆ 1,29,30,480 ರೂ.ಬಾಕಿ
ಬಿಎಂಟಿಸಿ 5 ವರ್ಷದಿಂದ ತೆರಿಗೆ ಕಟ್ಟದೆ 7,01,18,384 ರೂ. ಬಾಕಿ.
ಕೆಎಸ್ಆರ್ಟಿಸಿ 1,81,56,137 ರೂ.
ಬಿಎಂಆರ್ಸಿಎಲ್ 1,19,50,118 ರೂ.
ದಯಾನಂದ ಸಾಗರ ಕಾಲೇಜ್ 6 ವರ್ಷ 1,19,21,228 ರೂ.
ವಿಪ್ರೋ ಕಂಪನಿ 6 ವರ್ಷ 10,87,42,602 ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ.
ಹೀಗೆ ಪ್ರಸಿದ್ಧ ಕಂಪೆನಿ ಹಾಗೂ ಸಂಸ್ಥೆಗಳೇ ಬಿಬಿಎಂಪಿಗೆ ತೆರಿಗೆ ಪಾವತಿಸದೆ ಕೈಕಟ್ಟಿ ಕುಳಿತುಕೊಂಡಿವೆ. ಇದನ್ನೀಗ ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿಯು ಒಂದು ತಿಂಗಳಲ್ಲಿ ತೆರಿಗೆ ಕಟ್ಟದಿದ್ರೆ ಕಚೇರಿಗಳಿಗೆ ಬಿಗ ಹಾಕುವುದಾಗಿ ನೊಟೀಸ್ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.