2 ನಿಮಿಷ ಮಾತಾಡಿ ಭಾರತದಲ್ಲಿ ತೆರಿಗೆ ಇಳಿಸಿಬಿಟ್ಟೆ: ಟ್ರಂಪ್ ಲೊಳಲೊಟ್ಟೆ!!

By Web DeskFirst Published Jan 25, 2019, 1:00 PM IST
Highlights

ಟ್ರಂಪ್ ಸಾಹೇಬರ ಗತ್ತು, ಗೈರತ್ತು ನೋಡಿದಿರಾ?| 2 ನಿಮಿಷ ಮಾತಾಡಿ ತೆರಿಗೆ ಇಳಿಸಿದ್ರಂತೆ ಟ್ರಂಪ್ ಸಾಹೇಬರು| ಭಾರತದಲ್ಲಿ ದ್ವಿಚಕ್ರ ವಾಹನದ ಆಮದಿನ ಮೇಲಿನ ತೆರಿಗೆ ಇಳಿಕೆ| ತೆರಿಗೆ ಇಳಿಕೆ ಮಾಡಲು ತಾವೇ ಕಾರಣ ಎಂದ ಅಮೆರಿಕ ಅಧ್ಯಕ್ಷ| ಅಮೆರಿಕದ ವಿಸ್ಕಿ, ವೈನ್ ಮೇಲಿನ ಆಮದು ಸುಂಕ ಹೆಚ್ಚಳಕ್ಕೆ ಅಸಮಾಧಾನ

ವಾಷಿಂಗ್ಟನ್(ಜ.25): ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ದ್ವಿಚಕ್ರವಾಹನಗಳ ಆಮದಿನ ಮೇಲೆ ಶೇ.100 ರಷ್ಟು ತೆರಿಗೆ ವಿಧಿಸಿತ್ತು. ಆದರೆ ತಾವು ಕೇವಲ 2 ನಿಮಿಷಗಳಲ್ಲಿ ಅದನ್ನು ಶೇ.50ಕ್ಕೆ ಇಳಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

ಭಾರತ ಕಳೆದ ವರ್ಷದಲ್ಲಿ  ಹಾರ್ಲೆ ಡೇವಿಡ್ ಸನ್ ಸೇರಿದಂತೆ ವಿದೇಶಿ ದ್ವಿಚಕ್ರವಾಹನಗಳ ಮೇಲಿನ ಆಮದು ಸುಂಕವನ್ನು ಶೇ.100 ರಿಂದ ಶೇ.50 ರಷ್ಟು ಇಳಿಕೆ ಮಾಡಿತ್ತು. 

ಇದೇ ವೇಳೆ ಅಮೆರಿಕ ವಿಸ್ಕಿ ಮತ್ತು ವೈನ್ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸಿರುವುದಕ್ಕೆ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ. ಮದ್ಯದ ಆಮದಿನ ಮೇಲೆ ಭಾರತ ಅತಿ ಹೆಚ್ಚು ತೆರಿಗೆ ವಿಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

click me!