business : ಕ್ರೆಡಿಟ್‌ ಕಾರ್ಡ್‌ ಬಂದ್‌ ಮಾಡಿಲ್ಲ ಅಂದ್ರೆ ಬ್ಯಾಂಕ್ ನಿಮಗೆ ಪ್ರತಿ ದಿನ ನೀಡ್ಬೇಕು 500 ರೂ.

By Roopa Hegde  |  First Published Aug 17, 2024, 11:06 AM IST

ಕ್ರೆಡಿಟ್ ಕಾರ್ಡ್ ಬಂದ್ ಮಾಡಲು ಬ್ಯಾಂಕ್ ವಿಳಂಬ ಮಾಡಿದರೆ ಗ್ರಾಹಕರಿಗೆ ದಂಡ ಸಿಗುತ್ತದೆ ಎಂದು RBI ನಿಯಮ ಹೇಳುತ್ತದೆ. ಬ್ಯಾಂಕ್‌ಗಳು ಗ್ರಾಹಕರ ಅರ್ಜಿಯನ್ನು ನಿರ್ಲಕ್ಷಿಸಿದರೆ ದಿನಕ್ಕೆ 500 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಂದ್ ಮಾಡುವ ಮೊದಲು ಬಾಕಿ ಪಾವತಿ, ರಿವಾರ್ಡ್ ಪಾಯಿಂಟ್ ರಿಡೆಂಪ್ಷನ್ ಮುಂತಾದ ಮುಖ್ಯ ಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ.


ಕ್ರೆಡಿಟ್ ಕಾರ್ಡ್ (Credit card)  ಬಂದ್ ಮಾಡ್ಬೇಕು ಅಂತ ಬ್ಯಾಂಕ್ (Bank) ಗೆ ಸೂಚನೆ ಏನೋ ನೀಡಿರ್ತೀರಿ. ಆದ್ರೆ ಬ್ಯಾಂಕ್ ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಂದ್ ಮಾಡೋದಿಲ್ಲ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿಲ್ಲ ಅಂತ ಗ್ರಾಹಕ (Customer)ರು ಟೆನ್ಷನ್ ಮಾಡ್ಕೊಳ್ಳೋ ಅವಶ್ಯಕತೆ ಇಲ್ಲ. ಯಾಕೆಂದ್ರೆ, ಇದ್ರಿಂದ ನಿಮಗೆ ನಷ್ಟವಿಲ್ಲ. ಇದು ಬ್ಯಾಂಕ್ ತಪ್ಪು. ಹಾಗಾಗಿ ಬ್ಯಾಂಕ್, ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಂದ್ ಮಾಡಿಲ್ಲ ಅಂದ್ರೆ, ಅದೇ ಗ್ರಾಹಕರಿಗೆ ದಂಡ ನೀಡ್ಬೇಕು. ಅದೂ ಪ್ರತಿ ದಿನದ ಲೆಕ್ಕದಲ್ಲಿ ಬ್ಯಾಂಕ್ ಬಡ್ಡಿ (interest) ಪಾವತಿ ಮಾಡ್ಬೇಕು. 

ಈಗ ಕ್ರೆಡಿಟ್ ಕಾರ್ಡ್ ಗೆ ಬರ ಇಲ್ಲ. ಬ್ಯಾಂಕ್ ಗಳು ಗ್ರಾಹಕರನ್ನು ಹುಡುಕಿಕೊಂಡು ಬಂದು ಕ್ರೆಡಿಟ್ ಕಾರ್ಡ್ ನೀಡುತ್ವೆ. ಅನೇಕರು ಒಂದಲ್ಲ ಎರಡಲ್ಲ ಮೂರ್ನಾಲ್ಕು ಕ್ರೆಡಿಟ್ ಕಾರ್ಡ್ ಇಟ್ಕೊಂಡಿರ್ತಾರೆ. ಕ್ರೆಡಿಟ್ ಕಾರ್ಡ್ ಇದ್ದಷ್ಟು ಸಮಸ್ಯೆ ಹೆಚ್ಚು. ಸರಿಯಾದ ಸಮಯಕ್ಕೆ ಹಣಪಾವತಿ ಮಾಡಿಲ್ಲ ಅಂದ್ರೆ ದಂಡ, ಬಡ್ಡಿ ಅಂತ ಜೇಬು ಖಾಲಿಯಾಗುತ್ತೆ. ಕೆಲ ಬಾರಿ ನಾವು ಕ್ರೆಡಿಟ್ ಕಾರ್ಡ್ ಪಡೆದಿರುತ್ತೇವೆಯಾದ್ರೂ ಅದನ್ನು ಬಳಕೆ ಮಾಡೋದಿಲ್ಲ. ಈ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಬಂದ್ ಮಾಡಲು ಬ್ಯಾಂಕ್ ಗೆ ಗ್ರಾಹಕರು ಹೇಳ್ತಾರೆ. ಆದ್ರೆ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಬಂದ್ ಮಾಡೋದಿಲ್ಲ. ಈ ಬಗ್ಗೆ ಆರ್ ಬಿಐ ನಿಯಮ ಏನು ಎಂಬುದನ್ನು ನೀವು ತಿಳಿದಿರಬೇಕು. 

Latest Videos

undefined

ಇಪಿಎಫ್‌ ಫಂಡ್‌ನಿಂದ ನೀವು ಎಲ್‌ಐಸಿ ಪಾಲಿಸಿ ಪ್ರೀಮಿಯಂ ಕೂಡ ಕಟ್ಟಬಹುದು..! ಏನ್‌ ಮಾಡ್ಬೇಕು ಅನ್ನೋದನ್ನ ತಿಳಿದುಕೊಳ್ಳಿ!

ಕ್ರೆಡಿಟ್ ಕಾರ್ಡ್ ಬಂದ್ ಮಾಡೋ ವಿಷ್ಯದಲ್ಲಿ ಆರ್ ಬಿಐ ನಿಯಮವೇನು? : ನೀವು ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ ನಂತ್ರವೂ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಬಂದ್ ಮಾಡಿಲ್ಲ ಎಂದಾದಾಗ ಅದು ಬ್ಯಾಂಕ್ ತಪ್ಪಾಗುತ್ತದೆ. ಹಾಗಾಗಿ ಬ್ಯಾಂಕ್ ನಿಮಗೆ ದಿನಕ್ಕೆ 500 ರೂಪಾಯಿಯಂತೆ ದಂಡ ವಿಧಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಂದ್ ಮಾಡುವಂತೆ ಗ್ರಾಹಕರು ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಅದ್ರ ಪ್ರೊಸೆಸ್ ಶುರು ಆಗ್ಬೇಕು. ಆದ್ರೆ ಬ್ಯಾಂಕ್, ಏಳು ದಿನವಾದ್ರೂ ತನ್ನ ಕೆಲಸ ಶುರು ಮಾಡಿಲ್ಲ ಎಂದಾದ್ರೆ ಅದ್ರ ನಂತ್ರ ಪ್ರತಿ ದಿನ ಬ್ಯಾಂಕ್ ಗ್ರಾಹಕರಿಗೆ 500 ರೂಪಾಯಿ ದಂಡ ಪಾವತಿ ಮಾಡಬೇಕು. ಇದಕ್ಕೂ ಬ್ಯಾಂಕ್ ಷರತ್ತು ವಿಧಿಸುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿ ಬಾಕಿ ಇರಬಾರದು. 2022ರಲ್ಲಿ ಆರ್ ಬಿಐ ಈ ನಿಯಮವನ್ನು ಜಾರಿಗೆ ತಂದಿದೆ. 

ಕ್ರೆಡಿಟ್ ಕಾರ್ಡ್ ಬಂದ್ ಮಾಡುವ ನಿಯಮ : 

ಬಾಕಿ ಪಾವತಿಸಿ : ಕ್ರೆಡಿಟ್ ಕಾರ್ಡ್ ಬಂದ್ ಮಾಡ್ಬೇಕು ಅಂದ್ರೆ ಮೊದಲು ನಿಮ್ಮ ಬಾಕಿಯನ್ನು ಚೆಕ್ ಮಾಡಿ. ನೀವು ಬ್ಯಾಂಕ್ ಗೆ ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನು ಪರಿಶೀಲಿಸಿ ಅದನ್ನು ಪಾವತಿ ಮಾಡಿ. ನೀವು ಕ್ರೆಡಿಟ್ ಕಾರ್ಡ್ ನಲ್ಲಿ ಬಾಕಿ ಉಳಿಸಿಕೊಂಡ್ರೆ ನಿಮ್ಮ ಕಾರ್ಡ್ ಬಂದಾಗೋದಿಲ್ಲ.

ರಿವಾರ್ಡ್ ಪಾಯಿಂಟ್ ರಿಡೀಮ್ ಮಾಡಿ : ರಿವಾರ್ಡ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಅವುಗಳನ್ನು ರಿಡೀಮ್ ಮಾಡಲು ಮರೆಯಬೇಡಿ. ನೀವು ಖರ್ಚು ಮಾಡುವ ಹಣಕ್ಕೆ ಬದಲಾಗಿ ಈ ಅಂಕಗಳನ್ನು ನೀಡಲಾಗುತ್ತದೆ. ಅದನ್ನು ಪಡೆದುಕೊಳ್ಳುವುದು ನಿಮ್ಮ ಹಕ್ಕು.

ಫಾಕ್ಸ್‌ಕಾನ್‌ ಸಿಇಒ ಯಂಗ್ ಲಿಯು ಬೆಂಗಳೂರಿಗೆ ಆಗಮನ: ಐಫೋನ್ ಕಂಪನಿಗೆ 300 ಎಕರೆ ಭೂಮಿ

ಬ್ಯಾಂಕ್ ಸಂಪರ್ಕಿಸಿ : ಬ್ಯಾಂಕ್ ಗೆ ಕರೆ ಮಾಡಿ ಇಲ್ಲವೆ ಶಾಖೆಗೆ ಹೋಗಿ ಕ್ರೆಡಿಟ್ ಕಾರ್ಡ್ ಮುಚ್ಚುವ ಬಗ್ಗೆ ಅರ್ಜಿ ಸಲ್ಲಿಸಿ. ಅಗತ್ಯವಿರುವ ಮಾಹಿತಿಯನ್ನು ಪಾವತಿಸಿ. 

ಕಾರ್ಡ್ ನಾಶಮಾಡಿ : ಕ್ರೆಡಿಟ್ ಕಾರ್ಡ್ ಬಂದ್ ಆದ್ಮೇಲೆ ಅದನ್ನು ಹಾಗೆ ಇಟ್ಕೊಳ್ಳಬೇಡಿ. ಅದನ್ನು ಕತ್ತರಿಸಿ ಕಸಕ್ಕೆ ಎಸೆಯಿರಿ. 

click me!