ಪ್ರತಿ ತಿಂಗಳ ಪ್ರಾರಂಭಕ್ಕೂ ಮುನ್ನ ಆರ್ ಬಿಐ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 16 ದಿನಗಳ ಕಾಲ ರಜೆಯಿದೆ.
ನವದೆಹಲಿ (ಆ.26): ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಪ್ರಾರಂಭವಾಗಲು ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ಎಂದರೆ ಹಬ್ಬಗಳ ತಿಂಗಳು ಎಂದೇ ಹೇಳಬಹುದು. ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಈದ್ ಇ ಮಿಲಾದ್ ಸೇರಿದಂತೆ ಅನೇಕ ಹಬ್ಬಗಳಿವೆ. ಈ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಗಳಿವೆ. ವಾರಂತ್ಯದ ರಜೆಗಳು ಸೇರಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ.
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಕರ್ನಾಟಕದಲ್ಲಿ ಇನ್ನಷ್ಟು ಶಾಖೆ ಶೀಘ್ರ
ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ ಭೇಟಿ ನೀಡಿ ಮಾಡಲೇಬೇಕಾದ ಕೆಲಸವಿದ್ದರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಇನ್ನು 2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಸೆಪ್ಟೆಂಬರ್ 30ರ ತನಕ ಮಾತ್ರ ಕಾಲಾವಕಾಶ ನೀಡಲಾಗಿದೆ. ಹೀಗಾಗಿ 2 ಸಾವಿರ ರೂಪಾಯಿ ನೋಟುಗಳನ್ನು ಖಾತೆಗೆ ಜಮೆ ಮಾಡಲು ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆಯಿದ್ರೆ ರಜಾಪಟ್ಟಿ ನೋಡಿ ಪ್ಲ್ಯಾನ್ ಮಾಡಿ.
ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:
ಸೆಪ್ಟೆಂಬರ್ 3: ಭಾನುವಾರ
ಸೆಪ್ಟೆಂಬರ್ 6: ಶ್ರೀ ಕೃಷ್ಣ ಜನ್ಮಾಷ್ಟಮಿ (ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಬಿಹಾರದಲ್ಲಿ ರಜೆ)
ಸೆಪ್ಟೆಂಬರ್ 7: ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣ ಅಷ್ಟಮಿ (ಗುಜರಾತ್, ಚಂಢೀಗಢ, ಮಧ್ಯ ಪ್ರದೇಶ, ಸಿಕ್ಕಿಂ, ರಾಜಸ್ಥಾನ, ಜಮ್ಮು, ಛತ್ತೀಸ್ ಗಢ, ಜಾರ್ಖಂಡ, ಮೇಘಾಲಯ, ಹಿಮಾಚಲ ಪ್ರದೇಶ ಹಾಗೂ ಶ್ರೀನಗರದಲ್ಲಿ ರಜೆ)
ಸೆಪ್ಟೆಂಬರ್ 9: ಎರಡನೇ ಶನಿವಾರ
ಸೆಪ್ಟೆಂಬರ್ 10: ಭಾನುವಾರ
ಸೆಪ್ಟೆಂಬರ್ 17: ಭಾನುವಾರ
ಸೆಪ್ಟೆಂಬರ್ 18: ವರಸಿದ್ಧಿ ವಿನಾಯಕ ವ್ರತ ಹಾಗೂ ವಿನಾಯಕ ಚತುರ್ಥಿ (ಕರ್ನಾಟಕ ಹಾಗೂ ತೆಲಂಗಣ)
ಸೆಪ್ಟೆಂಬರ್ 19: ಗಣೇಶ ಚತುರ್ಥಿ (ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಹಾಗೂ ಗೋವಾ)
ಸೆಪ್ಟೆಂಬರ್ 20: ಗಣೇಶ ಚತುರ್ಥಿ ಹಾಗೂ ನುಖೈ (ಒಡಿಶಾ ಹಾಗೂ ಗೋವಾ)
ಸೆಪ್ಟೆಂಬರ್ 22: ಶ್ರೀ ನಾರಾಯಣ ಗುರು ಸಮಾಧಿ ದಿನ (ಕೇರಳ)
ಭಾರತೀಯ ಕರೆನ್ಸಿಯಲ್ಲೇ ಸಾಲ ನೀಡಲಿದೆ ಬ್ರಿಕ್ಸ್ ಬ್ಯಾಂಕ್; ಅಕ್ಟೋಬರ್ ವೇಳೆಗೆ ಬರಲಿದೆ ರೂಪಾಯಿ ಬಾಂಡ್
ಸೆಪ್ಟೆಂಬರ್ 23: ನಾಲ್ಕನೇ ಶನಿವಾರ ಹಾಗೂ ಮಹಾರಾಜ ಹರಿ ಸಿಂಗ್ ಜನ್ಮದಿನ (ಜಮ್ಮು ಮತ್ತು ಕಾಶ್ಮೀರ)
ಸೆಪ್ಟೆಂಬರ್ 24: ಭಾನುವಾರ
ಸೆಪ್ಟೆಂಬರ್ 25: ಶ್ರೀಮಂತ್ ಶಂಕರ್ ದೇವ ಜನ್ಮದಿನ (ಅಸ್ಸಾಂ)
ಸೆಪ್ಟೆಂಬರ್ 27: ಮಿಲಾದ್ -ಇ-ಶರೀಫ್ (ಪ್ರವಾದಿ ಮಹಮ್ಮದ್ ಅವರ ಜನ್ಮದಿನ. ಜಮ್ಮು ಮತ್ತು ಕೇರಳ)
ಸೆಪ್ಟೆಂಬರ್ 28: ಈದ್ -ಇ-ಮಿಲಾದ್ ಅಥವಾ ಈದ್ -ಇ-ಮಿಲದುನ್ನಬಿ (ಪ್ರವಾದಿ ಮಹಮ್ಮದ್ ಅವರ ಜನ್ಮದಿನ. ಗುಜರಾತ್ ಹಾಗೂ ಮಿಜೋರಂ, ಮಹಾರಾಷ್ಟ್ರ, ಕರ್ನಾಟಕ, ತಮಿಳು ನಾಡು, ಉತ್ತರಾಖಂಡ, ತೆಲಂಗಣ, ಮಣಿಪುರ, ಉತ್ತರ ಪ್ರದೇಶ, ನವದೆಹಲಿ, ಛತ್ತೀಸ್ ಗಢ ಹಾಗೂ ಜಾರ್ಖಂಡ)
ಸೆಪ್ಟೆಂಬರ್ 29: ಇಂದ್ರಜಾತ್ರ ಹಾಗೂ ಈದ್ -ಇ-ಮಿಲಾದ್ -ಉಲ್-ನಬಿ ಬಳಿಕದ ಶುಕ್ರವಾರ (ಜಮ್ಮು ಮತ್ತು ಕಾಶ್ಮೀರ)