ಪ್ರತಿ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಆ ತಿಂಗಳ ಬ್ಯಾಂಕ್ ರಜೆಗೆ ಸಂಬಂಧಿಸಿದ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಫೆಬ್ರವರಿ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಕೂಡ ಆರ್ ಬಿಐ ಬಿಡುಗಡೆ ಮಾಡಿದೆ. ಹಾಗಾದ್ರೆ ಫೆಬ್ರವರಿಯಲ್ಲಿ ಎಷ್ಟು ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ? ಇಲ್ಲಿದೆ ಮಾಹಿತಿ.
ನವದೆಹಲಿ (ಫೆ.26): ಫೆಬ್ರವರಿ ತಿಂಗಳ ಮುಕ್ತಾಯಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳ ಪ್ರಾರಂಭಕ್ಕೂ ಮುನ್ನ ಆರ್ ಬಿಐ ಬ್ಯಾಂಕಿಗೆ ಸಂಬಂಧಿಸಿದ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಮಾರ್ಚ್ ತಿಂಗಳ ರಜಾಪಟ್ಟಿ ಕೂಡ ಬಿಡುಗಡೆ ಮಾಡಿದೆ. ಮಾರ್ಚ್ ತಿಂಗಳಲ್ಲಿ ಯುಗಾದಿ, ಹೋಳಿ ಹಾಗೂ ಶ್ರೀರಾಮನವಮಿ ಹಬ್ಬಕ್ಕೆ ಸೇರಿದಂತೆ ಒಟ್ಟು 12 ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಮಾರ್ಚ್ ತಿಂಗಳಲ್ಲಿ ನಿಮಗೆ ಬ್ಯಾಂಕಿಗೆ ಭೇಟಿ ನೀಡುವ ಕೆಲಸವಿದ್ರೆ ಆರ್ ಬಿಐ ರಜಾಪಟ್ಟಿ ಗಮನಿಸಿ ಹೋಗೋದು ಉತ್ತಮ. ಇದ್ರಿಂದ ರಜಾದಿನಗಳಂದು ಬ್ಯಾಂಕಿಗೆ ಭೇಟಿ ನೀಡಿ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು.
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
NPS ವಿತ್ ಡ್ರಾಗೆ ಕೆವೈಸಿ ಕಡ್ಡಾಯ; ಏ.1ರಿಂದ ಹೊಸ ನಿಯಮ ಜಾರಿ
ಬ್ಯಾಂಕುಗಳಿಗೆ (Banks) ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಕೆಲವೊಮ್ಮೆ ಮನೆ (Home) ಅಥವಾ ನಿವೇಶನ , ಕಾರ್ (Car) ಖರೀದಿಗೆ ಏನಾದ್ರೂ ಪ್ಲ್ಯಾನ್ ಮಾಡಿದ್ರೆ ಸಾಲ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಬ್ಯಾಂಕ್ ಗಳಲ್ಲಿ ಎಫ್ ಡಿ (FD) ಮಾಡಿಸಲು ಅಥವಾ ಇನ್ಯಾವುದೋ ಹೂಡಿಕೆ (Investment) ಯೋಜನೆಗಳಲ್ಲಿ ಹಣ ತೊಡಗಿಸುವ ಯೋಚನೆ ಮಾಡಿದ್ರು ಕೂಡ ಬ್ಯಾಂಕಿಗೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಹೀಗಾಗಿ ಯಾವೆಲ್ಲ ದಿನ ರಜೆಯಿರುತ್ತದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ (Plan) ಮಾಡಿ.
ದೇಶ ಐದು ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ಬಂಧ, ರಾಜ್ಯದ ಈ ಬ್ಯಾಂಕ್‌ನಲ್ಲಿದ್ಯಾ ನಿಮ್ಮ ಅಕೌಂಟ್?
ಮಾರ್ಚ್ ತಿಂಗಳ ರಜಾಪಟ್ಟಿ ಇಲ್ಲಿದೆ:
ಮಾರ್ಚ್ 3: ಛಪ್ಛರ್ ಕೂಟ್ (ಮಿಜೋರಾಂ)
ಮಾರ್ಚ್ 5: ಭಾನುವಾರ
ಮಾರ್ಚ್ 7: ಹೋಲಿ/ಹೋಲಿ ಕ ದಹನ್/ಧುಲಂಡಿ/ಡೋಲ್ ಜಾತ್ರ (ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ, ಶ್ರೀನಗರ, ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ, ಜಮ್ಮು, ಶ್ರೀನಗರ, ತೆಲಂಗಣ ಹಾಗೂ ಜಾರ್ಖಂಡ)
ಮಾರ್ಚ್ 8: ಹೋಲಿ ಎರಡನೇ ದಿನ/ಧುಲೆತಿ/ಯೋಸಂಗ್ ಎರಡನೇ ದಿನ (ತ್ರಿಪುರ, ಗುಜರಾತ್, ಮೀಜೋರಾಂ, ಮಧ್ಯ ಪ್ರದೇಶ, ಒಡಿಶಾ, ಚಂಢೀಗಢ, ಉತ್ತರಾಖಂಡ, ಸಿಕ್ಕಿಂ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ, ಬೆಂಗಾಳ, ಉತ್ತರ ಪ್ರದೇಶ, ನವವದೆಹಲಿ, ಬಿಹಾರ, ಛತ್ತೀಸ್ ಗಢ, ಮೇಘಾಲಯ ಹಾಗೂ ಹಿಮಾಚಲ ಪ್ರದೇಶ)
ಮಾರ್ಚ್ 9: ಹೋಲಿ (ಬಿಹಾರ)
ಮಾರ್ಚ್ 11: ಎರಡನೇ ಶನಿವಾರ
ಮಾರ್ಚ್ 12: ಭಾನುವಾರ
ಮಾರ್ಚ್ 19: ಭಾನುವಾರ
ಮಾರ್ಚ್ 22: ಗುಡಿ ಪಡ್ವಾ/ಯುಗಾದಿ/ಬಿಹಾರ ದಿವಸ್/ಸಜಿಬು ನೊಂಗ್ಮಪಂಬ (ಚೈರೊಬ)/ತೆಲುಗು ಹೊಸ ವರ್ಷದ ದಿನ/ಮೊದಲ ನವರಾತ್ರಿ (ಮಹಾರಾಷ್ಟ್ರ, ಕರ್ನಾಟಕ, ತಮಿಳು ನಾಡು, ತೆಲಂಗಾಣ, ಮಣಿಪುರ, ಜಮ್ಮು, ಗೋವಾ ಹಾಗೂ ಬಿಹಾರ)
ಮಾರ್ಚ್ 25: ನಾಲ್ಕನೇ ಶನಿವಾರ
ಮಾರ್ಚ್ 26: ಭಾನುವಾರ
ಮಾರ್ಚ್ 30: ಶ್ರೀರಾಮ ನವಮಿ (ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಒಡಿಶಾ, ಛತ್ತೀಸ್ ಗಢ, ಉತ್ತರಾಖಂಡ, ಸಿಕ್ಕಿಂ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಹಾಗೂ ಶಿಮ್ಲಾ)