ಏನಾಯ್ತೋ ಏನೋ?:ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ದಿಢೀರ್ ರಾಜಿನಾಮೆ!

Published : Aug 28, 2018, 04:09 PM ISTUpdated : Sep 09, 2018, 09:00 PM IST
ಏನಾಯ್ತೋ ಏನೋ?:ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ದಿಢೀರ್ ರಾಜಿನಾಮೆ!

ಸಾರಾಂಶ

ರಿಲಯನ್ಸ್ ನಾವಲ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ! ರಿಲಯನ್ಸ್ ಇಂಜಿನಿಯರಿಂಗ್ ನಿರ್ದೇಶಕ ಸ್ಥಾನಕ್ಕೂ ಅನಿಲ್ ಗುಡ್ ಬೈ! ಸಂಸ್ಥೆಯ ಆಂತರಿಕ ನಿಯಮವಾಳಿಗಳ ಅನ್ವಯ ಅನಿಲ್ ರಾಜೀನಾಮೆ! ಆರ್ ನಾವಲ್, ದೇಶದ ಅತೀ ದೊಡ್ಡ ಶಿಪ್ ತಯಾರಿಕಾ ಸಂಸ್ಥೆ

ಮುಂಬೈ(ಆ.28): ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯ ಆಂತರಿಕ ನಿಯಮವಾಳಿಗಳ ಅನ್ವಯ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 2013ರ ಸಂಸ್ಥೆಗಳ ನಿಯಮಾವಳಿ ಸೆಕ್ಷನ್ 165ರ ಅನ್ವಯ 10 ಸಂಸ್ಥೆಗಳಿಗಿಂತಲೂ ಹೆಚ್ಚು ಸಂಸ್ಥೆಗಳಲ್ಲಿ ನಿರ್ದೇಶಕತ್ವ ಹೊಂದುವ ಹಾಗಿಲ್ಲ.

ಹೀಗಾಗಿ ಕೂಡಲೇ ಜಾರಿಗೆ ಬರುವಂತೆ ಅನಿಲ್ ಅಂಬಾನಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಆರ್ ನಾವಲ್, ದೇಶದ ಅತೀ ದೊಡ್ಡ ಶಿಪ್ ತಯಾರಿಕಾ ಸಂಸ್ಥೆಯಾಗಿದ್ದು, ಇತ್ತೀಚೆಗಷ್ಟೇ ಆರ್ ನಾವಲ್ ಸಂಸ್ಥೆ ಯುದ್ಧ ನೌಕೆಗಳ ತಯಾರಿಕಾ ಪರವಾನಗಿಯನ್ನು ಪಡೆದುಕೊಂಡಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!