ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಭಾರತದ ಅದ್ಧೂರಿ ವಿವಾಹಗಳಲ್ಲಿ ಮೊದಲ ಸ್ಥಾನದಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದು ಈ ವರ್ಷದ ವಿಶ್ವದ ದುಬಾರಿಯ ವಿವಾಹ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮುಂಬೈ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿ (Businessman Mukesh Ambani) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಶುಕ್ರವಾರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ರಾಧಿಕಾ ಮರ್ಚೆಂಟ್ (Anant Ambani Radhika Merchant Wedding) ಜೊತೆ ನಡೆದಿದೆ. ಇಂದು ಮಂಗಳಕರ ಆಶೀರ್ವಾದ, ಜುಲೈ 14ರಂದು ಮಂಗಳೋತ್ಸವ ಮತ್ತು ಜುಲೈ 15ರಂದು ರಿಲಯನ್ಸ್ ಜಿಯೋ ವರ್ಲ್ಡ್ ನಲ್ಲಿ ಆರತಕ್ಷತೆ ನಡೆಯಲಿದೆ.
14 ರಂದು ಮಂಗಳೋತ್ಸವ ನಡೆಯಲಿದೆ. ಇದಾದ ನಂತರ ಜುಲೈ 15 ರಂದು ಸಂಜೆ 7:30 ರಿಂದ ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ. ಕಳೆದ ನಾಲ್ಕು ತಿಂಗಳಿನಿಂದ ಅಂಬಾನಿ ಕುಟುಂಬದ ಮದುವೆ ನಡೆಯುತ್ತಿದೆ. ಎರಡು ಬಾರಿ ವಿವಾಹ ಪೂರ್ವ ಸಮಾರಂಭ ನಡೆದಿದೆ. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಭಾರತದ ಅದ್ಧೂರಿ ವಿವಾಹಗಳಲ್ಲಿ ಮೊದಲ ಸ್ಥಾನದಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದು ಈ ವರ್ಷದ ವಿಶ್ವದ ದುಬಾರಿಯ ವಿವಾಹ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ನೂರಾರು ಕೋಟಿ ಮೌಲ್ಯದ ಬಟ್ಟೆ, ಆಭರಣಗಳು
ಅನಂತ್ ಅಂಬಾನಿ ಮದುವೆಯಲ್ಲಿ ಭಾರತದ ಹಿರಿಯ ನಾಯಕರು, ಮುಖ್ಯಮಂತ್ರಿಗಳು, ಬಾಲಿವುಡ್, ಹಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್ ನಟ-ನಟಿಯರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ಎಲ್ಲಾ ಸೆಲಿಬ್ರಿಟಿಗಳನ್ನು ಮುಂಬೈಗೆ ಕರೆದುಕೊಂಡು ಬರಲು ವಿಶೇಷ ವ್ಯವಸ್ಥೆಯನ್ನು ಅಂಬಾನಿ ಕುಟುಂಬವೇ ಮಾಡಿತ್ತು. ಇನ್ನು ಮದುವೆಯಲ್ಲಿ ದುಬಾರಿ ವಸ್ತುಗಳನ್ನೇ ಬಳಕೆ ಮಾಡಲಾಗಿದೆ. ಅಂಬಾನಿ ಕುಟುಂಬದ ಸದಸ್ಯರು ಧರಿಸಿರವ ಬಟ್ಟೆಗಳು ನೂರಾರು ಕೋಟಿ ಮೌಲ್ಯವನ್ನು ಹೊಂದಿವೆ. ಭಾರತದಲ್ಲಿ ಸಿಗುವ ಎಲ್ಲಾ ಬಗೆಯ ವೈವಿದ್ಯದ ಆಹಾರವನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ.
ವಿವಾಹಕ್ಕೂ ಮುನ್ನ ಅನಂತ್-ರಾಧಿಕಾ ದಾಂಡಿಯಾ ನೃತ್ಯ, ರಾಣಿಯಂತೆ ಕಂಗೊಳಿಸಿದ ಅಂಬಾನಿ ಸೊಸೆ ಫೋಟೋ ವೈರಲ್!
ಮದುವೆಗೆ ಖರ್ಚಾದ ಹಣವೆಷ್ಟು?
ಮೊದಲು ಗುಜರಾತಿನ ಜಾಮ್‌ನಗರದಲ್ಲಿ ವಿವಾಹ ಪೂರ್ವ ಸಮಾರಂಭ ಆಯೋಜನೆ ಮಾಡಲಾಗಿತ್ತು. ನಂತರ ಇಟಲಿಯಲ್ಲಿಯೂ ಪ್ರಿ ವೆಡ್ಡಿಂಗ್ ಸಮಾರಂಭ ಆಯೋಜನೆ ಮಾಡಲಾಗಿತ್ತು. ವಿವಾಹ ಪೂರ್ವ ಆಚರಣೆಗಳಿಂದ ಮದುವೆಯವರೆಗಿನ ವೆಚ್ಚದ ಅಂದಾಜು ಲೆಕ್ಕ ಹೊರ ಬಿದ್ದಿದೆ. ಮುಕೇಶ್ ಅಂಬಾನಿ ಮಗನ ಮದುವೆಗೆ 4 ರಿಂದ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಮದುವೆಯ ಒಟ್ಟು ವೆಚ್ಚ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯದ 0.5% ಮಾತ್ರ ಎಂದು ಅಂದಾಜಿಸಲಾಗಿದೆ. ಮುಕೇಶ್ ಅಂಬಾನಿ ಒಟ್ಟು ನಿವ್ವಳ ಮೌಲ್ಯ $123.2 ಬಿಲಿಯನ್ ಆಗಿದೆ. ಮಗನ ಮದುವೆಗೆ ಖರ್ಚು ಮಾಡಿರುವ ಈ ಹಣವನ್ನು ಕೆಲವೇ ಗಂಟೆಗಳಲ್ಲಿ ಗಳಿಸತ್ತಾರೆ ಎಂದು ವರದಿಯೊಂದು ಪ್ರಕಟವಾಗಿದೆ.
ಭಾರತದಲ್ಲಿ ಮದುವೆ ಮಾರುಕಟ್ಟೆ ಬೆಳವಣಿಗೆ
ಭಾರತದಲ್ಲಿ ವಿವಾಹದ ಮಾರುಕಟ್ಟೆ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಅಮೆರಿಕದ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರ್ಕೆಟ್ ಫರ್ಮ್ ಜೆಫರೀಸ್ ವರದಿ ಮಾಡಿತ್ತು. ಸದ್ಯ ಭಾರತದಲ್ಲಿ ಪ್ರತಿ ವರ್ಷ 80 ಲಕ್ಷದಿಂದ 1 ಕೋಟಿ ಮದುವೆಗಳು ನಡೆಯುತ್ತವೆ. ಭಾರತದಲ್ಲಿ ಮದುವೆಗಾಗಿ ವರ್ಷಕ್ಕೆ ಸುಮಾರು 10 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತದೆ. ಅಮೆರಿಕಾಕ್ಕಿಂತ ಎರಡು ಪಟ್ಟು ಆಗಿದೆ. ಅಮೆರಿಕಾದಲ್ಲಿ ಮದುವೆಗೆ 5 ಲಕ್ಷ ಕೋಟಿ ಖರ್ಚಾಗುತ್ತದೆ. ಮದುವೆಗೆ ಖರ್ಚು ಮಾಡುವ ಹಣದ ವಿಚಾರದಲ್ಲಿ ಭಾರತಕ್ಕಿಂತ ಚೀನಾ ಮುಂದಿದೆ. ಚೀನಾದಲ್ಲಿ 14 ಲಕ್ಷ ಕೋಟಿ ರೂ ಖರ್ಚು ಮಾಡಲಾಗುತ್ತದೆ ಎಂದು ವರದಿಯಾಗಿದೆ.