ಆಗಸ್ಟ್ 1ಕ್ಕೂ ಮೊದಲೇ ಭಾರತಕ್ಕೆ ಸಿಹಿ ಸುದ್ದಿ ಸಿಗೋ ಸಾಧ್ಯತೆ ? ಡೀಲ್ ಫೈನಲ್ ಆಗುತ್ತಾ?

Published : Jul 20, 2025, 12:44 PM IST
India US

ಸಾರಾಂಶ

ತೆರಿಗೆ ತಪ್ಪಿಸುವಿಕೆ ತಡೆಗೆ ಈ ಒಪ್ಪಂದ ಮಹತ್ವದ್ದಾಗಿದ್ದು, ಒಪ್ಪಂದವಾಗದಿದ್ದಲ್ಲಿ ಅಮೆರಿಕ ಭಾರತದ ಮೇಲೆ ಶೇ.26ರಷ್ಟು ತೆರಿಗೆ ವಿಧಿಸಬಹುದು. ಡಿಜಿಟಲ್ ಆರ್ಥಿಕತೆ, ಉನ್ನತ ತಂತ್ರಜ್ಞಾನ ವ್ಯಾಪಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ.

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದ ಆಗಸ್ಟ್‌ಗೂ ಮೊದಲೇ ಅಂತಿಮಗೊಳ್ಳಲಿದೆ ಎಂದು ವರದಿಯಾಗಿದೆ. ಜುಲೈ 14 ರಿಂದ ಜುಲೈ 17ರಂದು ವಾಷಿಂಗ್ಟನ್‌ನಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಕುರಿತು ಮಾತುಕತೆ ನಡದಿತ್ತು. ಇತ್ತೀಚೆಗೆ ಎರಡು ದೇಶಗಳ ನಡುವಿನ 5ನೇ ಸುತ್ತಿನ ಮಾತುಕತೆಗಳು ಪೂರ್ಣಗೊಂಡಿದ್ದು, ಈ ಹಂತದಲ್ಲಿಯೇ ವ್ಯಾಪಾರ ಒಪ್ಪಂದದ ಅಂತಿಮ ರೂಪರೇಷೆಯನ್ನು ನೀಡಬೇಕಿತ್ತು. ಪರಸ್ಪರ ದೇಶಗಳ ನಡುವಿನ ತೆರಿಗೆ ತಪ್ಪಿಸುವ ಸಲುವಾಗಿ ಭಾರತಕ್ಕೆ ಈ ಒಪ್ಪಂದ ಪ್ರಮುಖವಾಗಿ ಎಂದು ಪರಿಗಣಿಸಲಾಗುತ್ತಿದೆ. ಅಮೆರಿಕಾ ಪರಸ್ಫರ ಸುಂಕ (Reciprocal tariff) ವಿಧಿಸಲು ಆಗಸ್ಟ್ 1ರ ಗಡುವು ನೀಡಿದೆ.

ಇತ್ತೀಚೆಗಷ್ಟೇ ಭಾರತದೊಂದಿಗಿನ ಅಮೆರಿಕಾದ ವ್ಯಾಪಾರ ಒಪ್ಪಂದ ಬಹುತೇಕ ಅಂತಿಮಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆಗಸ್ಟ್ 1ರೊಳಗೆ ಎರಡು ದೇಶಗಳ ನಡುವೆ ಒಪ್ಪಂದ ಅಂತಿಮಗೊಳ್ಳದಿದ್ರೆ ಭಾರತದ ಮೇಲೆ ಅಮೆರಿಕಾ ಶೇ.26ರಷ್ಟು ತೆರಿಗೆ ವಿಧಿಸುತ್ತದೆ. ಏಷ್ಯಾದ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದ್ರೆ ಭಾರತ ತನ್ನ ಮೇಲೆ ಕಡಿಮೆ ತೆರಿಗೆ ವಿಧಿಸಬೇಕು ಎಂದು ಅಮೆರಿಕ ಬಯಸುತ್ತಿದೆ.

ಒಪ್ಪಂದದ ಮಾತುಕತೆ ಹಲವಾರು ಹಂತಗಳಲ್ಲಿ ಮುಂದಕ್ಕೆ ಹೋಗಿದೆ. ಈ ಚರ್ಚೆಯಲ್ಲಿ ಡಿಜಿಟಲ್ ಆರ್ಥಿಕತೆಯಿಂದ 'ಉನ್ನತ ತಂತ್ರಜ್ಞಾನ ವ್ಯಾಪಾರ'ದವರೆಗಿನ ವಿಷಯಗಳನ್ನು ಸಹ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಭಾರತ ಯಾವೆಲ್ಲಾ ಸರಕುಗಳ ಮೇಲೆ ವಿನಾಯ್ತಿ ಕೇಳಿದೆ?

ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆಟೋ ವಲಯದ ಮೇಲೆ ವಿಧಿಸಲಾದ ಶೇ.25, ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ವಿಧಿಸಲಾಗಿರುವ ಶೇ.50 ತೆರಿಗೆಯಿಂದ ಭಾರತ ವಿನಾಯ್ತಿ ಕೋರಿದೆ. ಎರಡೂ ದೇಶಗಳು SCOMET (ವಿಶೇಷ ರಾಸಾಯನಿಕಗಳು, ಜೀವಿಗಳು, ವಸ್ತುಗಳು, ಸಲಕರಣೆಗಳು ಮತ್ತು ತಂತ್ರಜ್ಞಾನ) ಕುರಿತು ದೀರ್ಘವಾಗಿ ಚರ್ಚೆ ನಡೆಸಿವೆ. SCOMET ವಸ್ತುಗಳ ವ್ಯಾಪಾರ ಹೆಚ್ಚು ನಿಯಂತ್ರಿಸಲ್ಪಡುತ್ತವೆ ಹಾಗೂ ಕೇವಲ ವಿಶ್ವಾಸರ್ಹ ಪಾಲುದಾರರ ಜೊತೆ ಮಾತ್ರ ಇವುಗಳ ವ್ಯಾಪಾರ ನಡೆಯುತ್ತದೆ.

ಅಮೆರಿಕದ ಬೇಡಿಕೆಗಳು ಏನು?

ಭಾರತ ಕೃಷಿ ಮತ್ತು ಡೈರಿ ಉತ್ಪನ್ನಗಳ ಮಾರುಕಟ್ಟೆಯನ್ನು ಅಮೆರಿಕಾಗೆ ತೆರೆಯಲು ಒಪ್ಪಿಲ್ಲ. ಆದ್ರೆ ಭಾರತದ ಈ ಎರಡು ವಲಯದಲ್ಲಿ ಅಮೆರಿಕ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಭಾರತ ಕೃಷಿ ಉತ್ಪನ್ನಗಳ ಮೇಲೆ ವಿಧಿಸುವ ಸುಂಕ ಕಡಿಮೆ ಮಾಡಬೇಕೆಂದು ಅಮೆರಿಕ ಬಯಸುತ್ತಿದೆ. ಅಮೆರಿಕ ತನ್ನ ದೇಶಿಯ ಕೃಷಿ ಉತ್ಪನ್ನಗಳನ್ನು ಬರಲು ಅವಕಾಶ ನೀಡಬೇಕೆಂದು ಅಮೆರಿಕ ಕೇಳಿಕೊಳ್ಳುತ್ತಿದೆ. ಆಟೋಮೊಬೈಲ್‌ಗಳ ಮೇಲಿನ ಆಮದು ಸುಂಕ ಇಳಿಕೆ, ಹೆಚ್ಚು ಹೆಚ್ಚು ಇಂಧನ ಉತ್ಪನ್ನಗಳನ್ನು ಖರೀದಿಸಲು ಅಮೆರಿಕ ಬಯಸುತ್ತಿದೆ. ಅಮೆರಿಕ ಡೈರಿ ಉತ್ಪನ್ನಗಳಿಗೆ ಭಾರತದಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ. ರೈತರ ಹಿತಾಸಕ್ತಿ, ಹೈನುಗಾರಿಕೆ ಮತ್ತು ದೇಶಿಯ ಉತ್ಪನ್ನಗಳ ಹಿತಾಸಕ್ತಿ ಕಾಪಾಡಲು ಭಾರತ ಸರ್ಕಾರ ಮುಂದಾಗಿದೆ.

ಭಾರತ ಎಲೆಕ್ಟ್ರಾನಿಕ್ಸ್‌ನಂತಹ ತನ್ನ ಕಾರ್ಮಿಕ-ತೀವ್ರ ಮತ್ತು ಉದಯೋನ್ಮುಖ ಉತ್ಪಾದನಾ ವಲಯಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಕೋರಿದೆ. ಸರಕು ವ್ಯಾಪಾರದ ಹೊರತಾಗಿ ಭಾರತದಲ್ಲಿನ ತನ್ನ ತಂತ್ರಜ್ಞಾನ ಕಂಪನಿಗಳಿಗೆ ಹೆಚ್ಚು ಉದಾರವಾದ ನಿಯಂತ್ರಕ ವಾತಾವರಣವನ್ನು ಸೃಷ್ಟಿಸುವುದು ಅಮೆರಿಕದ ಮತ್ತೊಂದು ಉದ್ದೇಶವಾಗಿದೆ. ಅಮೆರಿಕ ಇಲ್ಲಿಯವರೆಗೆ ಬ್ರಿಟನ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂನೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಘೋಷಿಸಿದೆ. ಈಗ ಆಗಸ್ಟ್ 1ರ ಮೊದಲೇ ಭಾರತದ ಜೊತೆಗಿನ ಒಪ್ಪಂದ ಅಂತಿಮವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭಾರತೀಯರು ಮಾಂಸಾಹಾರಿ ಹಾಲು ಒಪ್ಪಿಕೊಳ್ಳಲ್ಲ: ಅಮೆರಿಕಾಗೆ ಕಡ್ಡಿ ಮುರಿದಂತೆ ಹೇಳಿದ ಭಾರತ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!
Swiggy Report 2025: ಸೆಕೆಂಡಿಗೆ 3ರಂತೆ, 93 ಮಿಲಿಯನ್ ಬಿರಿಯಾನಿ ಆರ್ಡರ್‌ ಬಂದಿವೆ! ಬೆಚ್ಚಿಬೀಳಿಸುತ್ತೆ ವರದಿ!