
ಮುಂಬೈ (ಆ.13): ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪರಿವಾರದ ಆಸ್ತಿಯು 28 ಲಕ್ಷ ಕೋಟಿ ರು. ತಲುಪಿದ್ದು, ಇದು ಅದಾನಿ ಪರಿವಾರದ ಸಂಪತ್ತಿನ ಎರಡು ಪಟ್ಟಿನಷ್ಟಾಗಿದೆ. ಪ್ರಸ್ತುತ ಅದಾನಿ ಆಸ್ತಿ 14.01 ಲಕ್ಷ ಕೋಟಿ ರು. ಇದೆ ಎಂದು ಹುರುನ್ ಸಂಸ್ಥೆಯ ವರದಿ ಹೇಳಿದೆ. ಭಾರತದ 300 ಶ್ರೀಮಂತ ಪರಿವಾರಗಳು 140 ಲಕ್ಷ ಕೋಟಿ ರು.ಗೂ ಅಧಿಕ ಆಸ್ತಿಯನ್ನು ಹೊಂದಿದ್ದು, ಇದು ದೇಶದ ಜಿಡಿಪಿಗಿಂತ ಶೇ.40ರಷ್ಟು ಹೆಚ್ಚಿದೆ. ಅಂಬಾನಿ ಪರಿವಾರದ ಸಂಪತ್ತೇ ಜಿಡಿಪಿಯ ಶೇ.12ರಷ್ಟಾಗುತ್ತದೆ.
ಕಳೆದೊಂದು ವರ್ಷದಲ್ಲಿ ಅಂಬಾನಿ ಪರಿವಾರದ ಆಸ್ತಿಯಲ್ಲಿ ಶೇ.10ರಷ್ಟು ಏರಿಕೆ ಆಗಿದ್ದರೆ, ಕುಮಾರ್ ಮಂಗಳಂ ಬಿರ್ಲಾ ಪರಿವಾರದ ಸಂಪತ್ತು ಶೇ.20ರಷ್ಟು ಹೆಚ್ಚಿ, 6.47 ಲಕ್ಷ ಕೋಟಿ ರು.ಗೆ ತಲುಪಿದೆ. ಜಿಂದಾಲ್ ಪರಿವಾರದ ಆಸ್ತಿ ಶೇ.21ರ ಏರಿಕೆ ಯೊಂದಿಗೆ 5.70 ಲಕ್ಷ ಕೋಟಿ ರು. ಆಗಿದೆ. ಬಜಾಜ್ ಪರಿವಾರದ ಆಸ್ತಿ ಶೇ.21ರಷ್ಟು ಕುಸಿತವಾಗಿದ್ದು, 5.6 ಲಕ್ಷ ಕೋಟಿಗಿಳಿದಿದೆ.
ನವದೆಹಲಿ: ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ, ದೇಶದ 300 ಅತ್ಯಂತ ಮೌಲ್ಯಯುತ ಭಾರತೀಯ ಕುಟುಂಬಗಳ ಪೈಕಿ 10 ಕುಟುಂಬಗಳು ವಾಸಿಸುತ್ತಿವೆ. ವಿಪ್ರೋ ಮಾಲೀಕತ್ವದ ಪ್ರೇಂಜಿ ಕುಟುಂಬವು ನಗರದ ಅತ್ಯಂತ ಶ್ರೀಮಂತ ಹಾಗೂ ದೇಶದ 8ನೇ ಸಿರಿವಂತ ಕುಟುಂಬವಾಗಿದೆ. ಈ ಕುಟು ಬದ ಮೌಲ್ಯ 2.27 ಲಕ್ಷ ಕೋಟಿ ರೂಪಾಯಿ ಆಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.