
ಹಿರಿಯ ನಾಗರಿಕರನ್ನು ಗಮನದಲ್ಲಿ ಇಟ್ಟುಕೊಂಡು ಇದಾಗಲೇ ಹಲವಾರು ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳು ಫಿಕ್ಸೆಡ್ ಡೆಪಾಸಿಟ್ (Fixed Deposit) ಬಡ್ಡಿದರವನ್ನು ಹೆಚ್ಚು ಮಾಡಿವೆ. ಅಷ್ಟಕ್ಕೂ ನಿಗದಿತ ಅವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಮತ್ತು ಅದರ ಮೇಲೆ ಬಡ್ಡಿಯನ್ನು ಗಳಿಸಲು ನಿಶ್ಚಿತ ಠೇವಣಿ ಅರ್ಥಾತ್ ಎಫ್ಡಿ ಒಂದು ಉತ್ತಮ ಮಾರ್ಗವಾಗಿದೆ. ಇದನ್ನು ಹೂಡಿಕೆಯ ಸುರಕ್ಷಿತ ರೂಪವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಹೂಡಿಕೆದಾರರಿಗೆ ಜನಪ್ರಿಯ ಹೂಡಿಕೆಯ ಆಯ್ಕೆಯಾಗಿದೆ. ಇದರ ಮುಖ್ಯವಾಗಿರುವ ಪ್ರಯೋಜನ ಎಂದರೆ, ಮಾರುಕಟ್ಟೆ ಮಂದಗತಿಯಲ್ಲಿದ್ದಾಗಲೂ ನೀವು ಸ್ಥಿರ ಠೇವಣಿ ಮೂಲಕ ಅದೇ ಪ್ರಮಾಣದ ಬಡ್ಡಿಯನ್ನು ಗಳಿಸಬಹುದು. ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ನಿಗದಿಪಡಿಸಲಾಗುತ್ತೆ. ಇದು ಎಂದಿಗೂ ಹೆಚ್ಚು ಅಥವಾ ಕಡಿಮೆಯಾಗೋದಿಲ್ಲ.
ಹಾಗಿದ್ದರೆ ಯಾವ ಯಾವ ಬ್ಯಾಂಕ್ಗಳು ಯಾವ ರೀತಿಯಲ್ಲಿ ಬಡ್ಡಿ ನೀಡುತ್ತವೆ ಎನ್ನುವುದನ್ನು ಈಗ ನೋಡೋಣ. ಇಲ್ಲಿ ಈ ತಿಂಗಳ ಬಡ್ಡಿದರ ಅನ್ವಯವಾಗಿದೆ.
ಹಿರಿಯ ನಾಗರಿಕರಿಗೆ ಸಾರ್ವಜನಿಕ ವಲಯದ ಉನ್ನತ ಬ್ಯಾಂಕುಗಳು ನೀಡುವ ಸ್ಥಿರ ಠೇವಣಿ ಬಡ್ಡಿ ದರಗಳು
| ಬ್ಯಾಂಕ್ ಹೆಸರು | ಅತ್ಯುನ್ನತ ಸ್ಲ್ಯಾಬ್ | 1 ವರ್ಷ | 3 ವರ್ಷ | 5 ವರ್ಷ |
| ಬ್ಯಾಂಕ್ ಆಫ್ ಬರೋಡಾ | 7.10 | 7.00 | 7.00 | 7.00 |
| ಕೆನರಾ ಬ್ಯಾಂಕ್ | 7.00 | 6.75 | 6.75 | 6.75 |
| ಭಾರತೀಯ ಸೆಂಟ್ರಲ್ ಬ್ಯಾಂಕ್ | 7.50 | 7.00 | 7.00 | 7.00 |
| ಇಂಡಿಯನ್ ಬ್ಯಾಂಕ್ | 7.20 | 6.60 | 6.75 | 6.50 |
| ಇಂಡಿಯನ್ ಓವರ್ಸೀಸ್ ಬ್ಯಾಂಕ್ | 7.45 | 7.20 | 6.80 | 6.80 |
| ಪಂಜಾಬ್ ನ್ಯಾಷನಲ್ ಬ್ಯಾಂಕ್ | 7.20 | 6.90 | 6.90 | 7.00 |
| ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | 7.35 | 7.00 | 7.05 | 7.30 |
| ಯುಕೋ ಬ್ಯಾಂಕ್ | 7.10 | 6.50 | 6.65 | 6.60 |
| ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 7.35 | 7.10 | 7.10 | 6.90 |
ಹಿರಿಯ ನಾಗರಿಕರಿಗೆ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ನೀಡುವ ಅತ್ಯುತ್ತಮ FD ಬಡ್ಡಿದರಗಳು
| ಬ್ಯಾಂಕ್ ಹೆಸರು | ಅತ್ಯುನ್ನತ ಸ್ಲ್ಯಾಬ್ | 1 ವರ್ಷ | 3 ವರ್ಷ | 5 ವರ್ಷ |
| ಆಕ್ಸಿಸ್ ಬ್ಯಾಂಕ್ | 7.25 | 6.75 | 7.00 | 7.25 |
| ಸಿಟಿ ಯೂನಿಯನ್ ಬ್ಯಾಂಕ್ | 7.00 | 7.00 | 6.90 | 6.50 |
| ಯೆಸ್ ಬ್ಯಾಂಕ್ | 7.75 | 7.15 | 7.75 | 7.50 |
| ಕೋಟಕ್ ಮಹೀಂದ್ರಾ ಬ್ಯಾಂಕ್ | 7.45 | 7.00 | 7.25 | 6.70 |
| ಕರ್ನಾಟಕ ಬ್ಯಾಂಕ್ | 7.05 | 6.90 | 6.55 | 6.55 |
| ಐ.ಡಿ.ಬಿ.ಐ. ಬ್ಯಾಂಕ್ | 7.25 | 7.05 | 6.75 | 6.75 |
| ಐಸಿಐಸಿಐ ಬ್ಯಾಂಕ್ | 7.10 | 6.75 | 7.10 | 7.10 |
| ಹೆಚ್.ಡಿ.ಎಫ್.ಸಿ. ಬ್ಯಾಂಕ್ | 7.10 | 6.75 | 6.95 | 6.90 |
| ಕರೂರ್ ವೈಶ್ಯ ಬ್ಯಾಂಕ್ | 7.25 | 7.00 | 7.00 | 7.00 |
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.