Latest Videos

ಸಮಯ‌ ಅತ್ಯಂತ ಮುಖ್ಯ‌ ಎಂದ‌ ಜೆಫ್‌ ಬೆಜೋಸ್, ರುಟೀನ್ ಫಾಲೋ ಮಾಡಿದ್ರೆ ಶ್ರೀಮಂತರಾಗ್ತೀವಾ ಕೇಳಿದ ನೆಟ್ಟಿಗರು

By Roopa HegdeFirst Published Jul 2, 2024, 10:43 AM IST
Highlights

ಶ್ರೀಮಂತ ವ್ಯಕ್ತಿಗಳ ಬಗ್ಗೆ ಜನರಿಗೆ ಕುತೂಹಲವಿರೋದು ಸಾಮಾನ್ಯ. ಬಹುತೇಕ ಕೋಟ್ಯಾಧಿಪತಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಒಳ್ಳೆ ರುಟೀನ್ ಫಾಲೋ ಮಾಡ್ತಾರೆ. ಅದ್ರಲ್ಲಿ  ಶ್ರೀಮಂತ ಜೆಫ್ ಬೆಜೋಸ್ ಕೂಡ ಒಬ್ಬರು.

ಅಭ್ಯಾಸಗಳೇ ಮನುಷ್ಯನ ಭವಿಷ್ಯವನ್ನು ನಿರ್ಧರಿಸುತ್ತವೆ ಎನ್ನುವ ಮಾತಿದೆ. ಒಳ್ಳೆಯ ಅಭ್ಯಾಸಗಳು ಹಾಗೂ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಮನುಷ್ಯ ಯಶಸ್ವಿಯಾಗ್ತಾನೆ. ಹಾಗಿದ್ರೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು  ಅಂತ ಯಾವ ಅಭ್ಯಾಸಗಳನ್ನು ಇಷ್ಟಪಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಬೆಳಿಗ್ಗೆ ಎದ್ದ ತಕ್ಷಣ ಅವರು ಏನು ಮಾಡ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಜೆಫ್ ಬೆಜೋಸ್ ಉತ್ತರ ನೀಡಿದ್ದಾರೆ. ಅಮೆಜಾನ್ ಕಾರ್ಯಕಾರಿ ಅಧ್ಯಕ್ಷರು, ಬ್ಲೂ ಒರಿಜಿನ್ ಮಾಲೀಕರು ಮತ್ತು ಬಿಲಿಯನೇರ್ ಹೂಡಿಕೆದಾರರಾಗಿರುವ ಜೆಫ್ ಬೆಜೋಸ್, ವೃತ್ತಿ ಜೀವನದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಜೊತೆಗೆ ಮುಖ್ಯವಾದ ಕೆಲಸವೊಂದನ್ನು ಮಾಡಲು ಮರೆಯೋದಿಲ್ಲ.

ಜೆಫ್ ಬೆಜೋಸ್ (Jeff Bezos) ಅವರ ವಿಡಿಯೋ ಒಂದು ವೈರಲ್ (Viral) ಆಗಿದೆ. ಅದ್ರಲ್ಲಿ ಅವರು ತಮ್ಮ ದಿನಚರಿಯನ್ನು ಹೇಳಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡ್ತೇನೆ ಎಂಬುದನ್ನು ತಿಳಿಸಿದ್ದಾರೆ. ಇಷ್ಟೆಲ್ಲ ಕೆಲಸದಲ್ಲಿ ಬ್ಯುಸಿ ಇರುವ ಮನುಷ್ಯ ಮಧ್ಯರಾತ್ರಿ ಹನ್ನೆರಡು, ಒಂದು, ಎರಡು ಗಂಟೆಯಾದ್ರೂ ನಿದ್ರೆ (Sleep) ಮಾಡದಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಜೆಫ್ ಬೆಜೋಸ್, ನಿದ್ರೆಗೆ ಆದ್ಯತೆ ನೀಡ್ತಾರೆ. 

INCOME TAX RELIEF: ಬಜೆಟ್‌ನಲ್ಲಿ STANDARD DEDUCTION ಮಿತಿ 1 ಲಕ್ಷಕ್ಕೆ ಏರಿಕೆ?

ರಾತ್ರಿ ನಾನು ಬೇಗ ಮಲಗ್ತೇನೆ ಎಂದು ಜೆಫ್ ಬೆಜೋಸ್ ಹೇಳಿದ್ದಾರೆ. ಬೇಗ ಮಲಗಿ, ಬೇಗ ಏಳುವ ಅಭ್ಯಾಸ (habit) ಮಾಡಿಕೊಂಡಿರುವ ಜೆಫ್ ಬೆಜೋಸ್ ಅವರಿಗೆ, ಎಲ್ಲ ಕೆಲಸವನ್ನು ಆರಾಮವಾಗಿ ಮಾಡಲು ಇಷ್ಟ. ಅವರು ಬೆಳಿಗ್ಗೆ ಎದ್ದ ನಂತ್ರ ಪೇಪರ್ ಓದುತ್ತಾರೆ. ಆರಾಮವಾಗಿ ಕುಳಿತು ಕಾಫಿ ಹೀರುತ್ತಾರೆ. ಮಕ್ಕಳು ಶಾಲೆಗೆ ಹೋಗುವ ಮೊದಲು ಅವರ ಜೊತೆ ಕುಳಿತು ಉಪಹಾರ ಸೇವನೆ ಮಾಡ್ತಾರೆ. ಈ ವಿಷ್ಯವನ್ನು ಜೆಫ್ ಬೆಜೋಸ್ ಹೇಳಿದ್ದಾರೆ. ನನಗೆ ಬೆಳಿಗ್ಗೆ ಪೇಪರ್ ಓದಲು ಇಷ್ಟ. ಆರಾಮವಾಗಿ ಕುಳಿತು ಕಾಫಿ ಕುಡಿಯಲು ಇಷ್ಟ. ಮಕ್ಕಳು ಸ್ಕೂಲ್ ಗೆ ಹೋಗುವ ಮೊದಲು ಅವರ ಜೊತೆ ಉಪಹಾರ ಮಾಡಲು ಇಷ್ಟ. ನನಗೆ ಸಮಯ ಬಹಳ ಮುಖ್ಯ. ಹಾಗಾಗಿಯೇ ನಾನು ಬೆಳಗಿನ ಮೊದಲ ಮೀಟಿಂಗನ್ನು 10 ಗಂಟೆಗೆ ಫಿಕ್ಸ್ ಮಾಡ್ತೇನೆ ಎಂದು ಜೆಫ್ ಬೆಜೋಸ್ ಹೇಳಿದ್ದಾರೆ. 

ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬೆಜೋಸ್ ಕೂಡ ಊಟದ ಮೊದಲು ತಮ್ಮ ಹೆಚ್ಚಿನ ಐಕ್ಯೂ ಸಭೆಗಳನ್ನು ಮುಗಿಸಲು ಇಷ್ಟಪಡುವುದಾಗಿ ಹೇಳಿದ್ದಾರೆ. ನಿಜವಾಗಿಯೂ ಮಾನಸಿಕವಾಗಿ ಸವಾಲಿನ ಸಂಗತಿಯಂತೆಯೇ, ಇದು 10 ಗಂಟೆಯ ಮೀಟಿಂಗ್ ಎಂದಿದ್ದಾರೆ. ಎಂಟು ಗಂಟೆ ನಿದ್ರೆ ಮಾಡುವ ಮಹತ್ವದ ಬಗ್ಗೆಯೂ ಜೆಫ್ ಬೆಜೋಸ್ ಹೇಳಿದ್ದಾರೆ.  ಸೂಕ್ತ ನಿದ್ರೆ ಚೆನ್ನಾಗಿ ಯೋಚಿಸುವಂತೆ ಮಾಡುತ್ತದೆ. ನನಗೆ ಹೆಚ್ಚು ಶಕ್ತಿ ನೀಡುತ್ತದೆ. ನನ್ನ ಮನಸ್ಥಿತಿಯನ್ನು ಉತ್ತಮವಾಗಿಡುತ್ತದೆ ಎನ್ನುತ್ತಾರೆ ಜೆಫ್ ಬೆಜೋಸ್. 

16 ವರ್ಷದ ಈ ಹುಡುಗಿ 100 ಕೋಟಿಯ ಸ್ಟಾರ್ಟಪ್ ಕಟ್ಟಿ ಬೆಳೆಸಿದ ಮಾಲಕಿ!

ಜೆಫ್ ಬೆಜೋಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನ @HISTORYINMEMES ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಈವರೆಗೆ 4.7 ಮಿಲಿಯನ್ ವೀವ್ಸ್ ಸಿಕ್ಕಿದೆ. 18 ಸಾವಿರ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಕ್ಕೆ ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಳ್ಳೆಯ ಸಲಹೆ, ಇದನ್ನು ಪಾಲಿಸಬೇಕು ಎಂದು ಕೆಲವರು ಹೇಳಿದ್ದಾರೆ. ಬೆಳಿಗ್ಗೆ ಬೇಗ ಎದ್ದು, ಕಾಫಿ ಕುಡಿದು ಕೆಲಸಕ್ಕೆ ಹೋದ್ರೆ ಆಗ್ಲಿಲ್ಲ. ಉತ್ತಮ ಗುಣಮಟ್ಟದ ಉತ್ಪಾದಕತೆಯು ಬಿಲಿಯನೇರ್‌ನ ದೈನಂದಿನ ದಿನಚರಿಯನ್ನು ನಕಲು ಮಾಡೋದ್ರಿಂದ ಬರುವುದಿಲ್ಲ, ಅದ್ರಲ್ಲಿ ಯಾವುದು ನಿಮಗೆ ಉತ್ತಮ ಎಂಬುದನ್ನು ಕಂಡು ಹಿಡಿಯುವುದರಿಂದ ಬರುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

click me!