ಟಾಯ್ಲೆಟ್ ಮ್ಯಾಟ್ ನಲ್ಲಿ ಗಣೇಶನ ಚಿತ್ರ.. ಅಮೆಜಾನ್ ಬ್ಯಾನ್ ಮಾಡುವುದೊಂದೆ ಉತ್ತರ!

By Web DeskFirst Published May 17, 2019, 5:58 PM IST
Highlights
ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ಹಿಂದು ದೇವರುಗಳನ್ನು ಗುರಿ ಮಾಡಿದೆ.
ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ.

ಬೆಂಗಳೂರು[ಮೇ. 17]  ಮಹಾತ್ಮ ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕೆ ಮಂದಾಗಿ ಭಾರತೀಯರಿಂದ ಉಗಿಸಿಕೊಂಡಿದ್ದ ಅಮೆಜಾನ್ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ.

ಇದೀಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ. ಸಂಸದೆ ಶೋಭಾ ಕರಂದ್ಲಾಜೆ ಸಹ ಈ ಬಗ್ಗೆ ಟ್ವೀಟ್ ಮಾಡಿ ಅಮೆಜಾನ್ ಬಾಯ್ಕಾಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶೌಚಗೃಹಗಳಿಗೆ ಬಳಸುವ ಟೈಲ್ಸ್ ಮತ್ತು ಮ್ಯಾಟ್ ಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಿರುವ ಅಮೆಜಾನ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು  ಹಿಂದು ಭಾವನೆಗಳು ಮಾರಾಟಕ್ಕಿಲ್ಲ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದ್ದು ಆನ್ ಲೈನ್ ಪೆಟಿಶನ್ ಗೆ ಸಹಿ ಮಾಡುವಂತೆ ಕೋರಿದ್ದಾರೆ. 

 

https://t.co/Cni0w2bgIA: Amazon Stop insulting Hindus with Floor Mats and Toilet Mats with Hindu Gods.

Hindu sentiments are not for sale, no one can desecrate our God's & get away.

Let's
please sign the petition: https://t.co/KmDZ5p06Qn

— Chowkidar Shobha Karandlaje (@ShobhaBJP)
click me!