ಅಭಿನಂದನ್ ಮಾರ್ಕೆಟ್: ಐಎಎಫ್, ಮೋದಿ ಸೀರೆ ಫೆವರೆಟ್!

Published : Mar 01, 2019, 03:00 PM IST
ಅಭಿನಂದನ್ ಮಾರ್ಕೆಟ್: ಐಎಎಫ್, ಮೋದಿ ಸೀರೆ ಫೆವರೆಟ್!

ಸಾರಾಂಶ

ಸರ್ಜಿಕಲ್ ದಾಳಿಗೆ ಭಾರತದಲ್ಲಿ ಸಂಭ್ರಮವೋ ಸಂಭ್ರಮ| ಪಾಕ್ ನೆಲಕ್ಕೆ ನುಗ್ಗುವ ಛಾತಿ ತೋರಿದ ಭಾರತೀಯ ವಾಯುಸೇನೆಗೆ ಅಭಿನಂದನೆಗಳ ಮಹಾಪೂರ| ನಾಲ್ಕು ಗಂಟೆಗಳಲ್ಲಿ ಐಎಎಫ್, ಮೋದಿ ಭಾವಚಿತ್ರ ಸೀರೆ ತಯಾರಿಸಿದ ಬಟ್ಟೆ ವ್ಯಾಪಾರಿ| ಸೂರತ್‌ನ ವಿನೋದ್ ಸುರಾನಾ ತಯಾರಿಸಿದ ಸೀರೆಗೆ ಭಾರೀ ಬೇಡಿಕೆ|

ಸೂರತ್(ಮಾ.01): ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಜೆಎಎಂ ಕ್ಯಾಂಪ್‌ನ್ನು ಧ್ವಂಸಗೊಳಿಸಿದ್ದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿ. ಪಾಕ್ ನೆಲಕ್ಕೆ ನುಗ್ಗುವ ಛಾತಿ ತೋರಿದ ಭಾರತೀಯ ವಾಯುಸೇನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಮಧ್ಯೆ ಸರ್ಜಿಕಲ್ ದಾಳಿಯಾಗುತ್ತಿದ್ದಂತೇ ಸೂರತ್‌ನ ಬಟ್ಟೆ ವ್ಯಾಪಾರಿಯೋರ್ವರು ಕೇವಲ ನಾಲ್ಕು ಗಂಟೆಗಳಲ್ಲಿ ಭಾರತೀಯ ವಾಯುಸೇನೆಯ ಸೖನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವುಳ್ಳ ವಿಶೇಷ ಸೀರೆಯನ್ನು ತಯಾರಿಸಿದ್ದಾರೆ.

ಇಲ್ಲಿನ ವಿನೋದ್ ಸುರಾನಾ ಎಂಬ ಬಟ್ಟೆ ವ್ಯಾಪಾರಿ, ಕೇವಲ ನಾಲ್ಕು ಗಂಟೆಗಳಲ್ಲಿ ವಿಶೇಷ ಸೀರೆಯೊಂದನ್ನು ತಯಾರಿಸಿದ್ದು, ಇದರಲ್ಲಿ ವಾಯುಸೇನೆಯ ಧೀರ ಸೈನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದೆ. ಅಲ್ಲದೇ ಸೀರೆಯ ಒಂದು ಕೊನೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ಇನ್ನು ವಿನೋದ್ ಸುರಾನಾ ತಯಾರಿಸಿರುವ ಸೀರೆ ಭಾರೀ ಜನಪ್ರಿಯತೆ ಗಳಿಸಿದ್ದು, ಜನರಿಂದ ಹೆಚ್ಚಿನ ಸೀರೆಗಳಿಗೆ ಬೇಡಿಕೆ ಬರುತ್ತಿದೆ ಎನ್ನಲಾಗಿದೆ. ಭಾರತೀಯ ವಾಯುಸೇನೆಯ ದಿಟ್ಟ ದಾಳಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಾಣಾಕ್ಷ ನಡೆಗೆ ನಾನು ಚಿರಋಣಿ ಅಂತಾರೆ ವಿನೋದ್ ಸುರಾನಾ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ