ಮನೆ ಕಟ್ಟಿಕೊಳ್ಳುವವರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

By Web DeskFirst Published Feb 24, 2019, 8:33 PM IST
Highlights

ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರು ರಿಯಲ್ ಎಸ್ಟೇಟ್​​ ವಲಯದ ಮೇಲಿನ ಜಿಎಸ್​​ಟಿ ತೆರಿಗೆ ನೀತಿಯಲ್ಲಿ ಮತ್ತಷ್ಟು ಮಹತ್ವದ ಬದಲಾವಣೆ ಮಾಡಿದ್ದು, ನಿರ್ಮಾಣ ಹಂತದ ವಸತಿ ಸಂಕೀರ್ಣ ಮೇಲಿನ  GST ಇಳಿಕೆ ಮಾಡಿದ್ದಾರೆ.

ನವದೆಹಲಿ, [ಫೆ. 24]: ಗೃಹ ಖರೀದಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್ ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. 

ಈಗಿರುವ ಶೇ.12 ರಷ್ಟು ಜಿಎಸ್ ಟಿಯನ್ನು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆಯೇ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

A Jaitley:We've adopted twin definition of affordable housing. One on basis of carpet area&2nd on cost. In metros,60 sq m carpet area&Rs45 lakh cost of apartment to fall in affordable housing. In non metros,it'll be 90 sq m carpet&Rs 45 lakh cost;it'll come into effect from Apr 1 pic.twitter.com/rWJUmtVjCQ

— ANI (@ANI)

ನಿರ್ಮಾಣ ಹಂತದ ಫ್ಲ್ಯಾಟ್‌ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ?

ಮೆಟ್ರೋ ನಗರಗಳಲ್ಲಿ 60 ಚದರ ಮೀಟರ್​​ ಕಾರ್ಪೆಟ್​​ ಏರಿಯಾ ಮತ್ತು 45 ಲಕ್ಷ ರೂ ವೆಚ್ಚದ ಅಪಾರ್ಟ್​​​ಮೆಂಟ್​​ ಅನ್ನು ಅಫರ್ಡಬಲ್​ ಹೌಸಿಂಗ್ ಎಂದೂ, ಮತ್ತು ಮೆಟ್ರೋಯೇತರ ನಗರಗಳಲ್ಲಿ 90 ಚದರ ಮೀಟರ್​​ ಕಾರ್ಪೆಟ್​​ ಏರಿಯಾ ಮತ್ತು 45 ಲಕ್ಷ ರೂ ವೆಚ್ಚದ ಅಪಾರ್ಟ್​​​ಮೆಂಟ್​ ಎಂದು ಪ್ರತ್ಯೇಕಿಸಲಾಗಿದೆ.

ಇದರ ಪ್ರಕಾರ ಅಫರ್ಡಬಲ್​ ಹೌಸಿಂಗ್ ಮೇಲಿನ ತೆರಿಗೆಯನ್ನು ಶೇ. 8ರಿಂದ ಶೇ. 1 ಕ್ಕೆ ಇಳಿಸಲಾಗಿದೆ. ಮೆಟ್ರೋಯೇತರ ನಗರಗಳ ಹೌಸಿಂಗ್​​ ನಿರ್ಮಾಣಕ್ಕೆ ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಪರಿಷ್ಕೃತ ತೆರಿಗೆ ದರಗಳು 2019 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

click me!