ಸಿಂಗಾಪುರಕ್ಕೆ ಹೋಗ್ಬೇಕಾ ? ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವಿದೆ..

By Web DeskFirst Published Oct 30, 2018, 5:40 PM IST
Highlights

ಕಡಿಮೆ ದರದಲ್ಲಿ ಸಿಂಗಾಪುರಕ್ಕೆ ಪ್ರಯಾಣಿಸಬೇಕಾದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೊಸ ವಿಮಾನ ಸೇವೆಯನ್ನು ಆರಂಭಿಸಿದೆ. ಹೇಗೆ? ಏನು? ಓದಿ ಈ ಸುದ್ದಿ.

ಕಡಿಮೆ ವೆಚ್ಚದ ಪ್ರಯಾಣಕ್ಕಾಗಿ ಪ್ರಸಿದ್ಧವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಸಿಂಗಾಪುರದವರೆಗೆ ತಡೆ ರಹಿತ ವಿಮಾನ ಸೇವೆಯನ್ನು ಆರಂಭಿಸಿದೆ. 

ಉದ್ಯಾನ ನಗರಿ ಬೆಂಗಳೂರಿನಿಂದ ಸಿಂಹಳೀ ನಗರ ಸಿಂಗಾಪುರದವರೆಗೆ ಅಕ್ಟೋಬರ್ 29 ರಿಂದ ಈ ವಿಮಾನ ಸೇವೆ ಆರಂಭಿಸಿದೆ. ಆ ಮೂಲಕ ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಹೊಂದಿರುವ 18ನೇ ಭಾರತೀಯ ನಗರ ಎಂಬ ಖ್ಯಾತಿಗೆ ಪಾತ್ರವಾಯಿತು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಎಂಡಿ ಪ್ರದೀಪ್ ಸಿಂಗ್ ಖರೋಲಾ ಈ ಸೇವೆಗೆ ಚಾಲನೆ ನೀಡಿದರು. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಸಿಇಒ ಕೆ.ಶ್ಯಾಂ ಸುಂದರ್ ಮತ್ತು ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದು, ಮೊದಲ ಪ್ರಯಾಣದ ಪ್ರಥಮ ಪ್ರಯಾಣಕರು ಸಿಎಂಡಿಯಿಂದಲೇ ಬೋರ್ಡಿಂಗ್ ಪಾಸ್ ಪಡೆದರು.

ಯಾವಾಗ ಇರುತ್ತೆ ವಿಮಾನ?
ನಿರ್ಧರಿತ ಸಮಯದಂತೆ ಉದ್ಘಾಟಿತ ವಿಮಾನ ಸೇವೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.45ಕ್ಕೆ ಹಾರಾಟ ಆರಂಭಿಸಿತು. ಕ್ಯಾ.ಪ್ರಶಾಂತ್ ಕುಮಾರ್ ವರ್ಮಾ ಮತ್ತು ಅಧಿಕಾರಿ ಅಲ್ಬಿ ಥಾಮಸ್ ಕುನ್ನಪಲ್ಲಿ ಈ ವಿಮಾನ ಹಾರಾಟದ ಉಸ್ತುವಾರಿ ಹೊತ್ತಿದ್ದರು. ಸ್ಥಳೀಯ ಕಾಲಮಾನದ ಸಮಯ ಸಂಜೆ 7.55ಕ್ಕೆ ಸಿಂಗಾಪುರವನ್ನು ವಿಮಾನ ತಲುಪಿತು.

ಈ IX485 ವಿಮಾನವು ಸಿಂಗಾಪುರದಿಂದ ಬೆಂಗಳೂರಿಗೆ ರಾತ್ರಿ 9.10ಕ್ಕೆ ಪ್ರಯಾಣ ಬೆಳೆಸಲಿದ್ದು, ಬೆಂಗಳೂರನ್ನು ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 11.15ಕ್ಕೆ ಬಂದು ತಲುಪಲಿದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನಾವಾರ ಈ ವಿಮಾನ ಸೇವೆ ಲಭ್ಯವಿರಲಿದೆ.

ಏರ್ ಇಂಡಿಯಾದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾರತದ ಕಡಿಮೆ ವೆಚ್ಚದ ಮೊದಲ ಅಂತಾರಾಷ್ಟ್ರೀಯ ವಿಮಾನ ಸೇವೆ. ವಾರಕ್ಕೆ 600  ಬಾರಿ ನಿರ್ಗಮಿಸುವ ಈ ವಿಮಾನವು, ಭಾರತದ 18 ನಗರಗಳು, ಮಧ್ಯ ಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾದ 13 ಪ್ರದೇಶಗಳನ್ನ ಸಂಪರ್ಕಿಸುತ್ತದೆ. 

ಸಿಂಗಾಪುರಕ್ಕೆ ಹೋಗೋ ಪ್ಲ್ಯಾನ್ ಇದ್ದರೆ ಈ ವಿಷ್ಯ ನೆನಪಿರಲಿ

ಬಿಯಿಂಗ್ 737-800 ಎನ್‌ಜಿ ಏರ್‌ಕ್ರ್ಯಾಫ್ಟ್‌‌ನ 24 ವಿಮಾನ ಪಡೆಯಿದ್ದು, ಅದರಲ್ಲಿ ಏಳು ಇತ್ತೀಚೆಗೆ ಸೇರ್ಪೆಡೆಯಾದ ಹೊಸ ವಿಮಾನಗಳು. ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಸಾಮಾರ್ಥ್ಯವಿರುವ ಈ ವಿಮಾನಗಳಲ್ಲಿ ಕಡಿಮೆ ತೂಕದ ಸೀಟುಗಳಿದ್ದು, ಉತ್ತಮ ಸಾಮರ್ಥ್ಯ ಹೊಂದಿವೆ. ಕಡಿವೆ ವೆಚ್ಚದ ಪ್ರಯಾಣವಾದರೂ, ಉಚಿತವಾಗಿಯೇ ಟೀ, ಕಾಫೀ ಹಾಗೂ ಊಟ ನೀಡುವುದು ಈ ವಿಮಾನ ಸೇವೆಯ ಮತ್ತೊಂದು ವೈಶಿಷ್ಟ್ಯ.

ಆನ್‌ಲೈನ್‌ ಸೇವೆಯೂ ಲಭ್ಯ:
ಅಲ್ಲದೇ ಆನ್‌ಲೈನ್ ಮೂಲಕ ತಮಗೆ ಬೇಕಾದ ವಿಶೇಷ ಊಟವನ್ನೂ ಖರೀದಿಸುವ ಅವಕಾಶವನ್ನು ಈ ವಿಮಾನ ಕಲ್ಪಿಸುತ್ತದೆ. ಹೆಚ್ಚು ಲಗೇಜ್‌ಗೆ ಆನ್‌ಲೈನ್‌ನಲ್ಲಿಯೇ ಪಾಸ್ ಪಡೆಯುವ ಅವಕಾಶವೂ ಇರುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ facebook.com/AirIndiaExpressOfficial ಫೇಸ್‌ಬುಕ್ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುತ್ತದೆ.

click me!