
ನವದೆಹಲಿ[ಜು.22]: ಒಂದುವರೆ ವರ್ಷದ ಹಿಂದಷ್ಟೇ ಆರಂಭವಾದ ಆದಿತ್ಯ ಬಿರ್ಲಾ ಐಡಿಯಾ ಒಡೆತನದ ಪಾವತಿ ಬ್ಯಾಂಕ್ ಲಿ. ಸೇವೆಯನ್ನು ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಕೆಲ ದಿನಗಳಲ್ಲಿ ಪಾವತಿ ಬ್ಯಾಂಕ್‌ಗಳು ಸೇವೆ ಸ್ಥಗಿತಗೊಳಿಸುತ್ತಿರುವ 4ನೇ ಉದಾಹರಣ ಇದಾಗಿದೆ. ಪಾವತಿ ಬ್ಯಾಂಕಿಂಗ್ ವಲಯದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು, ಉದ್ಯಮವನ್ನು ಲಾಭದಾಯಕವಲ್ಲದ ಸ್ಥಿತಿಗೆ ತಲುಪಿಸಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.
2015ರಲ್ಲಿ 11 ಸಂಸ್ಥೆಗಳಿಗೆ ಆರ್‌ಬಿಐ ಪಾವತಿ ಬ್ಯಾಂಕಿಂಗ್ ಲೈಸೆನ್ಸ್ ನೀಡಿತ್ತು. ಸೇವಾವಧಿಯಲ್ಲಿ 20 ಕೋಟಿ ಠೇವಣಿ ಸಂಗ್ರಹಿಸಿದ್ದ ಬ್ಯಾಂಕ್, 24 ಕೋಟಿ ನಷ್ಟಅನುಭವಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.