ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಸಂಜೆ 6 ಗಂಟೆವರೆಗೆ 36.91 ಲಕ್ಷ ಐಟಿ ರಿಟರ್ನ್ಸ್‌ಳನ್ನು ಸಲ್ಲಿಸಲಾಗಿದೆ ಹಾಗೂ ಒಟ್ಟಾರೆ 2022-23ನೇ ಸಾಲಿಗೆ ಸಂಬಂಧಿಸಿದಂತೆ 6.5 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿದೆ.
ನವದೆಹಲಿ: ‘ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಸಂಜೆ 6 ಗಂಟೆವರೆಗೆ 36.91 ಲಕ್ಷ ಐಟಿ ರಿಟರ್ನ್ಸ್‌ಳನ್ನು ಸಲ್ಲಿಸಲಾಗಿದೆ ಹಾಗೂ ಒಟ್ಟಾರೆ 2022-23ನೇ ಸಾಲಿಗೆ ಸಂಬಂಧಿಸಿದಂತೆ 6.5 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿದೆ. ಈ ಮೂಲಕ ಆದಾಯ ತೆರಿಗೆ ಇಲಾಖೆ ಹೊಸ ಉತ್ತುಂಗಕ್ಕೇರಿದೆ’ ಎಂದು ಖುದ್ದು ಐಟಿ ಇಲಾಖೆಯೇ ಟ್ವೀಟ್ ಮಾಡಿದೆ. ‘ಕೊನೆಯ ದಿನ ಭಾರಿ ಲಗುಬಗೆಯಿಂದ ಜನರು ರಿಟನ್ಸ್‌ರ್ ಸಲ್ಲಿಸುತ್ತಿದ್ದು, ಸೋಮವಾರ ಸಂಜೆ 6 ಗಂಟೆಯವರೆಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ 1.78 ಕೋಟಿಗೂ ಹೆಚ್ಚು ಯಶಸ್ವಿ ಲಾಗಿನ್‌ಗಳನ್ನು ನಾವು ವೀಕ್ಷಿಸಿದ್ದೇವೆ’ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ. ಕಳೆದ ವರ್ಷ 5.83 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿತ್ತು.
‘ಈ ಮೈಲಿಗಲ್ಲನ್ನು ತಲುಪಲು ನಮಗೆ ಸಹಾಯ ಮಾಡಿದ್ದಕ್ಕಾಗಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ’ ಎಂದೂ ಇಲಾಖೆ ಧನ್ಯವಾದ ಸಮರ್ಪಿಸಿದೆ. ರಿಟರ್ನ್ಸ್‌ಸಲ್ಲಿಕೆ ಅವಧಿ ವಿಸ್ತರಿಸುವುದಿಲ್ಲ ಎಂದು ಈ ಹಿಂದೆಯೇ ಐಟಿ ಇಲಾಖೆ ಸ್ಪಷ್ಟಪಡಿಸಿತ್ತು. ಇನ್ನು ಮೇಲೆ ಸಲ್ಲಿಸಬೇಕಾದವರು ಡಿ.31ರವರೆಗೆ 5 ಸಾವಿರ ರು. ದಂಡ ಸಮೇತ ಸಲ್ಲಿಸಬೇಕಾಗುತ್ತದೆ. ಆದಾಯ 5 ಲಕ್ಷ ರು. ಮೀರದಿದ್ದರೆ ದಂಡದ ಪ್ರಮಾಣ 1 ಸಾವಿರ ರು.ನಷ್ಟಿದೆ.
ಜು.31ರ ಬಳಿಕವೂ ಐಟಿಆರ್ ವೆರಿಫೈ ಮಾಡ್ಬಹುದಾ? ಹೇಗೆ? ಇಲ್ಲಿದೆ ಮಾಹಿತಿ
2 ತಿಂಗಳಲ್ಲಿ 14302 ಕೋಟಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ: 28 ಜನರ ಬಂಧನ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ (ಏಪ್ರಿಲ್-ಮೇ) 14,302 ಕೋಟಿ ರು.ಗಳ 2,784 ಜಿಎಸ್‌ಟಿ ವಂಚನೆ ಪ್ರಕರಣಗಳು ಪತ್ತೆಯಾಗಿದ್ದು ಈ ಅವಧಿಯಲ್ಲಿ 5,716 ಕೋಟಿ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 21 ಜನರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. 2020-21 ಮತ್ತು 2023-24ರ (ಏಪ್ರಿಲ್-ಮೇ) ಅವಧಿಯಲ್ಲಿ 43,516 ಪ್ರಕರಣಗಳಲ್ಲಿ 2.68 ಲಕ್ಷ ಕೋಟಿ ರು.ಗೂ ಅಧಿಕ ಜಿಎಸ್‌ಟಿ ವಂಚನೆ ಪತ್ತೆಯಾಗಿದೆ. ಈ ಅವಧಿಯಲ್ಲಿ 76,333 ಕೋಟಿ ರು.ಗಳನ್ನು ವಶಪಡಿಸಿಕೊಳ್ಳಲಾಗಿದ್ದು 1,020 ಜನರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟೋದು ಈ ವ್ಯಕ್ತಿ, ಅಂಬಾನಿ-ಅದಾನಿ, ಟಾಟಾ ಯಾವುದೇ ಉದ್ಯಮಿ ಅಲ್ಲ!