Bengaluru: ಕೈಗಾರಿಕಾ ಕ್ರಾಂತಿ 4.0 ಸದ್ಬಳಕೆಗೆ ಕರೆ ಕೊಟ್ಟ ಉನ್ನತ ಮಟ್ಟದ ಸಭೆ

By Govindaraj SFirst Published Nov 25, 2022, 9:03 PM IST
Highlights

ದೇಶದ ಎಲ್ಲ ರಾಜ್ಯಗಳು ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ಸೃಷ್ಟಿಯಾಗುತ್ತಿರುವ ಅಭೂತಪೂರ್ವ ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು, ಆರ್ಥಿಕ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಶುಕ್ರವಾರ ಇಲ್ಲಿ ನಡೆದ 18 ರಾಜ್ಯಗಳ ಕೌಶಲಾಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು ಮತ್ತು ಉನ್ನತಾಧಿಕಾರಿಗಳ ಸಭೆ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ನ.25): ದೇಶದ ಎಲ್ಲ ರಾಜ್ಯಗಳು ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ಸೃಷ್ಟಿಯಾಗುತ್ತಿರುವ ಅಭೂತಪೂರ್ವ ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು, ಆರ್ಥಿಕ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಶುಕ್ರವಾರ ಇಲ್ಲಿ ನಡೆದ 18 ರಾಜ್ಯಗಳ ಕೌಶಲಾಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು ಮತ್ತು ಉನ್ನತಾಧಿಕಾರಿಗಳ ಸಭೆ ಅಭಿಪ್ರಾಯಪಟ್ಟಿದೆ. ನಗರದ ಅಶೋಕ ಹೋಟೆಲಿನಲ್ಲಿ ನಡೆದ 'ಕೌಶಲ್ಯಾಭಿವೃದ್ಧಿಯಲ್ಲಿ ಗುಣಮಟ್ಟ: ಸ್ಪರ್ಧಾತ್ಮಕ ಲಾಭಕ್ಕೆ ಕೌಶಲ್ಯ ಕಲಿಕೆ' ಕುರಿತ ಒಂದು ದಿನ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಈ ವಿಚಾರ ಪ್ರತಿಧ್ವನಿಸಿದೆ. 

ಮುಂಬರುವ ಜನವರಿಯಲ್ಲಿ ನಡೆಯಲಿರುವ 'ವಿಕಾಸ ಭಾರತ: ಗುರಿ ಸಾಧನೆಯ ಹಾದಿಯಲ್ಲಿ' ಸಮಾವೇಶಕ್ಕೆ  ಪೂರ್ವಭಾವಿಯಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಗುಜರಾತ್‌, ಹರಿಯಾಣ, ಜಾರ್ಖಂಡ್‌, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್‌, ಪುದುಚೇರಿ, ರಾಜಾಸ್ಥಾನ, ಸಿಕ್ಕಿಂ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಕೌಶಲ್ಯಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, "ಕರ್ನಾಟಕದಲ್ಲಿ ಇತ್ತೀಚೆಗೆ 150 ಐಟಿಐಗಳನ್ನು 4,500 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗಿದ್ದು, ರಾಜ್ಯವು ಕೈಗಾರಿಕಾ ಕ್ರಾಂತಿ 4.0ಗೆ ಬೇಕಾಗುವ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಸಿದ್ಧವಾಗಿದೆ" ಎಂದರು. 

ಯುವತಿಯ ಆಡಿಯೋ ವೈರಲ್ ವಿಚಾರ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ನಟ ವಿದ್ಯಾಭರಣ

ಯೋಜನೆ ಮತ್ತು ಅಂಕಿಅಂಶ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಹಂತದಿಂದಲೇ ಜೀವನ ಕೌಶಲ್ಯಗಳನ್ನು ಕಲಿಸುವ ಅಗತ್ಯವಿದೆ. ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯವಾಗಿದೆ ಎಂದರು. ಮುಖ್ಯವಾಗಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಲ್ಲಿ ಅಂಗೀಕರಿಸಿರುವ ತಾಂತ್ರಿಕ ಕೋರ್ಸುಗಳನ್ನು ಮಾಡಿಕೊಂಡಿರುವವರನ್ನು ಉದ್ಯೋಗಗಳಿಗೆ ನೇಮಿಸಿಕೊಳ್ಳಬೇಕು. ಇದಕ್ಕೆ ಅಗತ್ಯ ಕಾನೂನುಗಳನ್ನು ರೂಪಿಸಬೇಕು. ಇದರ ಜತೆಗೆ ಎಆರ್ ಮತ್ತು ವಿಆರ್‍‌ ಆಧಾರಿತ ಕೌಶಲ ತರಬೇತಿಗೆ ತಕ್ಕ ವ್ಯವಸ್ಥೆಯನ್ನು ರೂಪಿಸಬೇಕು. ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಅಲ್ಲದೆ, ಆನ್‌ಜಾಬ್‌ ತರಬೇತಿ, ಇಂಟರ್ನ್‌ಶಿಪ್‌ ಎರಡನ್ನೂ ಉದ್ಯಮಗಳಲ್ಲಿ ಕಡ್ಡಾಯಗೊಳಿಸಬೇಕು. ಕೌಶಲಗಳನ್ನು ಕಲಿಸುವಾಗ ಜಾಗತಿಕ ಮಾರುಕಟ್ಟೆಯ ನಿರೀಕ್ಷೆ ಮತ್ತು ಬೇಡಿಕೆಗಳನ್ನು ಗಮನಿಸಬೇಕು. 

ಹೊಂಡಾ ಗುಂಡಿ ರಸ್ತೆಯಲ್ಲೇ ಹೆರಿಗೆ: ಅಭಿವೃದ್ಧಿ ಹೊಂದಿದ ಉಡುಪಿಯಲ್ಲಿ ಇದೆಂಥಾ ಅವ್ಯವಸ್ಥೆ?

ಈ ನಿಟ್ಟಿನಲ್ಲಿ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ನೆರೆದಿದ್ದ ಅಧಿಕಾರಿಗಳು ಪ್ರತಿಪಾದಿಸಿದರು. ಕಾರ್ಯಾಗಾರದಲ್ಲಿ ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಕಾರ್ಯದರ್ಶಿ ಅತುಲ್‌ಕುಮಾರ್‍‌ ತಿವಾರಿ, ಜಂಟಿ ಕಾರ್ಯದರ್ಶಿ ಕೆ.ಕೆ.ದ್ವಿವೇದಿ, ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಆರ್‍‌. ಅಶ್ವಿನ್‌ ಗೌಡ ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಾಗಾರದ ನಂತರ ಎಲ್ಲ ಅಧಿಕಾರಿಗಳು ಪೀಣ್ಯದಲ್ಲಿ‌ ಇರುವ ಉನ್ನತೀಕರಿಸಿದ ಐಟಿಐಗೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲಿನ ಮೂಲಸೌಲಭ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚೆಗೆ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

click me!