ಲಾಕ್ಡೌನ್‌ ವೇಳೆ ಉದ್ಯೋಗ ಕುಸಿತ: 9 ತಿಂಗಳಲ್ಲಿ 71 ಲಕ್ಷ ಪಿಎಫ್‌ ಖಾತೆ ಬಂದ್‌!

Published : Mar 17, 2021, 08:11 AM ISTUpdated : Mar 17, 2021, 08:19 AM IST
ಲಾಕ್ಡೌನ್‌ ವೇಳೆ ಉದ್ಯೋಗ ಕುಸಿತ: 9 ತಿಂಗಳಲ್ಲಿ 71 ಲಕ್ಷ ಪಿಎಫ್‌ ಖಾತೆ ಬಂದ್‌!

ಸಾರಾಂಶ

9 ತಿಂಗಳಲ್ಲಿ 71 ಲಕ್ಷ ಪಿಎಫ್‌ ಖಾತೆ ಬಂದ್‌| 2020ರ ಏಪ್ರಿಲ್‌- ಡಿಸೆಂಬರ್‌ ಅವಧಿಯಲ್ಲಿ ಖಾತೆ ಸ್ಥಗಿತ| ಲಾಕ್ಡೌನ್‌ ವೇಳೆ ಭಾರೀ ಪ್ರಮಾಣದ ಉದ್ಯೋಗ ಕುಸಿತ

ನವದೆಹಲಿ(mA.೧೭): ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ), 2020ರ ಏಪ್ರಿಲ್‌-ಡಿಸೆಂಬರ್‌ ನಡುವೆ 71.01 ಲಕ್ಷ ಪಿಎಫ್‌ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಕೋವಿಡ್‌-19 ಲಾಕ್‌ಡೌನ್‌ ಹೇರಿಕೆಯಿಂದ ಆದ ಉದ್ಯೋಗ ನಷ್ಟದ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

2019ರ ಇದೇ ಅವಧಿಯಲ್ಲಿ 66.66 ಲಕ್ಷ ಖಾತೆಗಳು ಬಂದ್‌ ಆಗಿದ್ದವು. ಆದರೆ ಅದಕ್ಕಿಂತ ಈ ಸಲ ಹೆಚ್ಚು ಖಾತೆಗಳು ಕ್ಲೋಸ್‌ ಆಗಿವೆ. ಲೋಕಸಭೆಗೆ ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರೇ ಈ ಅಂಕಿ-ಅಂಶಗಳ ಮಾಹಿತಿ ನೀಡಿದ್ದಾರೆ.

ಕೊರೋನಾ ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಮಾರ್ಚ್ 25ರಂದು ಲಾಕ್‌ಡೌನ್‌ ಘೋಷಿಸಿದ್ದರು. ಬಳಿಕ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಈ ಅವಧಿಯಲ್ಲಿ ಉದ್ಯೋಗ ನಷ್ಟ, ವೇತನ ಕಡಿತ, ಉದ್ಯೋಗ ಬದಲಾವಣೆ- ಇತ್ಯಾದಿಗಳು ನಡೆದಿದ್ದು, ಇದೇ ಪಿಎಫ್‌ ಖಾತೆ ಸ್ಥಗಿತ ಹೆಚ್ಚಲು ಕಾರಣ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!
ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ