ಉದ್ಯೋಗ ಕಡಿತದ ಈ ದಿನಗಳಲ್ಲಿಆರ್ಥಿಕ ಮುಗ್ಗಟ್ಟು ಎದುರಾದ್ರೆ ಏನ್ ಮಾಡ್ತೀರಾ? ಹೀಗೆ ಸಿದ್ಧತೆ ಮಾಡಿಕೊಳ್ಳಿ

By Suvarna News  |  First Published Jan 25, 2023, 2:48 PM IST

ಇಂದು ಐಟಿ ವಲಯದಲ್ಲಿ ಉದ್ಯೋಗ ಕಡಿತದ ಬಿಸಿ ದಿನೇದಿನೆ ಹೆಚ್ಚುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಶಾಕ್ ನೀಡುತ್ತಿವೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಯಾರಿಗೆಲ್ಲ ಆರ್ಥಿಕ ಮಗ್ಗಟ್ಟು ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ತಕ್ಷಣದಿಂದಲೇ ಆರ್ಥಿಕ ಸಂಕಷ್ಟದ ಸಮಯದಲ್ಲಿ ನೆರವಾಗಲು ಒಂದಿಷ್ಟು ಹಣವನ್ನು ತುರ್ತು ನಿಧಿ ರೂಪದಲ್ಲಿ ಉಳಿತಾಯ ಮಾಡೋದು ಅಗತ್ಯ. 


Business Desk:ಹಣದ ತುರ್ತು ಅಗತ್ಯ ಯಾವ ಸಂದರ್ಭದಲ್ಲಿ ಎದುರಾಗುತ್ತದೆ ಎಂದು ಹೇಳಲಾಗದು. ಈಗಂತೂ ಬಹುರಾಷ್ಟ್ರೀಯ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಹೀಗಾಗಿ ಯಾವ ಸಮಯದಲ್ಲಿ ಯಾರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗದು. ಈ ಕಾರಣದಿಂದ ಪ್ರತಿ ತಿಂಗಳ ಆದಾಯದಲ್ಲಿ ಒಂದಿಷ್ಟು ಭಾಗವನ್ನು ತುರ್ತು ನಿಧಿಗಾಗಿ ಮೀಸಲಿಡುವುದು ಅಗತ್ಯ. ಇದ್ರಿಂದ ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ ಗಳು ಅಥವಾ ಸಾಲದ ಮೊರೆ ಹೋಗಬೇಕಾದ ಅಗತ್ಯವಿರೋದಿಲ್ಲ. ವೈದ್ಯಕೀಯ ಖರ್ಚುಗಳು, ವಾಹನ ದುರಸ್ತಿ ಅಥವಾ ಅಚಾನಕ್ ಆಗಿ ಎದುರಾಗುವ ಇನ್ನಿತರ ವಚ್ಚಗಳನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ, ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗೆ ಇಂಥ ತುರ್ತು ಸಂದರ್ಭಗಳ ವೆಚ್ಚಗಳನ್ನು ಭರಿಸಲು ಹಣ ಉಳಿತಾಯ ಮಾಡೋದು ಸ್ವಲ್ಪ ಕಷ್ಟವಾಗಬಹುದು. ಆದರೆ, ಮನಸ್ಸಿದ್ದರೆ ಮಾರ್ಗ ಅನ್ನುವಂತೆ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡಲು ಪ್ರಾರಂಭಿಸಿದರೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಹಣ ನಿಮ್ಮ ಬಳಿ ಸಂಗ್ರಹವಾಗುತ್ತದೆ.  ನೆನಪಿಡಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು ತುರ್ತು ನಿಧಿಯಾಗಿ ಸಂಗ್ರಹಿಸೋದು ಕಷ್ಟ. ಹೀಗಾಗಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಉಳಿತಾಯ ಮಾಡಿದ್ರೆ ದೀರ್ಘ ಸಮಯದ ಬಳಿಕ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತದೆ. ಹಾಗೆಯೇ ಉಳಿತಾಯ ಮಾಡಲು ವೆಚ್ಚಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವೂ ಇದೆ. ಹಾಗಾದರೆ, ತುರ್ತು ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವಂತೆ ಹಣವನ್ನು ಸಂಗ್ರಹಿಸೋದು ಹೇಗೆ? ಅದಕ್ಕಿರುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ.

1.ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡಿ
ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಮುಂದಾಗಬೇಡಿ. ಸಣ್ಣ ಮೊತ್ತದಿಂದಲೇ ಉಳಿತಾಯ ಪ್ರಾರಂಭಿಸಿ. ಪ್ರತಿ ತಿಂಗಳು 1,000ರೂ. ಉಳಿತಾಯ ಮಾಡುವ ಮಾಡಿದರೂ ಸಾಕು. ಆ ಬಳಿಕ ಆದಾಯ ಹೆಚ್ಚಾದಂತೆ ಈ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತ ಹೋದರೆ ಆಯ್ತು. ಏನೂ ಇಲ್ಲ ಎನ್ನುವುದಕ್ಕಿಂತ ಚಿಕ್ಕ ಮೊತ್ತದ ಹಣವನ್ನಾದ್ರೂ ಉಳಿತಾಯ ಮಾಡೋದು ಉತ್ತಮ. 

Tap to resize

Latest Videos

20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ

2.ಅಟೋಮ್ಯಾಟ್ ಉಳಿತಾಯ: ಅಂದ್ರೆ ಪ್ರತಿ ಬಾರಿ ನಿಮ್ಮ ವೇತನ ಖಾತೆಯಿಂದ ಉಳಿತಾಯ ಖಾತೆಗೆ ಹಣವನ್ನು ನೀವೇ ವರ್ಗಾವಣೆ ಮಾಡುವ ಬದಲು ಸ್ವಯಂ ಆಗಿ ಅಥವಾ ಅಟೋಮ್ಯಾಟ್ ಆಗಿ ವರ್ಗಾವಣೆ ಆಗುವಂತೆ ವ್ಯವಸ್ಥೆ ಮಾಡಿ. ಇದ್ರಿಂದ ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ಅದರಷ್ಟಕ್ಕೆ ಉಳಿತಾಯವಾಗುತ್ತದೆ. 

3.ಅನಗತ್ಯ ವೆಚ್ಚಕ್ಕೆ ಕಡಿವಾಣ: ಹೋಟೆಲ್ ಗಳಿಗೆ ಹಣ ಸುರಿಯೋದು, ಮನರಂಜನೆ ಹೆಸರಲ್ಲಿ ಪ್ರತೀ ವಾರ ಸುತ್ತಾಡಲು ಹೋಗೋದು ಸೇರಿದಂತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಈ ಹಣವನ್ನು ನಿಮ್ಮ ತುರ್ತು ನಿಧಿ ಮೊತ್ತ ಹೆಚ್ಚಳಕ್ಕೆ ಬಳಸಿಕೊಳ್ಳಿ.

4.ಹೆಚ್ಚುವರಿ ಹಣ ಗಳಿಸಿ: ಉದ್ಯೋಗದ ಹೊರತಾಗಿ ಹೆಚ್ಚುವರಿ ಆದಾಯ ಗಳಿಸುವ ಇತರ ಮಾರ್ಗಗಳ ಬಗ್ಗೆ ಯೋಚಿಸಿ. ಫ್ರೀಲ್ಯಾನ್ಸ್ ಕೆಲಸ ಅಥವಾ ಮನೆಯಲ್ಲೇ ಸಿದ್ಧಪಡಿಸಿ ಮಾರುವಂತಹ ವಸ್ತುಗಳ ಉದ್ಯಮ ಇಲ್ಲವೇ ನೃತ್ಯ, ಸಂಗೀತ ತಿಳಿದಿದ್ರೆ ತರಗತಿಗಳನ್ನು ನಡೆಸುವ ಮೂಲಕ ಕೂಡ ಒಂದಿಷ್ಟು ಆದಾಯ ಗಳಿಸಲು ಸಾಧ್ಯವಿದೆ. ಹೀಗೆ ಹವ್ಯಾಸವನ್ನೇ ಹೆಚ್ಚುವರಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲು ಇಂದು ಸಾಕಷ್ಟು ಅವಕಾಶಗಳಿವೆ. 

ಟೆಕ್ ಉದ್ಯೋಗಿಗಳಿಗೆ ತಲೆಬಿಸಿ: ಯಾಕೆ ದಿನ ದಿನಕ್ಕೂ ವಜಾಗೊಳ್ತಿದ್ದಾರೆ ಟೆಕ್ಕಿಗಳು ಗೊತ್ತಾ?

5.ರಿಕರಿಂಗ್ ಡೆಫಾಸಿಟ್ ಅಥವಾ ಆರ್ ಡಿ ಖಾತೆ ತೆರೆಯಿರಿ: ಅಂಚೆ ಕಚೇರಿ ಹಾಗೂ ಕೆಲವು ಬ್ಯಾಂಕುಗಳಲ್ಲಿ ಆರ್ ಡಿ ಖಾತೆ ತೆರೆಯಲು ಅವಕಾಶವಿದೆ. ಈ ಖಾತೆಯಲ್ಲಿ ನೀವು ಹಣವನ್ನು ಉಳಿತಾಯ ಮಾಡಬಹುದು. ಆರ್ ಡಿ ಖಾತೆಯಲ್ಲಿನ ಹಣಕ್ಕೆ ಉತ್ತಮ ಬಡ್ಡಿ ಕೂಡ ಇದೆ. ಪ್ರತಿ ತಿಂಗಳು ನಿಗದಿತ ಹಣವನ್ನು ಈ ಖಾತೆಗೆ ತುಂಬುತ್ತ ಬಂದರೆ ಬಡ್ಡಿಯೂ ಸೇರಿದಂತೆ ನಿಮ್ಮ ತುರ್ತು ನಿಧಿ ಸಿದ್ಧಗೊಳ್ಳುತ್ತದೆ. 


 

click me!