ಕೋಟ್ಯಂತರ ಬಳಕೆದಾರರ ಟೆನ್ಷನ್‌ ದೂರ; ಜಿಯೋದಿಂದ ಕಡಿಮೆ ಬೆಲೆಯ 5 ಪ್ರಿಪೇಯ್ಡ್ ಪ್ಲಾನ್

Published : Jun 30, 2025, 12:34 PM IST
Reliance Jio

ಸಾರಾಂಶ

ರಿಲಯನ್ಸ್ ಜಿಯೋ ಕಡಿಮೆ ಬೆಲೆಯ ಐದು ಪ್ರಿಪೇಯ್ಡ್ ಡೇಟಾ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ₹11 ರಿಂದ ಆರಂಭವಾಗುವ ಈ ಪ್ಲಾನ್‌ಗಳು ವಿವಿಧ ಡೇಟಾ ಮತ್ತು ವ್ಯಾಲಿಡಿಟಿ ಆಯ್ಕೆಗಳನ್ನು ಒಳಗೊಂಡಿವೆ.

ಮುಂಬೈ: ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯ ಐದು ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಬಹುತೇಕ ಜಿಯೋ ಬಳಕೆದಾರರು ಪ್ರಿಪೇಯ್ಡ್ ಪ್ಲಾನ್ ಬಳಕೆ ಮಾಡುತ್ತಾರೆ. ಈ ಹಿನ್ನೆಲೆ ಜನಸಾಮಾನ್ಯರ ಕೈಗೆಟಕುವ ದರದಲ್ಲಿಯೇ ಪ್ಲಾನ್‌ಗಳನ್ನು ತಂದಿದೆ. ಈ ಐದರಲ್ಲಿ 11 ರೂಪಾಯಿ ಪ್ಲಾನ್ ಸಹ ಸೇರಿದೆ. ಈ 5 ಪ್ಲಾನ್‌ಗಳು ಕೇವಲ ಡೇಟಾ ಪ್ಯಾಕ್ ಹೊಂದಿವೆ. ಈ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವ ಮೂಲಕ ಇಂಟರ್‌ನೆಟ್ ಆನಂದಿಸಬಹುದು.

ರಿಲಯನ್ಸ್ ಜಿಯೋ ಡೇಟಾ ಪ್ಲಾನ್ 11 ರೂ.ಗಳಿಂದ ಆರಂಭವಾಗುತ್ತವೆ. ಈ 5 ಡೇಟಾ ಪ್ಲಾನ್‌ಗಳ ಬೆಲೆ ಎಷ್ಟು ಸೇರಿದಂತೆ ಇನ್ನಿತರ ಮಾಹಿತಿಯನ್ನು ನೋಡೋಣ ಬನ್ನಿ.

ಜಿಯೋದ ₹11 ಪ್ಲಾನ್

ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಬಳಕೆದಾರರಿಗೆ 10GB ಹೈಸ್ಪೀಡ್ ಡೇಟಾ ಸಿಗಲಿದೆ. ಈ ಪ್ಲಾನ್ ವ್ಯಾಲಿಡಿಟಿ ಕೇವಲ 1 ಗಂಟೆ ಮಾತ್ರ ಆಗಿದೆ. ತುರ್ತು ಸಂದರ್ಭಗಳಲ್ಲಿ ಗ್ರಾಹಕರು ಈ ಪ್ಲಾನ್ ಬಳಕೆ ಮಾಡಬಹುದು.

Jio ₹19 ಪ್ಲಾನ್

ಕೇವಲ 19 ರೂ.ಯಲ್ಲಿ ರಿಲಯನ್ಸ್ ಜಿಯೋ ನಿಮಗೆ 1GB ಡೇಟಾ ಸಿಗುತ್ತದೆ. ಈ ಪ್ಲಾನ್ ವ್ಯಾಲಿಡಿಟಿ 1 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಕೇವಲ ವಾಟ್ಸಪ್, ಫೇಸ್‌ಬುಕ್ ನೋಡುವ ವರ್ಗದ ಜನತೆಗೆ ಈ ಪ್ಲಾನ್ ಲಾಭದಾಯಕವಾಗಿದೆ.

Jio ₹29 ಪ್ಲಾನ್

ರಿಲಯನ್ಸ್ ಜಿಯೋ ಕೇವಲ 29 ರೂಪಾಯಿಯಲ್ಲಿ 2GB ಡೇಟಾ ನೀಡುತ್ತಿದೆ. ಈ ಪ್ಲಾನ್ 2 ದಿನದ ವ್ಯಾಲಿಡಿಟಿಯನ್ನು ಒಳಗೊಂಡಿದೆ.

Jio ₹49 ಪ್ಲಾನ್

ಕೇವಲ ದಿನಕ್ಕೆ ಮಾತ್ರ ಹೆಚ್ಚು ಡೇಟಾ ಬೇಕಿದ್ರೆ ಈ ಪ್ಲಾನ್ ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. ಈ ಪ್ಯಾಕ್ 1 ದಿನದ ವ್ಯಾಲಿಡಿಟಿ ಹೊಂದಿದ್ದು, ಅನ್‌ಲಿಮಿಟೆಡ್‌ ಡೇಟಾ ಬಳಸಬಹುದು. 25GB ಡೇಟಾ ಬಳಕೆಯ ನಂತರ ಇಂಟರ್‌ನೆಟ್ ಸ್ಪೀಡ್ ಕಡಿಮೆಯಾಗುತ್ತದೆ .

Jio ₹69 ಪ್ಲಾನ್

ಸೀಮಿತವಾಗಿ ಇಂಟರ್‌ನೆಟ್ ಬಳಕೆದಾರರು 69 ರೂ. ಡೇಟಾ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದು 7 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ನಿಮಗೆ 6GB ಡೇಟಾ ಸಿಗಲಿದೆ.

ಇದನ್ನೂ ಓದಿ: ಧೀರೂಬಾಯಿ ಅಂಬಾನಿ ಹೇಳಿದ ಇದೇ ಮಂತ್ರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಯಶಸ್ಸು ಅಡಗಿದೆ ಎಂದ ಮುಕೇಶ್‌ ಅಂಬಾನಿ!

ರಿಲಯನ್ಸ್ ಜಿಯೋ ನೀಡುತ್ತಿರುವ ವಾರ್ಷಿಕ ಪ್ಲಾನ್‌ಗಳು

Jio ₹3,599 ಪ್ಲಾನ್

ಈ ಪ್ಲಾನ್ 365 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಮತ್ತು ಅನ್‌ಲಿಮಿಟೆಡ್ 5G ಆಕ್ಸೆಸ್ ಸಹ ಸಿಗಲಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು ಹಾಗೂ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. ಇನ್ನುಳಿದಂತೆ ಜಿಯೋದಿಂದ ಸಿಗುವ ಎಲ್ಲಾ ಆಕ್ಸೆಸ್‌ಗಳು ಲಭ್ಯವಾಗುತ್ತವೆ.

Jio ₹3,999 ಪ್ಲಾನ್

ಪ್ರತಿದಿನ 2.5GB ಡೇಟಾ ಮತ್ತು ಅನ್‌ಲಿಮಿಟೆಡ್ 5G ಆಕ್ಸೆಸ್ ಸಹ ಸಿಗಲಿದ್ದು, 365 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಅನಿಯಮಿತ ಕರೆ, ಉಚಿತ 100 ಎಸ್‌ಎಂಎಸ್ ಲಾಭ ಸಿಗಲಿದೆ, ಜಿಯೀ ಆಪ್‌ ಆಕ್ಸೆಸ್ ಸಿಗಲಿದೆ. ಜಿಯೋ ಹಾಟ್‌ಸ್ಟಾರ್, ಜಿಯೋ ಟಿವಿ ಮೊಬೈಲ್ ಆಪ್ ಸಿಗಲಿದೆ.

ಇದನ್ನೂ ಓದಿ: 1 ರೂ.ಗೆ 1GB ಡೇಟಾ; 400GBಯ ಬಿಗ್ ಆಫರ್; ವ್ಯಾಲಿಡಿಟಿ, ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!