5 ಕ್ರೆಡಿಟ್‌ ಕಾರ್ಡ್‌ ವಂಚನೆ ಬಗ್ಗೆ ಎಚ್ಚರದಿಂದಿರಿ!

Published : Mar 24, 2026, 08:26 AM IST
 credit card

ಸಾರಾಂಶ

common credit card scams ಇಮೇಲ್, ಫೋನ್ ಕರೆ, ಎಟಿಎಂ, ಮತ್ತು ರಿವಾರ್ಡ್ ಪಾಯಿಂಟ್‌ಗಳ ಆಮಿಷದಂತಹ ಹಲವು ವಿಧಾನಗಳ ಮೂಲಕ ವಂಚಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ಹಣ ದೋಚುತ್ತಾರೆ. 

1. ಇಮೇಲ್, ಮೆಸೇಜ್‌ಗಳ ಮೂಲಕ ವಂಚನೆ

ವಂಚಕರು ಫೇಕ್‌ ಇಮೇಲ್‌ ಅಥವಾ ಟೆಕ್ಷ್ಟ್ ಮೆಸೇಜ್, ಕೆಲವೊಮ್ಮೆ ವಾಟ್ಸಾಪ್‌ಗಳ ಮೂಲಕವೂ ಕ್ರೆಡಿಟ್‌ ಕಾರ್ಡ್‌ ಡೀಟೇಲ್‌ ಪಡೆಯಬಹುದು. ವಂಚಕರು ಕಳಿಸುವ ಸ್ಕ್ಯಾಮ್‌ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ಪರ್ಸನಲ್‌ ಡಾಟಾ ಕದ್ದು ಹಣ ದೋಚುವ ಸಾಧ್ಯತೆ ಇದೆ. ಸಂಬಂಧವಿಲ್ಲದ ಲಿಂಕ್‌ಗಳನ್ನು ಕ್ಲಿಕ್ ಮಾಡದಿರಿ.

2. ಫೋನ್‌ ಕರೆಗಳ ಮೂಲಕ ನಂಬಿಸಿ ಮೋಸ

ಇದಕ್ಕೆ ವಾಯ್ಸ್‌ ಫಿಷಿಂಗ್‌ ಅಂತಾರೆ. ಬ್ಯಾಂಕ್‌ ಆಫೀಸರ್‌, ಪೊಲೀಸ್‌ ಅಧಿಕಾರಿ ಅಥವಾ ಆರ್‌ಬಿಐನವರು ಅಂತ ಉಪಾಯದಿಂದ ನಿಮ್ಮ ಕಾರ್ಡಿನ, ಬ್ಯಾಂಕ್‌ ಅಕೌಂಟ್ ವಿವರ ಪಡೆಯಬಹುದು. ಹೀಗೆ ಕಾಲ್‌ ಮಾಡುವವರು ನಿಮ್ಮ ಬಳಿ ಓಟಿಪಿ, ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ನ ಸಿವಿವಿ ನಂಬರ್‌, ಎಟಿಎಂ ಪಿನ್‌ ಇತ್ಯಾದಿ ವಿವರ ಪಡೆಯಬಹುದು.

3. ಹಣ ವಿತ್‌ಡ್ರಾ ಮಾಡುವಾಗ ವಂಚನೆ

ಎಟಿಎಂ ಅಥವಾ ಸ್ವೈಪ್‌ ಮಷೀನ್‌ಗಳು ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಡಾಟಾ ಕದಿಯಬಹುದು. ಬಳಿಕ ಅದನ್ನೇ ನಕಲಿ ಮಾಡಿ ನಿಮ್ಮ ಅಕೌಂಟಿನಿಂದ ಹಣ ದೋಚಬಹುದು. ಹೀಗಾಗಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಅನ್ನು ಸಾರ್ವಜನಿಕ ಜಾಗಗಳಲ್ಲಿ ಬಳಸುವ ಮುಂಚೆ ಸಂಶಯಾಸ್ಪದ ಸಾಧನಗಳಿವೆಯೇ ಎಂದು ಎಚ್ಚರಿಕೆಯಿಂದ ಪರಿಶೀಲಿಸಿ.

4. ಅತಿಯಾಸೆಯಿಂದಲೂ ಸಮಸ್ಯೆ

ದುಬಾರಿ ಉತ್ಪನ್ನ ಖರೀದಿಸಿದಾಗ ಅಥವಾ ಯಾವುದೋ ಸರ್ವೀಸ್‌ ಪಡೆದಾಗ ಉಚಿತ ರಿವಾರ್ಡ್‌ ಪಾಯಿಂಟ್‌ ಬಂದಿದೆ ಎಂದು ನಂಬಿಸಬಹುದು, ಬೋಸನ್‌, ಕ್ಯಾಶ್‌ಬ್ಯಾಕ್‌, ರಿಯಾಯಿತಿ ಆಮಿಷ ಒಡ್ಡಬಹುದು. ನಂತರ ರಿವಾರ್ಡ್ ಪಾಯಿಂಟ್‌ನ ಅವಧಿ ಮುಗಿಯುತ್ತಿದೆ ಎಂದು ನಂಬಿಸಿ, ಅದನ್ನು ಉಳಿಸಿಕೊಳ್ಳಲು ಲಿಂಕ್‌ ಕಳಿಸಿ ಕ್ಲಿಕ್‌ ಮಾಡಲು ಹೇಳಬಹುದು, ಆ ಲಿಂಕ್‌ ಕ್ಲಿಕ್‌ ಮಾಡಿದಾಗ ಕ್ರೆಡಿಟ್‌ ಕಾರ್ಡ್‌ ವಿವರ ನೀಡುವಂತೆ ಒತ್ತಡ ಹಾಕಬಹುದು.

ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ರಿವಾರ್ಡ್ ಪಾಯಿಂಟ್‌ಗೆ ನಿಮ್ಮ ವೈಯಕ್ತಿಕ ಕಾರ್ಡ್ ವಿವರವನ್ನು ಲಿಂಕ್ ಮೂಲಕ ಕೇಳುವುದಿಲ್ಲ ಅನ್ನೋದು ಗೊತ್ತಿರಲಿ.

5. ಪಬ್ಲಿಕ್‌ ವೈಫೈ ಅಥವಾ ಆ್ಯಪ್‌ಗಳು

ಸಾರ್ವಜನಿಕ ವೈಫೈ ಮೂಲಕ ನಿಮ್ಮ ಮೊಬೈಲ್‌ನಲ್ಲಿರುವ ಖಾಸಗಿ ದಾಖಲೆ ಕದಿಯುವುದು ಸಾಮಾನ್ಯವಾಗುತ್ತಿದೆ. ಆ್ಯಪ್‌ ಬೇಸ್ಡ್‌ ಕ್ರೆಡಿಟ್‌ ಕಾರ್ಡ್‌ ಸ್ಕ್ಯಾಮ್‌ಗಳೂ ಹೆಚ್ಚಾಗುತ್ತಿವೆ. ಆ್ಯಪ್‌ ಮೂಲಕ ನಿಮ್ಮ ಕ್ರೆಡಿಟ್‌ ಕಾರ್ಡ್‌ ಅಥವಾ ಬ್ಯಾಂಕ್‌ ವಿವರ ಪಡೆದು ಬಳಿಕ ಹಣ ಕಸಿಯುವ ಸ್ಮಾರ್ಟ್‌ ಟ್ರಿಕ್‌ಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ.

ಕ್ರೆಡಿಟ್‌ ಕಾರ್ಡ್‌ ಸುರಕ್ಷಿತವಾಗಿರಲಿ

1. ಖರ್ಚಿನ ಮಿತಿ ನಿಗದಿಪಡಿಸಿ. ನಿಮ್ಮ ಕಾರ್ಡ್‌ ಬಳಕೆಯಾದ ತಕ್ಷಣ ಮೆಸೇಜ್‌ ಬರುವಂತೆ ಸೆಟ್ಟಿಂಗ್‌ ಮಾಡಿಕೊಳ್ಳಿ.

2. ಪಾವತಿ ಮಾಡುವಾಗ ವಿಶ್ವಾಸಾರ್ಹ ಬ್ಯಾಂಕ್‌ಗಳ ಮಷೀನ್‌ಗಳನ್ನೇ ಬಳಸಿ. ಸಂದೇಹ ಇರುವ ಕಡೆ ಕಾರ್ಡ್‌ ಬಳಸಬೇಡಿ.

3. ಟೋಕನೈಸೇಶನ್‌ ಅಂದರೆ ನೀವು ಆನ್‌ಲೈನ್ ಶಾಪಿಂಗ್ ಅಥವಾ ಆ್ಯಪ್‌ಗಳಲ್ಲಿ ಪಾವತಿ ಮಾಡುವಾಗ, ನಿಮ್ಮ 16 ಅಂಕಿಗಳ ಕಾರ್ಡ್ ಸಂಖ್ಯೆಯ ಬದಲಿಗೆ ಒಂದು ವಿಶಿಷ್ಟವಾದ ಟೋಕನ್ ಅನ್ನು ಬಳಸಿ. ಇದು ಹೆಚ್ಚು ಸುರಕ್ಷಿತ.

4. ಕ್ರೆಡಿಟ್‌ ಕಾರ್ಡ್‌ನ ವಿವರಗಳನ್ನು ಮೊಬೈಲ್‌ ಗ್ಯಾಲರಿಯಲ್ಲೋ, ಕಡಿಮೆ ಸುರಕ್ಷತೆ ಇರುವ ಕಡೆಯೋ ಇಟ್ಟುಕೊಳ್ಳಬೇಡಿ.

5. ಕ್ರೆಡಿಟ್‌ ಕಾರ್ಡ್‌ ಸ್ಟೇಟ್‌ಮೆಂಟ್‌ಗಳನ್ನು ಆಗಾಗ ಚೆಕ್‌ ಮಾಡುತ್ತಿರಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ; ಹೂಡಿಕೆದಾರರಿಗೆ 15 ಲಕ್ಷ ಕೋಟಿ ನಷ್ಟ
India Latest News Live: 5 ಕ್ರೆಡಿಟ್‌ ಕಾರ್ಡ್‌ ವಂಚನೆ ಬಗ್ಗೆ ಎಚ್ಚರದಿಂದಿರಿ!