ಖಾಸಗಿ ವಲಯದ ಯಸ್ ಬ್ಯಾಂಕ್ ತನ್ನ 48000 ಕೋಟಿ ರು. ಮೌಲ್ಯದ ಬ್ಯಾಡ್‌ಲೋನ್ (ವಸೂಲಾಗದ ಸಾಲ) ಅನ್ನು ಖಾಸಗಿ ಹಣಕಾಸು ಸಂಸ್ಥೆಯಾದ ಜೆ.ಸಿ.ಫ್ಲವರ್ಸ್ಗೆ ಮಾರಾಟ ಮಾಡಿದೆ.
ನವದೆಹಲಿ: ಖಾಸಗಿ ವಲಯದ ಯಸ್ ಬ್ಯಾಂಕ್ ತನ್ನ 48000 ಕೋಟಿ ರು. ಮೌಲ್ಯದ ಬ್ಯಾಡ್‌ಲೋನ್ (ವಸೂಲಾಗದ ಸಾಲ) ಅನ್ನು ಖಾಸಗಿ ಹಣಕಾಸು ಸಂಸ್ಥೆಯಾದ ಜೆ.ಸಿ.ಫ್ಲವರ್ಸ್ಗೆ ಮಾರಾಟ ಮಾಡಿದೆ. ಇದು ಇದುವರೆಗೆ ದೇಶದಲ್ಲಿ ಸಾಲ ವರ್ಗಾವಣೆಯ ಅತಿದೊಡ್ಡ ಪ್ರಕರಣ. ಯಸ್‌ಬ್ಯಾಂಕ್ ಎನ್‌ಪಿಎ ಪ್ರಮಾಣ ಶೇ.13ಕ್ಕೆ ತಲುಪಿ ಆತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ವಸೂಲಾಗದ ಸಾಲ ಮಾರಾಟ ಪ್ರಕ್ರಿಯೆಗೆ ಆರ್‌ಬಿಐ ಸೂಚಿಸಿತ್ತು. ಅದರಂತೆ ಇದೀಗ ಸಾಲ ಮಾರಾಟ ಮಾಡಲಾಗಿದ್ದು, ವಸೂಲಿ ಹೊಣೆ ಜೆ.ಸಿ.ಫ್ಲವರ್ಸ್ ವಹಿಸಿಕೊಳ್ಳಲಿದೆ. ಜೊತೆಗೆ ಯಸ್‌ಬ್ಯಾಂಕ್‌ಗೆ ನಿರ್ದಿಷ್ಟ ಹಣ ವರ್ಗಾವಣೆ ಮಾಡಲಿದೆ. ಈ ಪ್ರಕ್ರಿಯೆ ಪೂರ್ಣ ಬಳಿಕ ಯಸ್ ಬ್ಯಾಂಕ್‌ನ ಎನ್‌ಪಿಎ ಪ್ರಮಾಣ ಶೇ.1ಕ್ಕೆ ಇಳಿಯಲಿದೆ.
ಬ್ಯಾಂಕ್ ಠೇವಣಿ ದರ ಹೆಚ್ಚಳ
ನವದೆಹಲಿ: ಭಾರತೀಯ ರಿಸವ್‌ರ್ ಬ್ಯಾಂಕ್ ರೆಪೋ ದರ ಏರಿಸಿದ ಬಳಿಕ ವಿವಿಧ ಮಾದರಿಯ ಸಾಲದ ಬಡ್ಡಿದರವನ್ನು ಹೆಚ್ಚಿಸಿದ್ದ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಇದೀಗ ಠೇವಣಿಗಳ ಮೇಲಿನ ಬಡ್ಡಿದರವನ್ನೂ ಹೆಚ್ಚಳ ಮಾಡಿವೆ. ಈ ಮೂಲಕ ಠೇವಣಿದಾರರಿಗೆ ಸಿಹಿ ಸುದ್ದಿ ನೀಡಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.5ನಿಂದ 0.6ರಷ್ಟು ಏರಿಕೆ ಮಾಡಿದೆ. ಈ ಮೂಲಕ ಎಸ್‌ಬಿಐನ ಠೇವಣಿ ಬಡ್ಡಿದರ ಶೇ.6.75ಗೆ ಏರಿಕೆಯಾಗಿದೆ. ಇದು ಒಂದು ವರ್ಷ ಅಥವಾ 2 ವರ್ಷಕ್ಕಿಂತ ಕಡಿಮೆ ಅವಧಿ ಹಾಗೂ 2 ವರ್ಷ ಅಥವಾ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಅನ್ವಯವಾಗುತ್ತದೆ. 2 ವರ್ಷದೊಳಗಿನ ಠೇವಣಿಗೆ ಶೇ.0.5 ಮತ್ತು 3 ವರ್ಷದೊಳಗಿನ ಠೇವಣಿಗೆ ಶೇ.0.6ರಷ್ಟು ಬಡ್ಡಿದರವನ್ನು ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ಸಹ 2 ಕೋಟಿ ರು.ಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚು ಮಾಡುವುದಾಗಿ ಘೋಷಿಸಿದೆ. ಈ ಏರಿಕೆಯ ಮೂಲಕ ಬಡ್ಡಿದರ ಶೇ.7ಕ್ಕೆ ಏರಿಕೆಯಾಗಿದೆ. ಅಲ್ಲದೇ ಈಕ್ವಿಟಿಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹ ಬಡ್ಡಿದರವನ್ನು ಶೇ.7ಕ್ಕೆ ಏರಿಕೆ ಮಾಡಿದೆ.
Yes Bank - DHFL ಹಗರಣ: ಇಬ್ಬರು ಉದ್ಯಮಿಗಳಿಂದ 415 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಇಡಿ
ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ಹಗರಣ: ಮುಂಬೈ, ಪುಣೆಯಲ್ಲಿ ಸಿಬಿಐ ದಾಳಿ