ಹೆಚ್ಚಿದ ವಾಯು ಮಾಲಿನ್ಯ: ನಗರಗಳ ಸ್ವಚ್ಛ ಹವೆಗೆ 4400 ಕೋಟಿ

Kannadaprabha News   | Asianet News
Published : Feb 02, 2020, 09:49 AM IST
ಹೆಚ್ಚಿದ ವಾಯು ಮಾಲಿನ್ಯ: ನಗರಗಳ ಸ್ವಚ್ಛ ಹವೆಗೆ 4400 ಕೋಟಿ

ಸಾರಾಂಶ

ಹೊಗೆಗೆ ಕಡಿವಾಣ, ಸ್ವಚ್ಫ ಹವೆಗೆ ಪಣ|  ಮಾಲಿನ್ಯಕಾರಕ ಹಳೆಯ ಥರ್ಮಲ್‌ ವಿದ್ಯುತ್‌ ಘಟಕಗಳಿಗೆ ಬೀಗ| 2021ರ ಜನವರಿ 1 ರಿಂದ ಪರಿಣಾಮಕಾರಿ ಜಾರಿಗೆ ಕ್ರಮ| 

ನವದೆಹಲಿ(ಫೆ.02): 2015ರಲ್ಲಿ ಜಾಗತಿಕ ಬಿಸಿ ತಗ್ಗಿಸುವ ಉದ್ದೇಶದಿಂದ ಭಾರತ ಸರ್ಕಾರ ಮಾಡಿಕೊಂಡಿರುವ ‘ಪ್ಯಾರಿಸ್‌ ಒಪ್ಪಂದ’ಕ್ಕೆ ಅನುಗುಣವಾಗಿ, 2021ರ ಜನವರಿ 1 ರಿಂದ ಇದರ ಪರಿಣಾಮಕಾರಿ ಜಾರಿಗೆ ಕ್ರಮಗಳನ್ನು ಜರುಗಿಸಲು ನಿರ್ಧರಿಸಲಾಗಿದೆ. ವಿವಿಧ ಸಚಿವಾಲಯಗಳು ಈ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿವೆ.

ಇದರ ಅಂಗವಾಗಿ ಹಳೆಯ ಥರ್ಮಲ್‌ ವಿದ್ಯುತ್‌ ಘಟಕಗಳು ವ್ಯಾಪಕ ಹೊಗೆ ಉಗುಳುವ ಕಾರಣ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಹಳೆಯ ಥರ್ಮಲ್‌ ಘಟಕಗಳಿಂದ ಮಾಲಿನ್ಯ ಉಂಟಾಗುತ್ತಿದೆ. ನಿಗದಿತ ಮಾನದಂಡಕ್ಕಿಂತ ಹೆಚ್ಚು ಇಂಗಾಲದ ಹೊರಸೂಸುವಿಕೆ ಇದ್ದರೆ ಇಂತಹ ಘಟಕಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗುತ್ತದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಈ ಥರ್ಮಲ್‌ ಘಟಕಗಳು ಇರುವ ಜಾಗೆಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ನೆರವು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಗರಗಳ ಸ್ವಚ್ಛ ಹವೆಗೆ 4,400 ಕೋಟಿ

ಇಂದು ಮಿತಿಮೀರಿದ ಜನಸಂಖ್ಯೆ, ವಾಹನಗಳ ಸಂಖ್ಯೆ, ಉದ್ಯಮಗಳು- ಇತ್ಯಾದಿ ಕಾರಣದಿಂದ ನಗರಗಳ ವಾಯುಮಾಲಿನ್ಯ ಮಿತಿಮೀರಿದೆ. ಹೀಗಾಗಿ ಈ ನಗರಗಳ ಮಾಲಿನ್ಯ ತಗ್ಗಿಸಲು ಸರ್ಕಾರ 4,400 ಕೋಟಿ ರು. ಮೌಲ್ಯದ ಯೋಜನೆಯನ್ನು 2020-21ರಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

‘10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಸ್ವಚ್ಛ ಹವೆ ಇರುವಂತಾಗಲು 4,400 ಕೋಟಿ ರು. ವೆಚ್ಚದ ಯೋಜನೆ ಆರಂಭಿಸಲಾಗುತ್ತದೆ. ಯೋಜನೆಯ ಮಾನದಂಡಗಳನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಲಿದೆ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್