2,000 ರು. ನೋಟು ಬಳಕೆ ಭಾರೀ ಇಳಿಕೆ, ಮತ್ತೆ ಬ್ಯಾನ್‌ ಆಗುತ್ತಾ ನೋಟ್? ಆರ್‌ಬಿಐ ಹೇಳಿದ್ದೇನು?

By Suvarna NewsFirst Published May 28, 2022, 7:28 AM IST
Highlights

*  2000 ರು. ನೋಟುಗಳ ಚಲಾವಣೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ

* 500 ರು. ಚಲಾವಣೆ ಭರ್ಜರಿ ಏರಿಕೆ

* ನೋಟುಗಳ ಬಳಕೆ ಕಡಿಮೆ ಏಕೆ? ಆರ್‌ಬಿಐ ಕೊಟ್ಟ ಕಾರಣ

ಮುಂಬೈ(ಮೇ.28): 2000 ರು. ನೋಟುಗಳ ಚಲಾವಣೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2020ರಲ್ಲಿ ಶೇ.2.4ರಷ್ಟಿದ್ದ ಇದರ ಚಲಾವಣೆ, 2022ರ ಮಾರ್ಚ್‌ ಅಂತ್ಯದ ವೇಳೆ ಶೇ. 1.6ಕ್ಕೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

‘ಈ ವರ್ಷ ಮಾಚ್‌ರ್‍ ತಿಂಗಳಿನ ಅಂತ್ಯದವರೆಗೆ ಚಲಾವಣೆಯಲ್ಲಿರುವ ಒಟ್ಟಾರೆ ಎಲ್ಲ ಮುಖಬೆಲೆಯ ಒಟ್ಟು ಕರೆನ್ಸಿ ನೋಟುಗಳ ಸಂಖ್ಯೆಯು 13,053 ಕೋಟಿಯಷ್ಟಿದೆ. ಕಳೆದ ವರ್ಷ ಇದು 12,437 ಕೋಟಿಯಷ್ಟಿತ್ತು. ಆದರೆ, ಚಲಾವಣೆಯಲ್ಲಿರುವ 2000 ರು. ಮುಖಬೆಲೆಯ ನೋಟುಗಳ ಸಂಖ್ಯೆಯು 214 ಕೋಟಿಗೆ ಇಳಿಕೆಯಾಗಿದೆ. ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಪೈಕಿ 2000 ರು. ನೋಟುಗಳ ಪ್ರಮಾಣ ಕೇವಲ ಶೇ.1.6ರಷ್ಟಿದೆ. 2020ರಲ್ಲಿ ಇದರ ಪ್ರಮಾಣ ಶೇ.2.4 ಹಾಗೂ 2021ರಲ್ಲಿ ಶೇ.2 ರಷ್ಟಿತ್ತು’ ಎಂದಿದೆ.

‘ಆದರೆ ಚಲಾವಣೆಯಲ್ಲಿರುವ 500 ರು. ಮುಖಬೆಲೆಯ ನೋಟುಗಳ ಸಂಖ್ಯೆಯು 4,554.68 ಕೋಟಿಗೆ ಏರಿಕೆಯಾಗಿದ್ದು, ಚಲಾವಣೆಯಲ್ಲಿರುವ ಒಟ್ಟು ನಗದಿನ ಪ್ರಮಾಣದಲ್ಲಿ ಶೇ. 34.9 ರಷ್ಟುಪಾಲು ಹೊಂದಿದೆ’ ಎಂದು ಆರ್‌ಬಿಐ ತಿಳಿಸಿದೆ.

2022ರ ಮಾಚ್‌ರ್‍ಗೆ ಮುಕ್ತಾಯವಾದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು 31.05 ಲಕ್ಷ ಕೋಟಿ ರು.ನಷ್ಟಿದೆ ಎಂದು ತಿಳಿಸಿದೆ.

ಅಪನಗದೀಕರಣದ ಬಳಿಕ ಜಾರಿಗೆ ಬಂದ 2000 ರು. ನೋಟು ಅಕ್ರಮ ಹಣವನ್ನು ಕೂಡಿಟ್ಟುಕೊಳ್ಳುವವರಿಗೆ ಸಹಕಾರಿ ಎಂಬ ಆರೋಪವಿತ್ತು ಹಾಗೂ ಜನರಿಗೆ ಚಿಲ್ಲರೆ ಮಾಡಿಸಿಕೊಳ್ಳಲು ಈ ನೋಟು ತ್ರಾಸದಾಯಕ ಎಂಬ ದೂರು ಇತ್ತು. ಹೀಗಾಗಿ 2 ವರ್ಷದಿಂದ ಇದರ ಚಲಾವಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಇದರ ಬದಲು 500 ರು. ನೋಟನ್ನು ಉತ್ತೇಜಿಸುತ್ತಿದೆ.

click me!