
ದೇಶಾದ್ಯಂತ 1,253 ರೈಲ್ವೆ ಸ್ಟೇಷನ್‌ಗಳನ್ನು ನವೀಕರಣ (revamp) ಮಾಡಲು ಗುರುತಿಸಲಾಗಿದೆ. ಈ ಪೈಕಿ ಈಗಾಗಲೇ 1,215 ರೈಲ್ವೆ ಠಾಣೆಗಳನ್ನು ಅಭಿವೃದ್ಧಿಪಡಿಸಲಾಗಿದ್ದರೆ, ಬಾಕಿ ಉಳಿದ ರೈಲ್ವೆ ಸ್ಟೇಷನ್‌ಗಳನ್ನು ಸಹ 2022 - 23 ರೊಳಗೆ ಅಭಿವೃದ್ಧಿ (development) ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿಯೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಸಂಬಂಧದ ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ (Rajya Sabha) ಸಚಿವರು ಈ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರದ ‘ಆದರ್ಶ್’ (Adarsh) ಯೋಜನೆಯಡಿ ರೈಲ್ವೆ ಸ್ಟೇಷನ್‌ಗಳ ಅಂದಗೊಳಿಸುವಿಕೆ ಕಾರ್ಯ ಹಾಗೂ ಉನ್ನತೀಕರಣ ಕಾರ್ಯ ನಡೆಯುತ್ತಿದೆ. ಅಲ್ಲದೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಸಹ ಈ ರೈಲ್ವೆ ಸ್ಟೇಷನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದೂ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಾದರಿ (Model) , ಆಧುನಿಕ (Modern) ಹಾಗೂ ಆದರ್ಶ್ ಸ್ಟೇಷನ್‌ನಂತಹ ಹಲವು ಯೋಜನೆಗಳನ್ನು ರೈಲ್ವೆ ಸಚಿವಾಲಯ ರೂಪಿಸಿದ್ದು, ಭಾರತೀಯ ರೈಲ್ವೆಯ ರೈಲ್ವೆ ಸ್ಟೇಷನ್‌ಗಳ ಉನ್ನತೀಕರಣ ಹಾಗೂ ಅಂದಗೊಳಿಸುವಿಕೆ ಕಾರ್ಯ ನಡೆಸುತ್ತಿದೆ ಎಂದು ಅಶ್ವಿನಿ ವೈಷ್ಣವ್ ಬರವಣಿಗೆ ಮೂಲಕ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಬಿಜೆಪಿ ಸಂಸದ ನರಹರಿ ಅಮೀನ್ ಕೇಳಿದ ಪ್ರಶ್ನೆಗೆ ರೈಲ್ವೆ ಸಚಿವರು ಈ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ರೈಲ್ವೆ ನಿಲ್ದಾಣಗಳ ಪ್ರಮುಖ ಉನ್ನತೀಕರಣ (Major Upgradation of Railway Stations) ಎಂಬ ಹೊಸ ಯೋಜನೆಯೊಂದರ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಈ ಯೋಜನೆಯಡಿ 52 ನಿಲ್ದಾಣಗಳನ್ನು ಗುರುತಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ರೈಲ್ವೆ ಸ್ಟೇಷನ್‌ಗಳ ಅಂದಗೊಳಿಸುವಿಕೆಗೆ ಯೋಜಿತ ವೆಚ್ಚದ ಬಗ್ಗೆಯೂ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
Chikkamagaluru: ಬೀರೂರು ರೈಲ್ವೆ ಸ್ಟೇಷನ್ನಲ್ಲಿ ಕಡೆಗೂ ಲಿಫ್ಟ್ ಅಳವಡಿಕೆ
ಆದರ್ಶ್ ಸ್ಟೇಷನ್ ಸ್ಕೀಂನಡಿ ರೈಲ್ವೆ ಸ್ಟೇಷನ್‌ಗಳ ಅಂದಗಳಿಸುವಿಕೆ ಹಾಗೂ ಉನ್ನತೀಕರಣ ವೆಚ್ಚಕ್ಕೆ ಪ್ಲಾನ್ ಹೆಡ್ - 53 ಗ್ರಾಹಕ ಸೌಕರ್ಯಗಳು (Customer Amenities) ಅಡಿ ವೆಚ್ಚ ಮಾಡಲಾಗುವುದು. ಇದರ ಜತೆಗೆ, ಆರ್ಥಿಕ ವರ್ಷ 2021-22 ರಲ್ಲಿ 2,344.55 ಕೋಟಿ ರೂ. ಅನ್ನು ಪ್ಲಾನ್ ಹೆಡ್ - 53 ಅಡಿ ಹಂಚಿಕೆ ಮಾಡಲಾಗಿತ್ತು ಹಾಗೂ ಆರ್ಥಿಕ ವರ್ಷ 2022-23 ರಲ್ಲಿ ಪ್ಲಾನ್ ಹೆಡ್ - 53 ಅಡಿ 2,700 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದೂ ಅವರು ಹೇಳಿದರು.
ಆದರ್ಶ್ ಯೋಜನೆಯಡಿ ಗುಜರಾತ್‌ನ 32 ಸ್ಟೇಷನ್‌ಗಳ ಅಭಿವೃದ್ಧಿ..!
ಈ ಮಧ್ಯೆ, ಗುಜರಾತ್‌ನ ರೈಲ್ವೆ ಸ್ಟೇಷನ್‌ಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದ್ಯಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಗುಜರಾತ್ ರಾಜ್ಯದಲ್ಲಿ ಆದರ್ಶ್ ಯೋಜನೆಯಡಿ 32 ರೈಲ್ವೆ ಸ್ಟೇಷನ್‌ಗಳನ್ನು ಗುರುತಿಸಲಾಗಿತ್ತು ಎಂದೂ ಹೇಳಿದರು. ಆದರ್ಶ್ ಸ್ಟೇಷನ್ ಸ್ಕೀಂನಡಿ ಎಲ್ಲ 32 ಠಾಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ರೈಲ್ವೆ ಸಚಿವರು ಉತ್ತರಿಸಿದ್ದಾರೆ. ಅಲ್ಲದೆ, ರೈಲ್ವೆ ನಿಲ್ದಾಣಗಳ ಪ್ರಮುಖ ಉನ್ನತೀಕರಣ ಸ್ಕೀಂಗೆ ಗುಜರಾತ್‌ನ 5 ರೈಲ್ವೆ ಸ್ಟೇಷನ್‌ಗಳು ಆಯ್ಕೆಯಾಗಿವೆ ಎಂದೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡಿದ್ದಾರೆ. ಉಧ್ನಾ, ಸೂರತ್, ಸೋಮನಾಥ್, ಸಾಬರಮತಿ ಬಿಜಿ ಹಾಗೂ ಎಂಜಿ ಮತ್ತು ನ್ಯೂ ಭುಜ್ ಎಂದೂ ರೈಲ್ವೆ ಸಚಿವರು ವಿವರ ನೀಡಿದ್ದಾರೆ.
ಬಹುದಿನಗಳ ಕನಸು ಈಡೇರುವ ಆಶಾಭಾವನೆ: ಚಿಕ್ಕಬಳ್ಳಾಪುರ- ಗೌರಿಬಿದನೂರು ರೈಲು ಮಾರ್ಗ ಸಮೀಕ್ಷೆ
ಜುಲೈ 18 ರಂದು ಮಳೆಗಾಲದ ಅಧಿವೇಶನ ಆರಂಭವಾಗಿದ್ದು, ಆಗಸ್ಟ್ 13 ರವರೆಗೆ ನಡೆಯಲಿದೆ. ಈ ವೇಳೆ ನಾನಾ ವಿಷಯವಾಗಿ ಚರ್ಚೆಗಳು, ಪ್ರಶ್ನೋತ್ತರ ಅವಧಿ, ಮಸೂದೆಗಳ ಮಂಡನೆ ನಡೆಯುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.