
ಬೆಂಗಳೂರು(ಜ.05): ಸತತ ಕಳೆದ ಮೂರು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹವು 10 ಸಾವಿರ ಕೋಟಿ ರು. ದಾಟಿದ್ದು, ಇದು ರಾಜ್ಯಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಸಕಾರಾತ್ಮಕ ಬೆಳವಣಿಗೆಯು ನಾವು ಉತ್ತಮ ಬೆಳವಣಿಗೆಯ ಪಥದಲ್ಲಿದ್ದೇವೆ. ಕೋವಿಡ್‌ನ ನಕಾರಾತ್ಮಕ ಪ್ರಭಾವವು ಜಿಎಸ್‌ಟಿ ಸಂಗ್ರಹಕ್ಕೆ ಯಾವುದೇ ರೀತಿಯಲ್ಲಿಯೂ ಪೆಟ್ಟಾಗಿಲ್ಲ. ರಾಷ್ಟ್ರೀಯ ಆರ್ಥಿಕತೆಯನ್ನು ಉತ್ತೇಜಿಸಲು ಹೆಮ್ಮೆ ಪಡುತ್ತೇವೆ ಎಂದು ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ಜಿಎಸ್‌ಟಿ ಗಳಿಕೆ 15% ಏರಿಕೆ: .1.49 ಲಕ್ಷ ಕೋಟಿ ಸಂಗ್ರಹ
ಡಿಸೆಂಬರ್‌ನಲ್ಲಿ ದೇಶಾದ್ಯಂತ ಒಟ್ಟು 1.49 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಕರ್ನಾಟಕ 10,061 ಕೋಟಿ ರು. ಸಂಗ್ರಹಿಸಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 23,598 ಕೋಟಿ ರು. ಜಿಎಸ್‌ಟಿ ಸಂಗ್ರಹ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.