* ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ
* ಆದಾಯ ತೆರಿಗೆ ವಿನಾಯಿತಿ ಬದಲಾವಣೆ ಇಲ್ಲ
* ಬಜೆಟ್ ಮಂಡನೆಯಿಂದ ಯಾವುದು ಅಗ್ಗ, ಯಾವುದು ದುಬಾರಿ?
ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.
ಸರಳವಾಗಿ ಹೇಳುವುದಾದರೆ, ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ವೇತನದಾರರು, ರೈತರು ಮತ್ತು ಉದ್ಯಮಿಗಳಿಗೆ ಯಾವುದೇ ಮಹತ್ವದ ಉಡುಗೊರೆ ಸಿಕ್ಕಿಲ್ಲ. ಇನ್ನು ಡಿಜಿಟಲ್ ಕರೆನ್ಸಿ, ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದ ವಿಚಾರವಾಗಿ ಮಹತ್ವದ ಘೋಷಣೆ ಮಾಡಲಾಗಿದೆ. ಕೊರೋನಾ ಅವಧಿಯಲ್ಲಿ ಶಾಲಾ ಶಿಕ್ಷಣಕ್ಕೆ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್ ಶಿಕ್ಷಣಕ್ಕೆ ಸಹಾಯ ಮಾಡುವ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರ ಘೋಷಿಸಿದೆ. ಇದರೊಂದಿಗೆ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವುದಾಗಿಯೂ ಹಣಕಾಸು ಸಚಿವರು ಘೋಷಿಸಿದ್ದಾರೆ. ಆದರೆ, ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಮಧ್ಯಮ ವರ್ಗ ಮತ್ತು ಸಂಬಳದಾರರು ಮತ್ತೆ ನಿರಾಸೆಗೊಂಡಿದ್ದಾರೆ. ಆದಾಯ ತೆರಿಗೆ ರಿಟರ್ನ್ ಬದಲಾಯಿಸುವ ಸೌಲಭ್ಯವನ್ನು ಸರ್ಕಾರ ನೀಡಿದೆ. ಈಗ ಎರಡು ವರ್ಷದ ಐಟಿಆರ್ ಅನ್ನು ಅಪ್‌ಗ್ರೇಡ್ ಮಾಡಬಹುದು. ಸುಂಕ ಕಡಿತದಿಂದ ಬಟ್ಟೆ, ಚರ್ಮ, ಪಾಲಿಶ್ ಮಾಡಿದ ವಜ್ರ, ಮೊಬೈಲ್ ಫೋನ್, ಚಾರ್ಜರ್, ಕೃಷಿ ಉಪಕರಣಗಳು ಅಗ್ಗವಾಗಲಿದೆ. ಕಾರ್ಪೊರೇಟ್ ತೆರಿಗೆಯಂತೆ ಸಹಕಾರ ಸಂಸ್ಥೆಗಳಿಗೂ ಈಗ ಶೇ.15ರಷ್ಟು ತೆರಿಗೆ ವಿಧಿಸಲಾಗುವುದು. ಎನ್‌ಪಿಎಸ್‌ಗೆ ಶೇಕಡಾ 14 ರಷ್ಟು ಕೊಡುಗೆ ನೀಡಲು ರಾಜ್ಯ ನೌಕರರಿಗೆ ಸರ್ಕಾರ ವಿನಾಯಿತಿ ನೀಡಿದೆ.
undefined
Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ
ಯಾವುದು ಅಗ್ಗ?
- ಬಟ್ಟೆ
- ರತ್ನದ ಕಲ್ಲುಗಳು ಮತ್ತು ವಜ್ರಗಳು
- ಆಭರಣ
- ಮೊಬೈಲ್ ಫೋನ್‌ಗಳು
- ಮೊಬೈಲ್ ಫೋನ್ ಚಾರ್ಜರ್‌ಗಳು
- ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಸುಂಕಗಳು
- ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳ ಮೇಲಿನ ಕಸ್ಟಮ್ ಸುಂಕಗಳು
- ಸ್ಟೀಲ್ ಸ್ಕ್ರ್ಯಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕವನ್ನು 1 ವರ್ಷಕ್ಕೆ ವಿಸ್ತರಿಸಲಾಗಿದೆ
-ಔಷಧಗಳ ಬೆಲೆ
ದುಬಾರಿ
- ಎಲ್ಲಾ ಆಮದು ವಸ್ತುಗಳು
- ಛತ್ರಿಗಳ ಮೇಲಿನ ಸುಂಕ ಹೆಚ್ಚಳ