ಕೇಂದ್ರ ಬಜೆಟ್ ನಲ್ಲಿ ರೈತರ ಪರ ನಿಂತ ಸರ್ಕಾರ
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ
ರೈತರಿಗೆ ಸಹಾಯ ಮಾಡಲು ಕಿಸಾನ್ ಡ್ರೋನ್ ಗಳ ಬಳಕೆ
ನವದೆಹಲಿ (ಫೆ.1): ಕೃಷಿ ಕಾಯ್ದೆಗಳ ವಿರುದ್ಧವಾಗಿ ವರ್ಷಗಳ ಕಾಲ ನಡೆದ ರೈತ ಹೋರಾಟದಿಂದ ಕುಂದಿದ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಕೆಲ ಪ್ರಮುಖ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ. 2021-22 ರ ರಾಬಿ ಋತುವಿನಲ್ಲಿ ಸರ್ಕಾರದ ಬೃಹತ್ ಗೋಧಿ (wheat) ಸಂಗ್ರಹಣೆ ಮತ್ತು 2021-22 ರ ಖಾರಿಫ್ ಋತುವಿನಲ್ಲಿ ಭತ್ತದ (paddy) ಅಂದಾಜು ಸಂಗ್ರಹಣೆಯು 1208 ಮೆಟ್ರಿಕ್ ಟನ್ ಆಗಲಿದ್ದು, 1.63 ಲಕ್ಷ ರೈತರಿಂದ ಸರ್ಕಾರ ಗೋಧಿ ಹಾಗೂ ಭತ್ತದ ಖರೀದಿ ಮಾಡಲಿದೆ. ಅದರೊಂದಿಗೆ ಕೆನ್-ಬೆಟ್ವಾ ಲಿಂಕ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟಿದೆ. ಕೆನ್-ಬೆಟ್ವಾದೊಂದಿಗೆ ಕಾವೇರಿ ಸೇರಿದಂತೆ ದಕ್ಷಿಣದ ನದಿಗಳ ಜೋಡಿಣೆಯ ಪ್ರಸ್ತಾಪಕ್ಕೆ ಕರ್ನಾಟಕದ ರಾಜಕಾರಣಿಗಳು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Union Minister for Finance Nirmala Sitharaman) ಕೇಂದ್ರ ಬಜೆಟ್ (Union Budget 2022-23) ಅನ್ನು ಮಂಡನೆ ಮಾಡಿದರು. 44,605 ಕೋಟಿ ಅಂದಾಜು ವೆಚ್ಚದಲ್ಲಿ ಕೆನ್-ಬೆಟ್ವಾ ಲಿಂಕ್ ಯೋಜನೆಯ ಅನುಷ್ಠಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ ಪ್ರಯೋಜನಗಳನ್ನು ಒದಗಿಸುವುದು ಇದರ ಗುರಿಯಾಗಿದೆ. ಇದು 103 ಮೆಗಾವ್ಯಾಟ್ ಹೈಡ್ರೋ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯ ಜೊತೆಗೆ 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯನ್ನು ಸಹ ಒದಗಿಸುತ್ತದೆ. ಈ ಯೋಜನೆಗೆ ಆರ್‌ಇ 2021-22 ರಲ್ಲಿ ` 4,300 ಕೋಟಿ ಮತ್ತು 2022-23 ರಲ್ಲಿ ` 1,400 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ದಮಗಂಗಾ-ಪಿಂಜಾಲ್, ಪರ್-ತಾಪಿ-ನರ್ಮದಾ, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್ ಮತ್ತು ಪೆನ್ನಾರ್-ಕಾವೇರಿ ಎಂಬ ಐದು ನದಿ ಕೊಂಡಿಗಳ ಕರಡು ಡಿಪಿಆರ್‌ಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಪುನರುಚ್ಚರಿಸಿದರು. ಫಲಾನುಭವಿ ರಾಜ್ಯಗಳ ನಡುವೆ ಒಮ್ಮತದ ನಂತರ ಅನುಷ್ಠಾನಕ್ಕೆ ಕೇಂದ್ರವು ಬೆಂಬಲವನ್ನು ನೀಡುತ್ತದೆ.
ಮೊದಲ ಹಂತದಲ್ಲಿ ಗಂಗಾ ನದಿಯ (Ganga) ಉದ್ದಕ್ಕೂ 5-ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳನ್ನು ಕೇಂದ್ರೀಕರಿಸಿ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ದೇಶಾದ್ಯಂತ ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳ ಸಿಂಪರಣೆ ಮತ್ತು ಪೋಷಕಾಂಶಗಳಿಗೆ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು. ಎಣ್ಣೆಕಾಳುಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಎಣ್ಣೆಕಾಳುಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ತರ್ಕಬದ್ಧ ಮತ್ತು ಸಮಗ್ರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ದಾಖಲೆಯ 2.37 ಲಕ್ಷ ಕೋಟಿ ಮೊತ್ತವನ್ನು ನೇರ ಪಾವತಿಯ ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳು: ಪಿಪಿಪಿ ಮೋಡ್‌ನಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಖಾಸಗಿ ಅಗ್ರಿ-ಟೆಕ್ ಆಟಗಾರರು ಮತ್ತು ಕೃಷಿ ಮೌಲ್ಯ ಸರಪಳಿಯ ಮಧ್ಯಸ್ಥಗಾರರ ಜೊತೆಗೆ ಸಾರ್ವಜನಿಕ ವಲಯದ ಸಂಶೋಧನೆ ಮತ್ತು ವಿಸ್ತರಣಾ ಸಂಸ್ಥೆಗಳ ಒಳಗೊಳ್ಳುವಿಕೆ ಇರುತ್ತದೆ.
ಕಿಸಾನ್ ಡ್ರೋನ್ಸ್: ಹೊಸ ತಂತ್ರಜ್ಞಾನದ ಬಳಕೆಯನ್ನು ಎತ್ತಿ ಹಿಡಿದ ಹಣಕಾಸು ಸಚಿವರು, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳ ಸಿಂಪರಣೆ ಮತ್ತು ಪೋಷಕಾಂಶಗಳಿಗೆ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು. ರಾಗಿ ಸುಗ್ಗಿಯ ನಂತರದ ಮೌಲ್ಯವರ್ಧನೆ, ದೇಶೀಯ ಬಳಕೆಯನ್ನು ಹೆಚ್ಚಿಸುವುದು ಮತ್ತು ರಾಗಿ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ಬ್ರ್ಯಾಂಡಿಂಗ್ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುವುದು.
Budget 2022: ಹುಸಿಯಾದ ನಿರೀಕ್ಷೆ, ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಇಲ್ಲ
ಎಣ್ಣೆಬೀಜ ಉತ್ಪಾದನೆಗೆ ಯೋಜನೆ: ದೇಶೀಯ ಎಣ್ಣೆಬೀಜಗಳ ಉತ್ಪಾದನೆಯನ್ನು ಉತ್ತೇಜಿಸಲು ಸಮಗ್ರ ಯೋಜನೆಯನ್ನು ಜಾರಿಗೊಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. "ಎಣ್ಣೆಕಾಳುಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಎಣ್ಣೆಕಾಳುಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ತರ್ಕಬದ್ಧ ಮತ್ತು ಸಮಗ್ರ ಯೋಜನೆಯನ್ನು ಜಾರಿಗೊಳಿಸಲಾಗುವುದು" ಎಂದು ಅವರು ಹೇಳಿದರು.