Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ವಸತಿ!

By Suvarna News  |  First Published Feb 1, 2022, 1:02 PM IST
  • ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್‌ 
  • ಮನೆ ನಿರ್ಮಾಣಕ್ಕೆ 48,000 ಕೋಟಿ ರೂಪಾಯಿ
  • PMAY ಅಡಿಯಲ್ಲಿ 80 ಲಕ್ಷ ಮನೆ ನಿರ್ಮಾಣ

ನವದೆಹಲಿ(ಫೆ.01): ದೇಶದ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ(Union Budget 2022) ಕೈಗೆಟುಕುವ ದರದಲ್ಲಿ ಮನೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬರೋಬ್ಬರಿ 48,000 ಕೋಟಿ ರೂಪಾಯಿ ತೆಗೆದಿಟ್ಟಿದೆ. ಪ್ರಧಾನ ಮಂತ್ರಿ ಅವಾಸ್( PMAY) ಯೋಜನೆಯಡಿ 80 ಲಕ್ಷ ಮನೆ(House) ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್(Nirmala Sitharaman) 39.54 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ PMAY ಯೋಜನೆಯಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಮಹತ್ವದ ಪಾಲು ತೆಗೆದಿಟ್ಟಿದೆ.  ಕೇಂದ್ರದ ಈ ನಿರ್ಧಾರ  ದೇಶದಲ್ಲಿ ವಸತಿ ಯೋಜನೆಗೆ ಹೊಸ ಉತ್ತೇಜನ ನೀಡಲಿದೆ.

Tap to resize

Latest Videos

undefined

ಕೇಂದ್ರ ಬಜೆಟ್ 2022 LIVE ಅಪ್‌ಡೇಟ್

ದೇಶದ ಪ್ರತಿಯೊಬ್ಬರಿಗೂ ವಸತಿ ಸಿಗುವಂತಾಗಬೇಕು ಎಂದು ಈಗಾಗಲೇ ಕೇಂದ್ರ ಸರ್ಕಾರ PMAY ಯೋಜನೆ ಜಾರಿ ಮಾಡಿದೆ. 2022ರ ಒಳಗೆ ದೇಶದಲ್ಲಿನ ಪ್ರತಿಯೊಬ್ಬರೂ ಸೂರಿಲ್ಲದೆ ಇರಬಾರದು ಎಂದಿದೆ. ಇದಕ್ಕಾಗಿ 48,000 ಕೋಟಿ ರೂಪಾಯಿ ಮೊತ್ತದಲ್ಲಿ ವಸತಿ ಯೋಜನೆಗೆ ಮತ್ತಷ್ಟು ವೇಗ ನೀಡಲು ಕೇಂದ್ರ ಮುಂದಾಗಿದೆ. ಇದರಿಂದ 2022ರ ಅಂತ್ಯದಲ್ಲಿ ಕೇಂದ್ರ ಒಟ್ಟ 1 ಕೋಟಿ ವಸತಿ ನಿರ್ಮಾಣ ಮಾಡಲಿದೆ.

ವಸತಿ ಮತ್ತು ವ್ಯವಾಹರ ಸಚಿವಾಲಯದ ಅಂಕಿ ಅಂಶದ ಪ್ರಕಾರ, ದೇಶದಲ್ಲಿ 1.12 ಕೋಟಿ ಮನೆಗೆ ಬೇಡಿಕೆ ಬಂದಿದೆ. ಇನ್ನು ಕೇಂದ್ರ ಸರ್ಕಾರ ಒಟ್ಟು 1.14 ಕೋಟಿ ಮನೆ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಇದರಲ್ಲಿ 91.5 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿದೆ. ಇನ್ನು 53 ಲಕ್ಷ ಮನೆಗಳು ಈಗಾಗಲೇ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ವಿತರಿಸಲಾಗಿದೆ. ಇನ್ನು 17.3 ಲಕ್ಷ ಫಾನುಭವಿಗಳು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್(CLSS) ಮೂಲಕ ಸಾಲದ ಮೇಲೆ ಸಹಾಯಧನ ಪಡೆದಿದ್ದಾರೆ. ಈ 17.3 ಲಕ್ಷ ಮಂದಿಯಲ್ಲಿ 6.15 ಲಕ್ಷ ಫಲಾನುಭವಿಗಳು ಮಧ್ಯಮ ವರ್ಗದ ಜನರಾಗಿದ್ದಾರೆ.

Union Budget ಹಲವು ಪ್ರಥಮಗಳು: ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!

ಇನ್ನು ಕೇಂದ್ರ ಲೈಟ್ ಹೌಸ್ ಪ್ರಾಜೆಕ್ಟ್ ಅಡಿಯಲ್ಲಿ 6,368  ವಸತಿಗಳನ್ನು ಬರೋಬ್ಬರಿ 790.57 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕೇಂದ್ರ ಬಜೆಟ್ 2022 ಹೈಲೈಟ್ಸ್ :
ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಬಜೆಟ್ ಆಗಿದೆ. ದೇಶದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಡಿಜಿಟಲ್ ಕರೆನ್ಸಿ ಕುರಿತು ಕೇಂದ್ರ ಗಮನಹರಿಸಿದ್ದು, RBIನಿಂದ ಹೊಸ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಿದೆ. ಇನ್ನು ಕ್ರಿಪ್ಟೋ ಕರೆನ್ಸಿಯನ್ನು ತೆರಿಗೆ ಅಡಿಯಲ್ಲಿ ತರಲಾಗಿದೆ. ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರವು ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗಿದೆ. 

ರಾಜ್ಯಗಳಿಗೆ 1ಲಕ್ಷ ಕೋಟಿ ಬಡ್ಡಿರಹಿತ ಸಾಲ ಘೋಷಣೆ ಮಾಡಲಾಗಿದೆ. ಇದು ಕೇಂದ್ರದ ಯೋಜನೆಗಳಿಗೆ ಸಾಲದ ರೂಪದಲ್ಲಿ ರಾಜ್ಯಗಳಿಗೆ ಪಾಲು ಹಂಚಲಾಗುತ್ತದೆ. ಇನ್ನು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷ ಇದ್ದ ಅದೇ ತೆರಿಗೆಯನ್ನು ಮುಂದುವರಿಸಲಾಗಿದೆ.  ಇನ್ನು ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 18 ರಿಂದ 15ಕ್ಕೆ ಇಳಿಕೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಸಹಕಾರಿ ಹೆಚ್ಚುವರಿ ಶುಲ್ಕವನ್ನು 12 ಪ್ರತಿಶತದಿಂದ 7 ಪ್ರತಿಶತಕ್ಕೆ ಇಳಿಸಲಾಗುತ್ತದೆ.ಪಂಚ ರಾಜ್ಯ ಚುನಾವಣೆಯಿಂದ 5 ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇತ್ತು. ಆದರೆ ಯಾವುದೇ ಪೊಳ್ಳು ಭರವಸೆಗಳನ್ನು ನೀಡಿದೆ ಪ್ರಾಯೋಗಿಕವಾಗಿ ಬಜೆಟ್ ಮಂಡಿಸಲಾಗಿದೆ.

click me!