Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

By Suvarna News  |  First Published Feb 1, 2022, 5:40 PM IST
  • ಕೊರೋನಾ ಅವಧಿಯಲ್ಲಿ ಉದ್ಭವಿಸಿದ ಮಾನಸಿಕ ಆರೋಗ್ಯಸಮಸ್ಯೆ
  • ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಜೊತೆ ಕಾರ್ಯಕ್ರಮ
  • ದೂರವಾಣಿ-ಮಾನಸಿಕ (ಟೆಲಿ ಮೆಂಟಲ್‌) ಆರೋಗ್ಯ ಕಾರ್ಯಕ್ರಮ 

ನವದೆಹಲಿ(ಫೆ.01): ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ(mental health) ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ(Coronavirus) ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ(Union Budget 2022) ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್(NIMHANS) ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. 

ಸಂತತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sithraman) ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತಕ್ಕೆ(Health Sector) ಹೆಚ್ಚಿನ ಒತ್ತು ನೀಡಲಾಗಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸಲು ನಿಮ್ಹಾನ್ಸ್ ಆಸ್ಪತ್ರೆ(Bengaluru NIMHANS Hospital) ಜೊತೆ ರಾಷ್ಟ್ರೀಯ ಟೆಲಿ-ಮೆಂಟಲ್‌ ಆರೋಗ್ಯ ಕ್ರಾರ್ಯಕ್ರಮ ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ದೂರವಾಣಿ ಕಾರ್ಯಕ್ರಮವಾಗಿದ್ದು, ನಿಮ್ಹಾನ್ಸ್ ಜೊತೆ ಐಐಐಟಿಬಿ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ.

Tap to resize

Latest Videos

undefined

Budget Speechನಲ್ಲಿ ಸೀತಾರಾಮನ್ ಹೇಳಿದ ಮಹಾಭಾರತ ಕಾವ್ಯದ ಅರ್ಥವೇನು?

ಕೊರೋನಾ ವಕ್ಕರಿಸಿದ ಬಳಿಕ ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸುವ ಮೂಲಕ ದೇಶದ ಜನರ ಆರೋಗ್ಯದ ಕುರಿತು ಒತ್ತು ನೀಡಿದೆ.  

ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಪ್ರವೇಶವನ್ನು ಉತ್ತಮಗೊಳಿಸಲು, ‘ರಾಷ್ಟ್ರೀಯ ದೂರವಾಣಿ ಮಾನಸಿಕ ಆರೋಗ್ಯ ಕಾರ್ಯಕ್ರಮ’ವನ್ನು ಪ್ರಾರಂಭಿಸಲಾಗುವುದು. ಎಂದು  ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 

Union Budget 2022: ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ ಬಡ್ಡಿ ರಹಿತ ಸಾಲ

ರಾಷ್ಟ್ರೀಯ ಟೆಲಿ ಮೆಂಟಲ್‌ ಹೆಲ್ತ್‌ ಕಾರ್ಯಕ್ರಮದ ಬಗ್ಗೆ ವಿವರಿಸಿದ  ಹಣಕಾಸು ಸಚಿವೆ, ಈ ವಿಶೇಷ ಕಾರ್ಯಕ್ರಮವು 23 ದೂರವಾಣಿ ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳನ್ನು ಒಳಗೊಂಡಿರುತ್ತದೆ ಎಂದರು. ಬೆಂಗಳೂರು ಮೂಲದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಇದರ ನೋಡಲ್‌ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ-  ಬೆಂಗಳೂರು (ಐಐಐಟಿಬಿ) ಅಗತ್ಯ ತಾಂತ್ರಿಕ ಬೆಂಬಲವನ್ನು ನೀಡುತ್ತದೆ ಎಂದು ಸೀತಾರಾಮನ್ ಹೇಳಿದರು.

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್‌ ಮಾಂಡವಿಯಾ ಅವರು ಟ್ವಿಟರ್‌ನಲ್ಲಿಈ ವಿಶೇಷ ಕಾರ್ಯಕ್ರಮ ಘೋಷಣೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಾನಸಿಕ ಸಮಸ್ಯೆ ಗಂಭೀರತೆ ಅರಿತು ವಿಶೇಷ ಕಾರ್ಯಕ್ರಮ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದ ಹೇಳಿದ್ದಾರೆ.

ನಿಮ್ಹಾನ್ಸ್‌ ಅಡಿಯಲ್ಲಿ 23 ದೂರವಾಣಿ-ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳ ಜಾಲದೊಂದಿಗೆ ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ನೀಡಲಿದೆ ಎಂದು ಡಾ. ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಆರೋಗ್ಯ, ಶಿಕ್ಷಣ ಸೆಸ್  ವ್ಯವಹಾರ ವೆಚ್ಚವಾಗಿ ತೋರಿಸಲು ನಿರ್ಬಂಧ
ಆರೋಗ್ಯ ಮತ್ತು ಶಿಕ್ಷಣ ಸೆಸ್(ಕಿರು ತೆರಿಗೆ) ಅನ್ನು ವ್ಯವಹಾರ ವೆಚ್ಚವಾಗಿ ತೋರಿಸಲು ಸರ್ಕಾರದ ತೆರಿಗೆ ವ್ಯವಸ್ಥೆಯಲ್ಲಿ ಅನುಮತಿ ಇಲ್ಲ. ಸಂಸತ್ತಿನಲ್ಲಿಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್  ಸ್ಪಷ್ಟಪಡಿಸಿದ್ದಾರೆ. ವ್ಯಾಪಾರ ವ್ಯವಹಾರದ ಆದಾಯ ಲೆಕ್ಕಾಚಾರಗಳನ್ನು ಆದಾಯ ತೆರಿಗೆಯ ವೆಚ್ಚಕ್ಕೆ ತೋರಿಸಲು ಅನುಮತಿ ಇಲ್ಲ. ವ್ಯವಹಾರದಿಂದ ಬರುವ ಆದಾಯಕ್ಕೆ  ತೆರಿಗೆ ಮತ್ತು ಮೇಲ್ತೆರಿಗೆ(ಸರ್ ಚರ್ಜ್)  ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.

ನಿರ್ದಿಷ್ಟ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವ ತೆರಿಗೆದಾರನ 'ಆರೋಗ್ಯ ಮತ್ತು ಶಿಕ್ಷಣ ಸೆಸ್'ಗೆ ಹೆಚ್ಚುವರಿಯಾಗಿ ಮೇಲ್ತೆರಿಗೆ ವಿಧಿಸಲಾಗುತ್ತದೆ. ಕೆಲವು ನ್ಯಾಯಾಲಯಗಳು 'ಆರೋಗ್ಯ ಮತ್ತು ಶಿಕ್ಷಣ ಸೆಸ್' ಅನ್ನು ವ್ಯಾಪಾರ ವೆಚ್ಚವಾಗಿ ತೋರಲು ಅನುಮತಿ ನೀಡಿವೆ. ಇದು ಸರ್ಕಾರದ ಆಡಳಿತ ಉದ್ದೇಶಕ್ಕೆ ವಿರುದ್ಧವಾಗಿದೆ, ಆದಾಯ ಮತ್ತು ಲಾಭದ ಮೇಲಿನ ಯಾವುದೇ ಸರ್ಚಾರ್ಜ್ ಅಥವಾ ಸೆಸ್ ಅನ್ನು ವ್ಯಾಪಾರ ವೆಚ್ಚವಾಗಿ ತೋರಲು ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಪುನರುಚ್ಚರಿಸಿದರು.

click me!