Budget Speechನಲ್ಲಿ ಸೀತಾರಾಮನ್ ಹೇಳಿದ ಮಹಾಭಾರತ ಕಾವ್ಯದ ಅರ್ಥವೇನು?

By Suvarna NewsFirst Published Feb 1, 2022, 5:04 PM IST
Highlights

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಮಹಾಭಾರತದ ಶಾಂತಿಪರ್ವದ ಪದ್ಯವೊಂದರ ತುಣಕನ್ನು ಪ್ರಸ್ತಾಪಿಸಿದರು. ಯಾವುದದು, ಅದರ ಅರ್ಥವೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್(Union Budget) 2022-23 ಅನ್ನು ಮಂಡಿಸುತ್ತಿರುವಾಗ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಅಧ್ಯಾಯಗಳಲ್ಲಿ 12ನೆಯದಾದ ಶಾಂತಿಪರ್ವ(Book of Peace)ದಲ್ಲಿ ಬರುವ ಪದ್ಯವೊಂದನ್ನು ಪ್ರಸ್ತಾಪಿಸಿದರು. 
ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ  ಮಹಾಭಾರತವನ್ನು ಉಲ್ಲೇಖಿಸಿ, ಶಾಂತಿ ಪರ್ವದ ಪದ್ಯವೊಂದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳಿದರು. 

'ಮಹಾಭಾರತದ ಪುಟ್ಟ ಪದ್ಯವೊಂದನ್ನು ತಂದಿದ್ದೇನೆ. ಭಾಷಣದ ಮೇಲೆ ಗಮನ ಹರಿಸಬೇಕಿರುವುದರಿಂದ ಪೂರ್ತಿ ಪದ್ಯ ಓದುತ್ತಾ ಕೂರುವುದಿಲ್ಲ,' ಎನ್ನುತ್ತಲೇ ಮಾತು ಆರಂಭಿಸಿದ ಸೀತಾರಾಮನ್, 'ರಾಜನಾದವನು ಜನರ ಯೋಗಕ್ಷೇಮಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಬೇಕು. ಇದಕ್ಕಾಗಿ ಅವನು ಧರ್ಮಕ್ಕೆ ಅನುಗುಣವಾಗಿ ಬೇಜವಾಬ್ದಾರಿ ಬಿಟ್ಟು ಆಡಳಿತ ನಡೆಸಬೇಕು. ತೆರಿಗೆಗಳನ್ನು ಸರಿಪಡಿಸಬೇಕು,' ಎಂದರು. 
ಈ ಮಾತು ಶಾಂತಿ ಪರ್ವದ 11:72ನೇ ಶ್ಲೋಕದ ತರ್ಜುಮೆಯಾಗಿದೆ. 
ಇದರೊಂದಿಗೆ ನಿರ್ಮಲಾ ಸೀತಾರಾಮನ್, ಬಹಳಷ್ಟು ನೇರ ತೆರಿಗೆ ಸುಧಾರಣೆ(direct tax reforms)ಗಳ ವಿಷಯ ಪ್ರಸ್ತಾಪಿಸಿದರು. 

ಶಾಂತಿಪರ್ವವು ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹನ್ನೆರಡನೆಯದಾಗಿದೆ. ಸಾಮಾನ್ಯವಾಗಿ ಕೇವಲ ಇದೊಂದು ಪರ್ವವೇ ಮೂರು ಉಪ ಪುಸ್ತಕಗಳನ್ನು ಹೊಂದಿರುತ್ತದೆ. ಇದರಲ್ಲಿ 365 ಅಧ್ಯಾಯಗಳಿವೆ. ಇದರ ವಿಮರ್ಶಾತ್ಮಕ ಆವೃತ್ತಿಯು ಮೂರು ಉಪ-ಪುಸ್ತಕಗಳು ಮತ್ತು 353 ಅಧ್ಯಾಯಗಳನ್ನು ಒಳಗೊಂಡಿದೆ. ಇದು 18 ಪರ್ವಗಳಲ್ಲೇ ಅತಿ ದೊಡ್ಡ ಪರ್ವವಾಗಿದೆ. 

ಪಾಂಡವರು ಹಾಗೂ ಕೌರವರ ನಡುವಿನ ಯುದ್ಧ ಮುಗಿದ ಬಳಿಕ ಈ ಶಾಂತಿ ಪರ್ವದ ಕತೆ ಆರಂಭವಾಗುತ್ತದೆ. ಎರಡೂ ಕಡೆಯವರು ಯುದ್ಧ ನಿಲ್ಲಿಸಿ ಯುಧಿಷ್ಠಿರನು ಪಾಂಡವ ಆಡಳಿತದ ರಾಜನಾಗುತ್ತಾನೆ. ಈ ಶಾಂತಿ ಪರ್ವವು ಆಡಳಿತ ಮಾಡುವವನ(ರಾಜನ) ಕರ್ತವ್ಯಗಳು, ಜವಾಬ್ದಾರಿಗಳು, ಧರ್ಮ, ಉತ್ತಮ ಆಡಳಿತ ಹೇಗಿರಬೇಕೆಂಬ ಬಗ್ಗೆ ಮಾತನಾಡುತ್ತದೆ. ಭೀಷ್ಮ(Bhishma) ಹಾಗೂ ಇತರೆ ಋಷಿಗಳು ಈ ಬಗ್ಗೆ ಮಾತನಾಡುತ್ತಾರೆ. ಈ ಪರ್ವದಲ್ಲಿ ಸಸ್ಯಾಹಾರಿಯಾದ ವಿಶ್ವಾಮಿತ್ರನು ಕ್ಷಾಮದ ಸಂದರ್ಭದಲ್ಲಿ ಹಸಿವು ತಾಳಲಾಗದೆ ಮಾಂಸ ಕದಿಯುವುದು, ಬೇಟೆಗಾರ ಮತ್ತು ಪಾರಿವಾಳಗಳು(the fowler and pigeons) ಸೇರಿದಂತೆ ಅನೇಕ ಸಾಂಕೇತಿಕ ಕತೆಗಳನ್ನು ಹೇಳಲಾಗಿದೆ. 

Temple Special: ಇಲ್ಲಿನ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ವಾಪಸ್ ಬರೋದು ಗ್ಯಾರಂಟಿ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಪದ್ಯಗಳ ಉಲ್ಲೇಖ ಮಾಡಿದ್ದು ಇದೇ ಮೊದಲ ಬಾರಿಯೇನಲ್ಲ. ಹಿಂದೆಯೂ ಬಜೆಟ್ ಭಾಷಣದಲ್ಲಿ, ರಬೀಂದ್ರನಾಥ್ ಠಾಗೋರರ ಪದ್ಯದ ಒಂದೆರಡು ಸಾಲನ್ನು ಉಲ್ಲೇಖಿಸಿದ್ದರು. ಅದು ಇಂತಿತ್ತು- ನಂಬಿಕೆ ಎಂಬುದು ಬೆಳಕನ್ನು ಅನುಭವಿಸಿ ಇನ್ನೂ ಮುಂಜಾವಿನ ಕತ್ತಲೆ ಇರುವಾಗಲೇ ಹಾಡುವ ಹಕ್ಕಿಯಾಗಿದೆ. 
ಈ ಸಾಲು ಠಾಗೋರರ 'ಫೈರ್‌ಫ್ಲೈಸ್' ಎಂಬ ಪದ್ಯದ್ದಾಗಿತ್ತು. 
ಇಷ್ಟೇ ಅಲ್ಲದೆ, ಅದೇ ಬಜೆಟ್ ಭಾಷಣದಲ್ಲಿ ಸೀತಾರಾಮನ್ ತಿರುಕ್ಕುರಲ್ ಪದ್ಯಗಳ ಸಾಲುಗಳನ್ನೂ ಹೇಳಿದ್ದರು- 'ರಾಜ ಅಥವಾ ಆಡಳಿತಗಾರನು ಸಂಪತ್ತನ್ನು ಸೃಷ್ಟಿಸತ್ತಾನೆ, ಸಂಪಾದಿಸುತ್ತಾನೆ, ಕಾಪಾಡುತ್ತಾನೆ ಮತ್ತು ತನ್ನೆಲ್ಲ ಪ್ರಜೆಗಳ ಒಳಿತಿಗಾಗಿ ಅದನ್ನು ಹಂಚುತ್ತಾನೆ. '

Union Budget 2022: 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ: ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್!

ಈ ಪದ್ಯವನ್ನು ತಿರುವಳ್ಳುವರ್ ತಮಿಳಿನಲ್ಲಿ ಬರೆದಿದ್ದರು. ಈ ಕಾವ್ಯದಲ್ಲಿ 1330 ಸಣ್ಣ ಜೋಡಿ ಸಾಲು(short couplets)ಗಳಿದ್ದು, ಎಲ್ಲವೂ 7 ಪದಗಳನ್ನು ಒಳಗೊಂಡಿವೆ.  ಇವನ್ನು 133 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಈ ಮಹಾಕಾವ್ಯವನ್ನು ಮೂರು ಪುಸ್ತಕಗಳಾಗಿ ವಿಂಗಡಿಸಲಾಗಿದ್ದು, ಪುಣ್ಯ, ಸಂಪತ್ತು ಹಾಗೂ ಪ್ರೀತಿಯ ಬಗ್ಗೆ ಒಂದೊಂದು ಪುಸ್ತಕ ಪಾಠ ಹೇಳುತ್ತದೆ. 

click me!