Latest Videos

Economic Survey 2022: 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಚೇತರಿಕೆ; ಮಾಸಿಕ 1ಲಕ್ಷ ಕೋಟಿ ರೂ. GST ಸಂಗ್ರಹ

By Suvarna NewsFirst Published Jan 31, 2022, 3:01 PM IST
Highlights

*2022-23ನೇ ಸಾಲಿನಲ್ಲಿ ಶೇ. 8.0-8.5 ಜಿಡಿಪಿ ಬೆಳವಣಿಗೆ ದಾಖಲಿಸೋ ಸ್ಥಿತಿಯಲ್ಲಿ ದೇಶದ ಆರ್ಥಿಕತೆ
*ಕೋವಿಡ್ ಲಸಿಕೆಯನ್ನು ಆರ್ಥಿಕ ಸೂಚ್ಯಂಕವನ್ನಾಗಿ ಪರಿಗಣಿಸಬಹುದು
*ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ 157 ಕೋಟಿ ಕೋವಿಡ್ ಲಸಿಕೆಗಳ ವಿತರಣೆ
*ದೇಶದ ಆರ್ಥಿಕತೆಗೆ ಚೇತರಿಕೆ ನೀಡಿದ ಲಸಿಕಾ ಕಾರ್ಯಕ್ರಮ 
 

Business Desk: 2021-22ನೇ ಆರ್ಥಿಕ ಸಾಲಿನಲ್ಲಿ ಈ ತನಕದ ಅಂಕಿಅಂಶಗಳ ಪ್ರಕಾರ ಕೇಂದ್ರ  ಸರ್ಕಾರದ ಆದಾಯದಲ್ಲಿ(Income) ಸಾಕಷ್ಟು ಚೇತರಿಕೆ ಕಂಡುಬಂದಿದೆ ಎಂದು 2022ನೇ ಸಾಲಿನ ಆರ್ಥಿಕ ಸಮೀಕ್ಷೆ(Economic Survey) ಹೇಳಿದೆ. 2021 ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಕಂದಾಯ ಸ್ವೀಕೃತಿಯಲ್ಲಿ ಶೇ.67.2 ಏರಿಕೆ ಕಂಡಿದೆ. 2021-22ನೇ ಸಾಲಿನ ಬಜೆಟ್ ನಲ್ಲಿ ಶೇ. 9.6 ಪ್ರಗತಿ ಅಂದಾಜಿಸಲಾಗಿತ್ತು. ನೇರ (Direct) ಹಾಗೂ ಪರೋಕ್ಷ (Indirect) ತೆರಿಗೆಗಳ ಸಂಗ್ರಹದಲ್ಲಿ (Tax Collection) ಕೂಡ ಹೆಚ್ಚಳ ಕಂಡುಬಂದಿದೆ. ಮಾಸಿಕ ಜಿಎಸ್ ಟಿ (GST) ಸಂಗ್ರಹವು  2021ರ ಜುಲೈನಿಂದ ಒಂದು ಲಕ್ಷ ಕೋಟಿ ರೂ. ದಾಟುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. 

ಶೇ. 8.0-8.5 ಜಿಡಿಪಿ ಬೆಳವಣಿಗೆ
ಭಾರತದ ಆರ್ಥಿಕತೆಯು 2022-23ನೇ ಸಾಲಿನಲ್ಲಿ ಶೇ. 8.0-8.5 ಜಿಡಿಪಿ ಬೆಳವಣಿಗೆ ದಾಖಲಿಸೋ ಸ್ಥಿತಿಯಲ್ಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಮುಂದಿನ ದಿನಗಳಲ್ಲಿ ಕೋವಿಡ್ -19 ಪೆಂಡಾಮಿಕ್ ಗೆ ಸಂಬಂಧಿಸಿದ ಯಾವುದೇ ಪ್ರಮುಖ  ಆರ್ಥಿಕ ಬಿಕ್ಕಟ್ಟುಗಳು ಎದುರಾಗೋದಿಲ್ಲ ಎಂಬ ನಂಬಿಕೆ ಮೇಲೆ ಈ ಅಂದಾಜು ಮಾಡಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಈ ಆರ್ಥಿಕ ಸಾಲಿನಲ್ಲಿ ಮಳೆಗಾಲ ಕೂಡ ಸಾಮಾನ್ಯವಾಗಿರಲಿದೆ. ಇದರ ಜೊತೆಗೆ ಜಗತ್ತಿನ ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಆರ್ಥಿಕತೆಯಲ್ಲಿನ ದ್ರವ್ಯತೆ ಅಥವಾ ಹೆಚ್ಚುವರಿ ಹಣ ಹಿಂಪಡೆಯೋ ಪ್ರಕ್ರಿಯೆ ಪ್ರಾರಂಭಿಸಿವೆ. ಹೀಗಾಗಿ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರೋ ವಿಶ್ವಾಸವಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 70-75 ಅಮೆರಿಕನ್ ಡಾಲರ್ ಇದೆ.  ಜಾಗತಿಕ ಪೂರೈಕೆ ಸರಳಪಳಿಯಲ್ಲಿನ ಬಿಕ್ಕಟ್ಟುಗಳು ಕೂಡ ಈ ವರ್ಷ ನಿಧಾನವಾಗಿ ಬಗೆಹರಿಯೋ ವಿಶ್ವಾಸವಿದೆ.   ಈ ಎಲ್ಲ ಅಂಶಗಳನ್ನು ಗಮನಿಸಿ ಭಾರತದ ಆರ್ಥಿಕತೆ ಕೂಡ ಈ ಬಾರಿ ಉತ್ತಮ ಮಟ್ಟದಲ್ಲಿರದೆ ಎಂದು ಸಮೀಕ್ಷೆ ಅಂದಾಜಿಸಿದೆ. 

Economic Survey 2022:ಪ್ರಸಕ್ತ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.2 ನಿರೀಕ್ಷೆ

ಲಸಿಕಾ ಕಾರ್ಯಕ್ರಮ (Vaccination Programme) ಯಶಸ್ವಿ
ದೇಶದಲ್ಲಿ ಕೋವಿಡ್ -19  (COVID-19) ಲಸಿಕಾ ಕಾರ್ಯಕ್ರಮದಡಿಯಲ್ಲಿ ದೊಡ್ಡ ಪ್ರಮಾಣದ ಜನರನ್ನು ಕವರ್ ಮಾಡಲಾಗಿದೆ. ಇದ್ರಿಂದ ದೇಶದ ಆರ್ಥಿಕತೆ ಮತ್ತೆ ಹಳಿಗೆ ಬರಲು ಸಾಧ್ಯವಾಯಿತು. ಪೂರೈಕೆ ಸರಳಪಳಿಯಲ್ಲಿ ಕೂಡ ಚೇತರಿಕೆ ಕಂಡುಬರಲು ಇದು ಕಾರಣವಾಗಿದೆ. ಭಾರತದ ಆರ್ಥಿಕತೆ ಇಂದು ಉತ್ತಮ ಸ್ಥಿತಿಯಲ್ಲಿದ್ದು, 2022-23ನೇ ಸಾಲಿನಲ್ಲಿ ಶೇ.8.0-8.5 ಜಿಡಿಪಿ ಬೆಳವಣಿಗೆ ದಾಖಲಿಸೋ ಇರೀಕ್ಷೆಯಿದೆ.

ಕೋವಿಡ್ ಲಸಿಕೆ ಆರ್ಥಿಕ ಸೂಚ್ಯಂಕ 
ಕೋವಿಡ್ -19  (COVID-19) ಲಸಿಕಾ ಕಾರ್ಯಕ್ರಮ  ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಜವಾಬ್ದಾರಿಯಷ್ಟೇ ಆಗಿಲ್ಲ, ಬದಲಿಗೆ ದೇಶದ ಆರ್ಥಿಕ ಚೇತರಿಕೆಗೆ ಕೂಡ ಅತ್ಯಗತ್ಯ ಸಾಧನವಾಗಿದೆ. ಅದ್ರಲ್ಲೂ ಸಂಪರ್ಕ ಸಹಿತ ಸೇವೆಗಳಿಗೆ ಸಂಬಂಧಿಸಿದ ಉದ್ಯಮಗಳ ಚೇತರಿಕೆಗೆ ಇದು ಅತೀಅವಶ್ಯ. ಹೀಗಾಗಿ ಲಸಿಕಾ ಕಾರ್ಯಕ್ರಮವನ್ನು ದೊಡ್ಡ ಆರ್ಥಿಕಾ ಸೂಚ್ಯಂಕವನ್ನಾಗಿ (macro-economic indicator) ಪರಿಗಣಿಸಬೇಕಾದ ಅಗತ್ಯವಿದೆ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ 157 ಕೋಟಿ ಕೋವಿಡ್ ಲಸಿಕೆಗಳನ್ನು ವಿತರಿಸಲಾಗಿದೆ. ಇದ್ರಲ್ಲಿ 91 ಕೋಟಿ ಜನರು ಮೊದಲ ಡೋಸ್ ಪಡೆದಿದ್ದರೆ, 66 ಕೋಟಿ ಜನರು ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. ಬೂಸ್ಟರ್ ಹಾಗೂ 15-18 ವಯೋಮಿತಿಯವರಿಗೆ ಲಸಿಕೆ ನೀಡೋ ಪ್ರಕ್ರಿಯೆಗೆ ಕೂಡ ಚಾಲನೆ ನೀಡಲಾಗಿದೆ. 

Union Budget 2022 ಆರ್ಥಿಕ ಸಮೀಕ್ಷೆಯಲ್ಲಿ ಶೇ.8.5 ಜಿಡಿಪಿ ಪ್ರಗತಿ ಸೂಚಿಸಿದ ಬೆನ್ನಲ್ಲೇ ಷೇರು ಸೂಚ್ಯಂಕ 1,000 ಅಂಕ ಏರಿಕೆ

ಜಗತ್ತಿನಲ್ಲಿ ಹಣದುಬ್ಬರ ದರ ಹೆಚ್ಚಳ
ಕೋವಿಡ್ -19 ರೂಪಾಂತರಿ ಒಮಿಕ್ರಾನ್ ಹಾವಳಿ ಜಗತ್ತಿನಾದ್ಯಂತ ಹೆಚ್ಚಿದೆ. ಬಹುತೇಕ ರಾಷ್ಟ್ರಗಳಲ್ಲಿ ಹಣದುಬ್ಬರ (Inflation) ದರ ಹೆಚ್ಚಳವಾಗಿದೆ. ಪರಿಣಾಮ ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ತಮ್ಮ ಆರ್ಥಿಕತೆಯಲ್ಲಿನ ದ್ರವ್ಯತೆ ( liquidity)ಅಥವಾ ಹೆಚ್ಚುವರಿ ಹಣ ಹಿಂಪಡೆಯೋ  ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿವೆ. ಇಂಥ ಸಂದರ್ಭದಲ್ಲಿ ಭಾರತದ ದೊಡ್ಡ ಆರ್ಥಿಕ ಸ್ಥಿರತೆ ಸೂಚ್ಯಂಕಗಳು ಹಾಗೂ ಆರ್ಥಿಕತೆ ಮೇಲಿನ ಒತ್ತಡವನ್ನು ತಗ್ಗಿಸುವಲ್ಲಿ ಅವುಗಳ ಸಾಮರ್ಥ್ಯವನ್ನು ಗಮನಿಸೋದು ಅತ್ಯಗತ್ಯ. 
 

click me!